ವಾಷಿಂಗ್ಟನ್:ಭಾರತದಲ್ಲಿನ ಕೊರೊನಾ ಬಿಕ್ಕಟ್ಟು ಅಮೆರಿಕ ಅಧ್ಯಕ್ಷ ಜೋ ಬೈಡನ್ಗೆ ರಾಜತಾಂತ್ರಿಕ ಮತ್ತು ಮಾನವೀಯ ಸವಾಲುಗಳನ್ನು ಸೃಷ್ಟಿಸಿದ್ದರೆ, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ಗೆ ಇದು ವೈಯಕ್ತಿಕವಾಗಿದೆ.
ಕಮಲಾ ಹ್ಯಾರಿಸ್ ಭಾರತೀಯ ಮೂಲದವರಾಗಿದ್ದಾರೆ. ಅವರ ತಾಯಿ ಭಾರತದಲ್ಲೇ ಹುಟ್ಟಿದ್ದು, ಬಾಲ್ಯದಲ್ಲಿ ಅನೇಕ ಬಾರಿ ಕಮಲಾ ಹ್ಯಾರಿಸ್ ಭಾರತಕ್ಕೆ ಭೇಟಿ ನೀಡಿದ್ದಾರೆ. ಈ ಬಗ್ಗೆ ಯಾವಾಗಲೂ ಅವರು ಭಾವನಾತ್ಮಕವಾಗಿ ಮಾತನಾಡುತ್ತಾರೆ. ಇದೀಗ ಭೀಕರ ಕೋವಿಡ್ ಸ್ಥಿತಿ ಎದುರಿಸುತ್ತಿರುವ ಭಾರತದಲ್ಲೇ ಅವರ ಕುಟುಂಬ ಸದಸ್ಯರಿದ್ದಾರೆ.
ಕಮಲಾ ಹ್ಯಾರಿಸ್ರ ಸೋದರ ಮಾವನಾಗಿರುವ ಜಿ.ಬಾಲಚಂದ್ರನ್, ಹ್ಯಾರಿಸ್ ಅವರು ಭಾರತದಲ್ಲಿ ಈ ವರ್ಷ ತಮ್ಮ 80ನೇ ಜನ್ಮದಿನವನ್ನು ತಮ್ಮವರಿಲ್ಲದೇ ಕೇವಲ ದೂರವಾಣಿ ಕರೆಗಳೊಂದಿಗೆ ಆಚರಿಸಿಕೊಂಡಿದ್ದಾರೆ. ಪ್ರತಿವರ್ಷ ತಮ್ಮ ಹುಟ್ಟುಹಬ್ಬ ಆಚರಿಸಲು ಅಮೆರಿಕದಲ್ಲಿರುವ ಇವರ ಮಕ್ಕಳು, ಸಂಬಂಧಿಕರು ಬರುತ್ತಿದ್ದರು. ಆದರೆ ಇವೆಲ್ಲವನ್ನು ಕೊರೊನಾ ಹಿಡಿದಿಟ್ಟುಕೊಂಡಿದೆ ಎಂದು ನಿವೃತ್ತ ಶಿಕ್ಷಣ ತಜ್ಞ ಬಾಲಚಂದ್ರನ್ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳುತ್ತಾರೆ.