ಕರ್ನಾಟಕ

karnataka

ETV Bharat / international

ವಿಮಾನದಿಂದ ಬಿದ್ದು ಸಾವನ್ನಪ್ಪಿದ ಆಫ್ಘನ್​ ಫುಟ್​ಬಾಲ್​​ ತಂಡದ ಉದಯೋನ್ಮುಖ ಆಟಗಾರ

19 ವರ್ಷದ ಝಾಕಿ ಅನ್ವರಿ ತಾಲಿಬಾನಿಗಳ ಭೀತಿಗೆ ಒಳಗಾಗಿ ಬೇರೆ ರಾಷ್ಟ್ರಕ್ಕೆ ಪಲಾಯನ ಮಾಡಲು ಮುಂದಾಗಿದ್ದನು. ಈ ವೇಳೆ​ ಕಾಬೂಲ್​ ವಿಮಾನ ನಿಲ್ದಾಣದಲ್ಲಿದ್ದ ಸಿ-17 ಗ್ಲೋಬ್​ ಮಾಸ್ಟರ್ ಸೇನಾ ವಿಮಾನದ​ ಲ್ಯಾಂಡಿಂಗ್ ಗೇರ್ ಬಳಿ ಹತ್ತಿದ್ದನು ಎನ್ನಲಾಗಿದೆ.

Afghan footballer died after falling from US plane leaving Kabul
ವಿಮಾನದಿಂದ ಬಿದ್ದು ಸಾವನ್ನಪ್ಪಿದ ಅಫ್ಘನ್​ ಫುಟ್​ಬಾಲ್​​ ತಂಡದ ಉದಯೋನ್ಮುಖ ಆಟಗಾರ

By

Published : Aug 20, 2021, 3:54 AM IST

Updated : Aug 20, 2021, 6:54 AM IST

ದೋಹಾ, ಕತಾರ್: ಅಫ್ಘಾನಿಸ್ತಾನ ತಾಲಿಬಾನಿಗಳ ವಶವಾದ ನಂತರ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ, ಉದಯೋನ್ಮುಖ ಫುಟ್​ಬಾಲ್ ಆಟಗಾರ ಝಾಕಿ ಅನ್ವರಿ ಅಮೆರಿಕ ಸೇನಾ ವಿಮಾನದಿಂದ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಫ್ರಾನ್ಸ್​ 24 ಗುರುವಾರ ವರದಿ ಮಾಡಿದೆ.

ಆಫ್ಘನ್ ರಾಷ್ಟ್ರೀಯ ಫುಟ್​ಬಾಲ್ ತಂಡ ಈ ಸುದ್ದಿಯನ್ನು ತನ್ನ ಫೇಸ್​ಬುಕ್​​ ಪೇಜ್​ನಲ್ಲಿ ಹಂಚಿಕೊಂಡಿದ್ದು, ಆಫ್ಘಾನಿಸ್ತಾನ ದೈಹಿಕ ಶಿಕ್ಷಣ ಮತ್ತು ಕ್ರೀಡೆಗಳ ನಿರ್ದೇಶನಾಲಯ ಝಾಕಿ ಅನ್ವರಿ ಸಾವನ್ನು ದೃಢಪಡಿಸಿದೆ.

19 ವರ್ಷದ ಝಾಕಿ ಅನ್ವರಿ ತಾಲಿಬಾನಿಗಳ ಭೀತಿಗೆ ಒಳಗಾಗಿ ಬೇರೆ ರಾಷ್ಟ್ರಕ್ಕೆ ಪಲಾಯನ ಮಾಡಲು ಮುಂದಾಗಿದ್ದನು. ಈ ವೇಳೆ​ ಕಾಬೂಲ್​ ವಿಮಾನ ನಿಲ್ದಾಣದಲ್ಲಿದ್ದ ಸಿ-17 ಗ್ಲೋಬ್​ ಮಾಸ್ಟರ್ ಸೇನಾ ವಿಮಾನದ​ ಲ್ಯಾಂಡಿಂಗ್ ಗೇರ್ ಬಳಿ ಹತ್ತಿದ್ದನು ಎಂದು ಹೇಳಲಾಗಿದೆ.

ಸೋಮವಾರ ವಿಮಾನದಿಂದ ಉರುಳಿದ ಮೂವರು ವ್ಯಕ್ತಿಗಳಲ್ಲಿ ಝಾಕಿ ಅನ್ವರಿ ಸೇರಿದ್ದು, ಆತನ ಸಾವಿಗೆ ​ಸಾರ್ವಜನಿಕರು, ಸ್ನೇಹಿತರು ಮತ್ತು ಫುಟ್​ಬಾಲ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಇನ್ನು ಝಾಕಿ ಅನ್ವರಿ 16 ವರ್ಷಕ್ಕೆ ಅಫ್ಘಾನಿಸ್ತಾನದ ರಾಷ್ಟ್ರೀಯ ಯುವ ತಂಡಕ್ಕೆ ಆಯ್ಕೆಯಾಗಿದ್ದು, ಇಲ್ಲಿಯವರೆಗೆ ಅನೇಕ ಪಂದ್ಯಗಳಲ್ಲಿ ತನ್ನ ಛಾಪು ಮೂಡಿಸಿದ್ದನು.

ಅಫ್ಘಾನಿಸ್ತಾನದ ಕಾಬೂಲ್ ವಿಮಾನ ನಿಲ್ದಾಣದಲ್ಲಿ ವಿಮಾನ ಹತ್ತುವ ವೇಳೆ ಉಂಟಾದ ಕಾಲ್ತುಳಿತದಲ್ಲಿ ಮತ್ತು ವಿಮಾನ ಹತ್ತಿದ ನಂತರ ನಡೆದ ಅವಘಡಗಳಲ್ಲಿ ಸುಮಾರು 10 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ:ವಿದ್ಯಾರ್ಥಿನಿಯರಿಗೆ ಅಶ್ಲೀಲ ವಿಡಿಯೋ ತೋರಿಸಿ ಮಾಡಬಾರದ್ದನ್ನು ಮಾಡಿದ ಶಿಕ್ಷಕ ಅಂದರ್​

Last Updated : Aug 20, 2021, 6:54 AM IST

ABOUT THE AUTHOR

...view details