ಜಿನೀವಾ: ಕೋವಿಡ್-19 ವಿರುದ್ಧದ ಹೋರಾಟಕ್ಕೆ ಆರೋಗ್ಯ ಸಿಬ್ಬಂದಿಗೆ ನೆರವಾಗಲು ಹಾಗೂ ಜನ ಸಾಮಾನ್ಯರಿಗೆ ಸೋಂಕಿನ ಬಗ್ಗೆ ತಿಳವಳಿಕೆ ಮೂಡಿಸಲು ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಒ) ಎರಡು ಮೊಬೈಲ್ ಅಪ್ಲಿಕೇಷನ್ಗಳನ್ನು ಬಿಡುಗಡೆ ಮಾಡಿದೆ.
ಡಬ್ಲ್ಯುಎಚ್‌ಒ ಅಕಾಡೆಮಿಯ ಒಂದು ಅಪ್ಲಿಕೇಷನ್ ಅನ್ನು ಸಾಂಕ್ರಾಮಿಕ ಸೋಂಕು ಹಬ್ಬಿದ ಸಮಯದಲ್ಲಿ ಆರೋಗ್ಯ ಕಾರ್ಯಕರ್ತರು ತಮ್ಮ ಜೀವ ಉಳಿಸಿಕೊಳ್ಳುವ ಕೌಶಲ್ಯ ಬೆಳೆಸಿಕೊಳ್ಳಲು ನೆರವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಎರಡನೇ ಆ್ಯಪ್ನಲ್ಲಿ ಡಬ್ಲ್ಯುಎಚ್‌ಒ ಜನರಿಗೆ ಸೋಕಿನ ಬಗ್ಗೆ ಮಾಹಿತಿ ಒದಗಿಸಲಾಗಿದೆ.
ಆರೋಗ್ಯ ಕಾರ್ಯಕರ್ತರು ಡಬ್ಲ್ಯುಎಚ್‌ಒ ಅಭಿವೃದ್ಧಿಪಡಿಸಿದ ಕೊರೊನಾ ಬಗೆಗಿನ ಹೆಚ್ಚಿನ ತಿಳವಳಿಗೆ ಈ ಅಪ್ಲಿಕೇಷನ್ ನೆರವು ಪಡೆಯಬಹುದು. ಇದರಲ್ಲಿ ರೋಗಿಗಳ ಆರೈಕೆಗೆ ನೆರವಾಗುವ ಮಾರ್ಗದರ್ಶನ, ಪರಿಕರಗಳು, ತರಬೇತಿ ಮತ್ತು ವರ್ಚುವಲ್ ಕಾರ್ಯಾಗಾರಗಳು ಸೇರಿವೆ. ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಕುರಿತು ವಿವರಣೆ ಸೇರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.