ವಾಷಿಂಗ್ಟನ್ ಡಿಸಿ:ಕೊನೆ ಗಳಿಗೆಯಲ್ಲಿ ಸಂಪರ್ಕ ಕಳೆದುಕೊಂಡ ವಿಕ್ರಮ್ ಲ್ಯಾಂಡರನ್ನು ಆರ್ಬಿಟರ್ ಪತ್ತೆ ಹಚ್ಚಿದ್ದು ಥರ್ಮಲ್ ಫೊಟೋ ತೆಗೆದು ಇಸ್ರೋ ಪ್ರಧಾನ ಕಚೇರಿಗೆ ಕಳುಹಿಸಿದೆ. ಇಸ್ರೋದ ಪ್ರತಿಯೊಂದು ನಡೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಅಮೆರಿಕದ ಬಾಹ್ಯಾಕಾಶ ಸಂಸ್ಥೆ 'ನಾಸಾ', ಭಾರತೀಯ ವಿಜ್ಞಾನಿಗಳೊಂದಿಗೆ ಕೆಲಸ ಮಾಡುವ ಇಂಗಿತ ವ್ಯಕ್ತಪಡಿಸಿದೆ.
'ಸೌರವ್ಯೂಹ'ವನ್ನು ಒಗ್ಗೂಡಿ ಭೇದಿಸೋಣ: ಇಸ್ರೋಗೆ ನಾಸಾ ಬಲ - ಇಸ್ರೋ
ಇಸ್ರೋದ ಚಂದ್ರಯಾನ -2 ಪ್ರಯತ್ನವನ್ನು ನಾವು ಪ್ರಶಂಸಿಸುತ್ತೇವೆ. ನೀವು ಸಾಧನೆಯಿಂದ ನಮಗೆ ಸ್ಫೂರ್ತಿ ನೀಡಿದ್ದೀರಿ ನಿಮ್ಮ ಜೊತೆಗೆ ಸೌರವ್ಯೂಹವನ್ನು ಒಟ್ಟಾಗಿ ಅನ್ವೇಷಿಸಲು ಭವಿಷ್ಯದ ಅವಕಾಶಗಳನ್ನು ಎದುರು ನೋಡುತ್ತಿದ್ದೇವೆ ಎಂದು ಇಸ್ರೋ ವಿಜ್ಞಾನಿಗಳಿಗೆ ನಾಸಾ ಬಲ ತುಂಬಿದೆ.
ಸಾಂದರ್ಭಿಕ ಚಿತ್ರ
"ಬಾಹ್ಯಾಕಾಶವು ಕಠಿಣವಾಗಿದೆ" ಎಂದು ಹೇಳುವ ನಾಸಾ, ಇಸ್ರೋ ಜೊತೆಗೆ ಸೌರಮಂಡಲ ಅನ್ವೇಷಿಸುವ ಭವಿಷ್ಯದ ಅವಕಾಶಗಳನ್ನು ಎದುರು ನೋಡುತ್ತಿರುವುದಾಗಿ ಹೇಳಿದೆ.