ಕರ್ನಾಟಕ

karnataka

ETV Bharat / international

3000 ಮಂದಿಯನ್ನು ಬಲಿ ಪಡೆದ 9/11 ದಾಳಿಗೆ 20 ವರ್ಷ: ಸ್ವಚ್ಛತಾ ಸಿಬ್ಬಂದಿಯನ್ನು ಇಂದಿಗೂ ಕಾಡುತ್ತಿದೆ ಆರೋಗ್ಯ ಸಮಸ್ಯೆ - osama bin laden

ಅದು ಜಗತ್ತು ಕಂಡರಿಯದ ಅತ್ಯಂತ ಭಯಾನಕ ಭಯೋತ್ಪಾದಕ ದಾಳಿ. 110 ಮಹಡಿಗಳ ಅಂಬರಚುಂಬಿ ಅವಳಿ ಕಟ್ಟಡಗಳ ಮೇಲೆ ನೋಡು ನೋಡುತ್ತಿದ್ದಂತೆ ಶರವೇಗದಲ್ಲಿ ವಿಮಾನಗಳು ಬಂದಪ್ಪಳಿಸುತ್ತವೆ. ಕೆಲವೇ ನಿಮಿಷಗಳಲ್ಲಿ ವಿಶ್ವ ವಾಣಿಜ್ಯ ಕೇಂದ್ರ ಧರೆಗಪ್ಪಳಿಸಿಯೇ ಬಿಟ್ಟಿತು. ಸಾವಿರಾರು ಮಂದಿಯ ಮಾರಣಹೋಮವಾಯ್ತು. ಅತ್ಯಂತ ದೊಡ್ಡ ಕಟ್ಟಡಗಳು ಧರೆಗುರುಳಿದ ರಭಸಕ್ಕೆ ಅಲ್ಲಿನ ಪರಿಸರ ಸಂಪೂರ್ಣ ಧೂಳುಮಯವಾಗಿತ್ತು. ಅರೆ ಕ್ಷಣ ಮನುಷ್ಯನ ಯೋಚನಾ ಶಕ್ತಿಯನ್ನೇ ಸ್ತಬ್ದಗೊಳಿಸಿದ ಮನುಕುಲದ ಇತಿಹಾಸ ಕಂಡ ಘೋರ ದುರಂತದ ಚಿತ್ರಣ ಅಲ್ಲಿತ್ತು. ಸಾವಿರಾರು ಮಂದಿ ಗಾಯಗೊಂಡರು. ತಮ್ಮವರನ್ನು ಕಳೆದುಕೊಂಡರು. ಈ ಕಹಿನೆನಪಿಗೆ ಇಂದಿಗೆ ಸರಿಯಾಗಿ 20 ವರ್ಷ.

9/11 20 years anniversary
9/11 20 years anniversary

By

Published : Sep 9, 2021, 7:45 PM IST

Updated : Sep 9, 2021, 9:36 PM IST

ನ್ಯೂಯಾರ್ಕ್‌: ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ಅತಿ ಎತ್ತರದ ವಿಶ್ವ ವಾಣಿಜ್ಯ ಕೇಂದ್ರ (WTC)ದ ಅವಳಿ ಗೋಪುರಗಳಿಗೆ ಅಲ್‌ಖೈದಾ ಉಗ್ರರು ವಿಮಾನಗಳನ್ನು ನುಗ್ಗಿಸಿ ನಡೆಸಿದ್ದ ಭೀಕರ ದಾಳಿಗೆ ಇಂದಿಗೆ ಸರಿಯಾಗಿ ಎರಡು ದಶಕಗಳು ಸಂದಿವೆ.

ಅಂದು ನಡೆದದ್ದೇನು?

9/11 ದಾಳಿ ಎಂದೇ ಕರೆಯಲ್ಪಡುವ ಈ ಘಟನೆ ನಡೆದದ್ದು 2001ರ ಸೆಪ್ಟೆಂಬರ್​ 11 ರಂದು. ಹೆಸರು ಕೇಳಿದರೆ ಜಗತ್ತೇ ಭಯಬೀಳುವ ಉಗ್ರ ಒಸಾಮಾ ಬಿನ್​ ಲಾಡನ್ ಸಂಚಿನ ಮೇರೆಗೆ ಅಲ್​ ಖೈದಾ ಉಗ್ರರು ಈ ದಾಳಿ ನಡೆಸಿದ್ದರು. ನಾಲ್ಕು ವಿಮಾನಗಳನ್ನು ಅಪಹರಿಸಿದ್ದ 19 ಮಂದಿ ಅಲ್‌ಖೈದಾ ಉಗ್ರರು ಅವುಗಳನ್ನು 110 ಮಹಡಿಗಳ ಅವಳಿ ಕಟ್ಟಡಗಳ ಒಳಗೆ ನುಗ್ಗಿಸಿದ್ದರು. ಹೊತ್ತಿ ಉರಿದ ಕಟ್ಟಡಗಳು ನೋಡುನೋಡುತ್ತಿದ್ದಂತೆಯೇ ಕೆಲವೇ ಹೊತ್ತಿನಲ್ಲೇ ನೆಲಸಮವಾಗಿದ್ದವು.

ಇದನ್ನೂ ಓದಿ:ಶತ್ರುಗಳ ಶತ್ರು ಮಿತ್ರ.. ತಾಲಿಬಾನ್​ಗೆ 228 ಕೋಟಿ ರೂ. ನೆರವು ಘೋಷಿಸಿದ ಚೀನಾ

ಸುಮಾರು 3,000 ಮಂದಿ ಬಲಿ

ಆ ವಿಮಾನಗಳಲ್ಲಿದ್ದ 246 ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿ ಗೋಪುರಗಳಲ್ಲಿದ್ದ 2,500ಕ್ಕೂ ಅಧಿಕ ಮಂದಿ ಸೇರಿ ಒಟ್ಟು ಸುಮಾರು 3,000 ಮಂದಿ ಬಲಿಯಾಗಿದ್ದರು. 6,000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಮೃತರ ಪೈಕಿ 1,106 ಮಂದಿಯನ್ನು ಇನ್ನೂ ಕೂಡ ಗುರುತಿಸಲಾಗಿಲ್ಲ. ಯುಎಸ್ ಇತಿಹಾಸದಲ್ಲೇ ಅತ್ಯಂತ ಭೀಕರ ಹಾಗೂ ಜಗತ್ತನ್ನೇ ಬೆಚ್ಚಿ ಬೀಳಿಸಿದ್ದ ಭಯೋತ್ಪಾದಕ ಕೃತ್ಯ ಇದಾಗಿತ್ತು.

ಈ ದುರ್ಘಟನೆ ನಡೆದು 20 ವರ್ಷಗಳು ಸಂದಿದ್ದರೂ ಕೂಡ ಅದರ ಪರಿಣಾಮ ಮಾತ್ರ ಇನ್ನೂ ಜೀವಂತವಾಗಿದೆ. ಏಕೆಂದರೆ, ಘಟನೆ ಬಳಿಕ ಉಳಿದ ಅವಶೇಷಗಳನ್ನು ಸ್ವಚ್ಛಗೊಳಿಸುವ, ತುಂಡುತುಂಡಾದ ಮೃತದೇಹಗಳನ್ನು ತೆಗೆದು ಹಾಕುವ ಕಾರ್ಯಾಚರಣೆಯಲ್ಲಿ ತೊಡಗಿದ್ದ 91,000ಕ್ಕೂ ಹೆಚ್ಚು ಕಾರ್ಮಿಕರು, ಸ್ವಯಂಸೇವಕರು ಇಂದಿಗೂ ಕೂಡ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀ ಮಾಧ್ಯಮದ ತನಿಖಾ ವರದಿ ಹೇಳತ್ತದೆ.

Last Updated : Sep 9, 2021, 9:36 PM IST

ABOUT THE AUTHOR

...view details