ಕರ್ನಾಟಕ

karnataka

ETV Bharat / international

ಕೋವಿಡ್‌ಗೆ ನಲುಗಿದ ಭಾರತ: ಅಮೆರಿಕ, ಯುಕೆ, ಫ್ರಾನ್ಸ್‌ ಸಹಾಯದ ಭರವಸೆ - ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್

ದೇಶದಲ್ಲಿ ಕೊರೊನಾ ದಿನೇ ದಿನೇ ಹೆಚ್ಚಳವಾಗುತ್ತಿದೆ. ಈ ಸಂದರ್ಭದಲ್ಲಿ ಯುಕೆ, ಇಂಗ್ಲೆಂಡ್​ ಮತ್ತು ಫ್ರಾನ್ಸ್​ ದೇಶಗಳು ಭಾರತಕ್ಕೆ ಸಹಾಯ ಹಸ್ತ ನೀಡಲು ಮುಂದಾಗಿವೆ.

Covid Outbreak in India
ವಿದೇಶಗಳಿಂದ ಸಹಾಯಹಸ್ತ

By

Published : Apr 25, 2021, 10:57 AM IST

ನವದೆಹಲಿ: ಭಾರತದಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದ್ದು, ಸಂಕಷ್ಟದ ಸಂದರ್ಭಕ್ಕೆ ಅಮೆರಿಕ​ ಕಳವಳ ವ್ಯಕ್ತಪಡಿಸಿದೆ.

ಶ್ವೇತಭವನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಈ ಬಗ್ಗೆ ಟ್ವೀಟ್ ಮಾಡಿದ್ದು, 'ಕಳೆದ ಮೂರು ದಿನಗಳಲ್ಲಿ ಭಾರತದಲ್ಲಿ 3 ಲಕ್ಷ ಕೋವಿಡ್ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಈ ಸಾಂಕ್ರಾಮಿಕ ರೋಗದ ವಿರುದ್ಧ ಧೈರ್ಯದಿಂದ ಹೋರಾಡಲು ಭಾರತಕ್ಕೆ ಯಾವುದೇ ರೀತಿಯ ಸಹಾಯ ಮಾಡಲು ನಾವು ಸಿದ್ಧ' ಎಂದು ತಿಳಿಸಿದ್ದಾರೆ.

ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಅವರು, ಭಾರತಕ್ಕೆ ಸಹಾಯ ಮಾಡಲು ಮುಂದಾಗಿದ್ದಾರೆ. ಭಾರತವನ್ನು ತನ್ನ ಉತ್ತಮ ಪಾಲುದಾರ ರಾಷ್ಟ್ರ ಎಂದು ಬಣ್ಣಿಸಿರುವ ಅವರು, ವೆಂಟಿಲೇಟರ್‌ಗಳು ಅಥವಾ ಚಿಕಿತ್ಸಕಗಳನ್ನು ಒದಗಿಸುತ್ತೇವೆ ಎಂದು ಹೇಳಿದ್ದಾರೆ.

ಈ ಹಿಂದೆ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಮಾತನಾಡಿದ್ದು, "ಪ್ರಕರಣಗಳ ಹೆಚ್ಚಳವನ್ನು ಎದುರಿಸಲು ಭಾರತಕ್ಕೆ ಬೆಂಬಲ ನೀಡುತ್ತೇವೆ. ಕೊರೊನಾ ಪ್ರಕರಣಗಳನ್ನು ಎದುರಿಸುತ್ತಿರುವ ಭಾರತೀಯ ಜನರಿಗೆ ಒಗ್ಗಟ್ಟಿನ ಸಂದೇಶವನ್ನು ಕಳುಹಿಸಲು ಬಯಸುತ್ತೇನೆ. ಈ ಹೋರಾಟದಲ್ಲಿ ಫ್ರಾನ್ಸ್ ನಿಮ್ಮೊಂದಿಗಿದೆ. ಬೆಂಬಲವನ್ನು ನೀಡಲು ನಾವು ಸಿದ್ಧರಿದ್ದೇವೆ" ಎಂದು ಹೇಳಿದರು.

ಇದನ್ನೂ ಓದಿ: ಕಳೆದ 24 ಗಂಟೆಯಲ್ಲಿ 3 ಲಕ್ಷಕ್ಕೂ ಅಧಿಕ ಜನರಿಗೆ ಸೋಂಕು: ಎರಡೂವರೆ ಸಾವಿರಕ್ಕೂ ಹೆಚ್ಚು ಮಂದಿ ಸಾವು‌

ದೇಶದ ಕೋವಿಡ್ ವರದಿ

ದೇಶದಲ್ಲಿ ಇಂದು 3,49,691 ಹೊಸ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. 2,767 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. 2,17,113 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ಒಟ್ಟು 1,69,60,172 ಕೊರೊನಾ ಪ್ರಕರಣಗಳು ದಾಖಲಾಗಿವೆ. 1,40,85,110 ಸೋಂಕಿತರು ಗುಣಮುಖರಾಗಿದ್ದಾರೆ. ಸುಮಾರು 1,92,311 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಪ್ರಸ್ತುತ ದೇಶದಲ್ಲಿ 26,82,751 ಸಕ್ರಿಯ ಕೋವಿಡ್​ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ABOUT THE AUTHOR

...view details