ವಾಷಿಂಗ್ಟನ್ (ಅಮೆರಿಕ): ರಷ್ಯಾ ಆಕ್ರಮಣದ ವಿರುದ್ಧ ತನ್ನನ್ನು ತಾನು ರಕ್ಷಿಸಿಕೊಳ್ಳುವ ಉಕ್ರೇನ್‌ನ ಸಾಮರ್ಥ್ಯ ಕಡಿಮೆ ಎಂದು ಅಂದಾಜು ಮಾಡಲಾಗಿದೆ ಅಂತಾ ಯುಎಸ್ ಉನ್ನತ ಗುಪ್ತಚರ ಇಲಾಖೆ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.
ರಷ್ಯಾ ವಿರುದ್ಧ ಹೋರಾಡುವ ಉಕ್ರೇನ್‌ನ ಇಚ್ಛೆಯನ್ನು ಯುಎಸ್ ತಪ್ಪಾಗಿ ಪರಿಗಣಿಸಿದೆ. ವಿವಿಧ ಅಂಶಗಳ ಆಧಾರದ ಮೇಲೆ ಉಕ್ರೇನಿಯನ್ನರು ನಾನು ಅಂದುಕೊಂಡಷ್ಟು ಯುದ್ಧಕ್ಕೆ ಸಿದ್ಧವಾಗಿಲ್ಲ ಎಂಬುದು ನನ್ನ ಅಭಿಪ್ರಾಯವಾಗಿತ್ತು. ಆದರೆ, ನನ್ನ ಗ್ರಹಿಕೆ ತಪ್ಪಾಗಿತ್ತು. ಅವರು ಧೈರ್ಯ ಮತ್ತು ಗೌರವದಿಂದ ಹೋರಾಡುವ ಮೂಲಕ ಸರಿಯಾದ ಕೆಲಸ ಮಾಡುತ್ತಿದ್ದಾರೆ ಎಂದು ರಕ್ಷಣಾ ಗುಪ್ತಚರ ಸಂಸ್ಥೆಯ ನಿರ್ದೇಶಕ ಲೆಫ್ಟಿನೆಂಟ್ ಜನರಲ್ ಸ್ಕಾಟ್ ಬೆರಿಯರ್ ಹೇಳಿದ್ದಾರೆ.