ಜಕಾರ್ತ(ಇಂಡೋನೇಷ್ಯಾ):ಇಂಡೋನೇಷ್ಯಾದ ಬಂದಾ ಸಮುದ್ರದ ಬಳಿ 130 ಕಿಮೀ ಆಳದಲ್ಲಿ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 6 ರಷ್ಟು ತೀವ್ರತೆಯ ಭೂಕಂಪನವಾಗಿದೆ ಎಂದು ಆಸ್ತ್ರೇಲಿಯಾ ಭೂಗರ್ಭಶಾಸ್ತ್ರ ಇಲಾಖೆ ಮಾಹಿತಿ ನೀಡಿದೆ.
ಸಮುದ್ರದಾಳದಲ್ಲಿ ಸಂಭವಿಸಿರುವ ಈ ಭೂಕಂಪನದಿಂದ ಭಾರಿ ಅಲೆಗಳು ಸೃಷ್ಟಿಯಾಗಿದ್ದವು. ಇಲ್ಲಿನ ಪೂರ್ವ ಟಿಮೋರ್‌ನ ಈಶಾನ್ಯಕ್ಕೆ 182 ಕಿಮೀ ದೂರದಲ್ಲಿ ಈ ಕಂಪನ ಸಂಭವಿಸಿದೆ. ಡಾರ್ವಿನ್‌ನಲ್ಲಿ ಸುಮಾರು 900 ಕಿಮೀ ದೂರದವರೆಗೆ ಕಂಪನದ ಅನುಭವವಾಗಿದೆ.
ಈ ನಡುವೆ ಈ ಬಗ್ಗೆ ಮಾಹಿತಿ ನೀಡಿರುವ ಆಸ್ಟ್ರೇಲಿಯಾ ಹವಾಮಾನ ಇಲಾಖೆ, ದೇಶಕ್ಕೆ ಯಾವುದೇ ಸುನಾಮಿ ಭೀತಿ ಇಲ್ಲ ಎಂದು ಸ್ಪಷ್ಟಪಡಿಸಿದೆ. ಈ ಕಂಪನದಿಂದ ಇದುವರೆಗೂ ಸಾವು ನೋವಿನ ವರದಿಯಾಗಿಲ್ಲ.