ಕರ್ನಾಟಕ

karnataka

By

Published : Oct 3, 2020, 6:24 AM IST

ETV Bharat / international

ಟ್ರಂಪ್​ಗೆ ಕೊರೊನಾ... ಆಸ್ಪತ್ರೆಯಿಂದಲೇ ಕರ್ತವ್ಯ

ಟ್ರಂಪ್​ಗೆ ಕೊರೊನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆ ಕೆಲ ದಿನಗಳ ಆಸ್ಪತ್ರೆಯಿಂದಲೇ ಕರ್ತವ್ಯ ನಿರ್ವಹಿಸಲಿದ್ದಾರೆ.

Donald Trump
ಟ್ರಂಪ್​ಗೆ ಕೊರೊನಾ

ವಾಸಿಂಗ್ಟನ್: ಕೊರೊನಾ ದೃಢಪಟ್ಟ ಹಿನ್ನೆಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಅವರು ವಾಲ್ಟರ್ ರೀದ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯರ ಸಲಹೆಯಂತೆ ಕೆಲ ದಿನಗಳ ಕಾಲ ಟ್ರಂಪ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ.

ಗುರುವಾರ ರಾತ್ರಿ ಟ್ರಂಪ್ ಮತ್ತು ಅವರ ಪತ್ನಿಗೆ ಕೊರೊನಾ ದೃಢಪಟ್ಟಿತ್ತು. ಬಳಿಕ ಟ್ವೀಟ್ ಮಾಡಿರುವ ಟ್ರಂಪ್, ನನಗೆ ಬೆಂಬಲ ಸೂಚಿಸಿದ ಎಲ್ಲರಿಗೂ ಧನ್ಯವಾದ. ನಾನು ವಾಲ್ಟರ್ ರೀದ್ ಆಸ್ಪತ್ರೆಯಲ್ಲಿ ದಾಖಲಾಗುತ್ತಿದ್ದೇನೆ. ನಾನು ಮತ್ತು ನನ್ನ ಪತ್ನಿ ಆರೋಗ್ಯವಾಗಿದ್ದೇವೆ ಎಂದು ಟ್ವಿಟರ್​ನಲ್ಲಿ ವಿಡಿಯೋ ಸಂದೇಶ ನೀಡಿದ್ದಾರೆ.

ಟ್ರಂಪ್ ಅವರು ಮುಂದಿನ ಕೆಲ ದಿನಗಳ ಕಾಲ ಆಸ್ಪತ್ರೆಯಿಂದ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಶ್ವೇತ ಭವನದ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details