ಹನೋಯಿ(ವಿಯೆಟ್ನಾಂ): ಮಧ್ಯ ವಿಯೆಟ್ನಾಂನ ಕ್ವಾಂಗ್ ನಾಮ್ ಪ್ರಾಂತ್ಯದ 2 ಸ್ಥಳಗಳಲ್ಲಿ ಭೂ ಕುಸಿತ ಸಂಭವಿಸದ್ದು, ಕನಿಷ್ಠ 7 ಮಂದಿ ಸಾವಿಗೀಡಾಗಿದ್ದಾರೆ.
ಮಧ್ಯ ವಿಯೆಟ್ನಾಂನಲ್ಲಿ ಭೂ ಕುಸಿತ: 7 ಜನ ಸಾವು, 46 ಮಂದಿ ಕಣ್ಮರೆ
ವಿಯೆಟ್ನಾಂನ ನಾಮ್ ಟ್ರಾ ಮೈ ಜಿಲ್ಲೆಯ 2 ಸ್ಥಳಗಳಲ್ಲಿ ಭೂ ಕುಸಿತ ಸಂಭವಿಸದ್ದು, ಕನಿಷ್ಠ 7 ಮಂದಿ ಸಾವಿಗೀಡಾಗಿದ್ರೆ, 46 ಮಂದಿ ಕಾಣೆಯಾಗಿದ್ದಾರೆ.
ಮಧ್ಯ ವಿಯೆಟ್ನಾಂನಲ್ಲಿ ಭೂ ಕುಸಿತ
ನಾಮ್ ಟ್ರಾ ಮೈ ಜಿಲ್ಲೆಯಲ್ಲಿ ರಾತ್ರಿ ಸುಮಾರು 11 ಗಂಟೆ ವೇಳೆಗೆ ಈ ದುರ್ಘಟನೆಗಳು ನಡೆದಿವೆ. ಮೊಲಾವೆ ಚಂಡಮಾರುತದ ಪರಿಣಾಮ ಧಾರಾಕಾರಾಗಿ ಮಳೆ ಸುರಿಯುತ್ತಿದೆ. ಹಾಗಾಗಿ ಭೂ ಕುಸಿತ ಸಂಭವಿಸಿದ್ದು, ಈ ದುರ್ಘಟನೆಯಿಂದ ಒಟ್ಟು 46 ಜನರು ಕಾಣೆಯಾಗಿದ್ದಾರೆ.
ವಿಯೆಟ್ನಾಂ ಪ್ರಧಾನಿ ನ್ಗುಯೆನ್ ಕ್ಸುವಾನ್ ಫುಕ್, ಮಿಲಿಟರಿ ಮತ್ತು ಸ್ಥಳೀಯ ಅಧಿಕಾರಿಗಳು ರಕ್ಷಣೆ ಮತ್ತು ಶೋಧ ಕಾರ್ಯದಲ್ಲಿ ತೊಡಗುವಂತೆ ರಾಷ್ಟ್ರೀಯ ವಿಪತ್ತು ಸಮಿತಿಯನ್ನು ಕೋರಿದ್ದಾರೆ. ಸಂತ್ರಸ್ತರ ರಕ್ಷಣೆಗೆ ಅಗತ್ಯ ಸಹಕಾರ ಒದಗಿಸಲು ಸಿದ್ಧವಾಗಿರುವುದಾಗಿ ಹೇಳಿದ್ದಾರೆ ಎಂದು ವರದಿಗಳು ತಿಳಿಸಿವೆ.