ವಾಷಿಂಗ್ಟನ್: ಇರಾನ್ ಮೇಲೆ ದಾಳಿ ನಡೆಸಲು ಸನ್ನದ್ಧವಾಗಿದ್ದ ಅಮೆರಿಕ ಕೊನೆಯ ಕ್ಷಣದಲ್ಲಿ ಹಿಂದೆ ಸರಿದಿತ್ತು. ಆದರೆ ದಾಳಿಯಿಂದ ಹಿಂದೆ ಸರಿಯಲು ಕಾರಣ ಏನು ಎನ್ನುವುದನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಹಿರಂಗಪಡಿಸಿದ್ದಾರೆ.
ನಾವು ದಾಳಿಗೆ ಸರ್ವರೀತಿಯಲ್ಲೂ ಸಿದ್ಧರಾಗಿದ್ದೆವು. ದಾಳಿಯ ಸಮಯವನ್ನೂ ನಿಗದಿಗೊಳಿಸಲಾಗಿತ್ತು. ಇರಾನಿನ ಮೂರು ಜಾಗಗಳನ್ನು ಅಂತಿಮಗೊಳಿಸಲಾಗಿತ್ತು. ಆದರೆ ಯೋಜಿತ ದಾಳಿಗೆ ಇನ್ನು ಹತ್ತು ನಿಮಿಷ ಇರುವಂತೆ ಬೇಡ ಎನ್ನುವ ತೀರ್ಮಾನಕ್ಕೆ ಬರಲಾಯಿತು. ಈ ದಾಳಿಯಲ್ಲಿ 150 ಜನರು ಸಾವನ್ನಪ್ಪುತ್ತಾರೆ ಎನ್ನುವುದು ತಿಳಿದ ಬಳಿಕ ಯೋಜನೆಯನ್ನು ಮೊಟಕುಗೊಳಿಸಲಾಯಿತು ಎಂದು ಸ್ವತಃ ಟ್ರಂಪ್ ಹೇಳಿದ್ದಾರೆ.