ಕರ್ನಾಟಕ

karnataka

ETV Bharat / international

ಕೋವಿಡ್ ವೇಳೆ ಮಹಿಳೆಯರ ಮೇಲೆ ಕಿರುಕುಳ ಹೆಚ್ಚಳ: ವಿಶ್ವಸಂಸ್ಥೆ ವರದಿ

ವಿಶ್ವಸಂಸ್ಥೆಯಲ್ಲಿ ಮಹಿಳೆಯರಿಗಾಗಿ ಇರುವ UN Women ಸಂಸ್ಥೆ ಸುಮಾರು 13 ದೇಶಗಳಲ್ಲಿ ಸಮೀಕ್ಷೆ ನಡೆಸಿದ್ದು, ಕೊರೊನಾ ವೇಳೆ ಮಹಿಳೆಯರು ಅನುಭವಿಸಿದ ಹಿಂಸಾಚಾರಗಳ ಬಗ್ಗೆ ಬೆಳಕು ಚೆಲ್ಲಿದೆ.

Violence against women increases due to COVID 19 UN Women report
ಕೋವಿಡ್ ವೇಳೆ ಮಹಿಳೆಯರ ಮೇಲೆ ಕಿರುಕುಳ ಹೆಚ್ಚಳ: ವಿಶ್ವಸಂಸ್ಥೆ ವರದಿ

By

Published : Nov 25, 2021, 12:40 PM IST

ವಿಶ್ವಸಂಸ್ಥೆ: ಕೋವಿಡ್ ಸಾಂಕ್ರಾಮಿಕ ರೋಗ ಆರಂಭವಾದಾಗಿನಿಂದ ಮನೆಗಳಲ್ಲಿ ಸಂಘರ್ಷ ಹೆಚ್ಚಾಗಿದ್ದು, ಕೆಲವು ಮಹಿಳೆಯರಲ್ಲಿ ಅಸುರಕ್ಷಿತ ಭಾವನೆ ಮೂಡಲು ಕಾರಣವಾಗಿದೆ ಎಂದು ವಿಶ್ವಸಂಸ್ಥೆಯ ವರದಿಯೊಂದರಲ್ಲಿ ಮಾಹಿತಿ ಬಹಿರಂಗವಾಗಿದೆ.

ವಿಶ್ವಸಂಸ್ಥೆಯಲ್ಲಿ ಮಹಿಳೆಯರಿಗಾಗಿ ಇರುವ ಯುಎನ್ ವಿಮೆನ್ (UN Women) ಸುಮಾರು 13 ದೇಶಗಳಲ್ಲಿ 'Measuring the shadow pandemic: Violence against women during Covid-19' ಎಂಬ ವಿಚಾರವಾಗಿ ಸಮೀಕ್ಷೆ ನಡೆಸಿದ್ದು, ಹಲವಾರು ವಿಚಾರಗಳನ್ನು ಬಹಿರಂಗಪಡಿಸಿದೆ.

ಮನೆಯಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆಯ ಮೇಲೆ ಕೋವಿಡ್ ಸೋಂಕು ಬೀರಿರುವ ಪ್ರಭಾವದ ಕುರಿತು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕೋವಿಡ್ ಪ್ರಾರಂಭವಾದಾಗಿನಿಂದ ಶೇಕಡಾ 50ರಷ್ಟು ಮಹಿಳೆಯರು ಒಂದಲ್ಲಾ ಒಂದು ರೀತಿಯಲ್ಲಿ ಹಿಂಸಾಚಾರ ಅನುಭವಿಸಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ನಾವು ಕಿರುಕುಳಕ್ಕೆ ಒಳಗಾಗಿದ್ದೇವೆ ಎಂದ ಶೇ 21 ರಷ್ಟು ಮಹಿಳೆಯರು

ಕೋವಿಡ್ ವೇಳೆ ದೈಹಿಕ ಕಿರುಕುಳಕ್ಕೆ ಒಳಗಾಗಿದ್ದೇವೆ ಎಂದು ಶೇಕಡಾ 21ರಷ್ಟು ಮಹಿಳೆಯರು ಹೇಳಿಕೊಂಡಿದ್ದಾರೆ. ಬೇರೆ ಕುಟುಂಬಗಳಿಂದ ಕಿರುಕುಳಕ್ಕೆ ಒಳಗಾಗಿರುವುದಾಗಿ ಶೇಕಡಾ 21ರಷ್ಟು ಮಂದಿ ಹಾಗೂ ಮನೆಯಲ್ಲಿರುವ ಮಹಿಳೆಯರಿಂದಲೇ ಕಿರುಕುಳಕ್ಕೆ ಒಳಗಾಗಿರುವುದಾಗಿ ಶೇಕಡಾ 19ರಷ್ಟು ಮಹಿಳೆಯರು ಹೇಳಿಕೊಂಡಿದ್ದಾರೆ.

ಮನೆಯಿಂದ ಹೊರಗೆ ಅತಿ ಹೆಚ್ಚು ಕಿರುಕುಳಕ್ಕೆ ಒಳಗಾಗುತ್ತಿದ್ದೇವೆ ಎಂದು ಶೇಕಡಾ 40ರಷ್ಟು ಮಹಿಳೆಯರು ಅಭಿಪ್ರಾಯಪಟ್ಟಿದ್ದಾರೆ. ಕೋವಿಡ್ ಪ್ರಾರಂಭವಾದಾಗಿನಿಂದ ರಾತ್ರಿ ಒಬ್ಬಂಟಿಯಾಗಿ ನಡೆಯುವುದು ಅಷ್ಟೇನೂ ಸುರಕ್ಷಿತವಲ್ಲ ಎಂದು ಐವರು ಮಹಿಳೆಯರಲ್ಲಿ ಮೂವರ ಅಭಿಪ್ರಾಯವಾಗಿದೆ.

ಆರ್ಥಿಕ ಒತ್ತಡ, ನಿರುದ್ಯೋಗ, ಆಹಾರ ಅಭದ್ರತೆ ಮತ್ತು ಕೌಟುಂಬಿಕ ಸಮಸ್ಯೆಗಳಂತಹ ಸಾಮಾಜಿಕ - ಆರ್ಥಿಕ ಅಂಶಗಳು ಮಹಿಳೆಯರ ಸುರಕ್ಷತೆಯ ಮೇಲೆ ಮಾತ್ರವಲ್ಲದೇ ಅವರ ಆರೋಗ್ಯದ ಮೇಲೆಯೂ ಸಾಕಷ್ಟು ಪರಿಣಾಮ ಬೀರುತ್ತದೆ. ಮಹಿಳೆಯರ ಮೇಲಿನ ಹಿಂಸಾಚಾರವೂ ಜಾಗತಿಕ ಸಮಸ್ಯೆ ಎಂದು ಯುಎನ್ ಮಹಿಳಾ ಕಾರ್ಯನಿರ್ವಾಹಕ ನಿರ್ದೇಶಕಿ ಸಿಮಾ ಬಹೌಸ್ ತಿಳಿಸಿದ್ದಾರೆ.

ನವೆಂಬರ್ 25ರಂದು ಮಹಿಳೆಯರ ಮೇಲಿನ ದೌರ್ಜನ್ಯ ನಿವಾರಣೆಗಾಗಿ ಅಂತಾರಾಷ್ಟ್ರೀಯ ದಿನವನ್ನು ಆಚರಣೆ ಮಾಡಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ ವರದಿಯನ್ನು ಬಿಡುಗಡೆ ಮಾಡಿದೆ.

ಇದನ್ನೂ ಓದಿ:ನಾವು ಮೃತಪಟ್ಟ ನಂತರ ನಮ್ಮ ಗೂಗಲ್ ಖಾತೆಯ ಡೇಟಾ ಏನಾಗುತ್ತದೆ..?

ABOUT THE AUTHOR

...view details