ಕರ್ನಾಟಕ

karnataka

ETV Bharat / international

ಮನೆಯಲ್ಲಿಯೇ ಕೋವಿಡ್​ ಸೋಂಕು ಪರೀಕ್ಷಿಸುವ​ ಕಿಟ್​ಗೆ ಅಮೆರಿಕದಲ್ಲಿ ಅನುಮತಿ

ಕೋವಿಡ್​ ಸೋಂಕು ಪತ್ತೆಗಾಗಿ ಮನೆಯಲ್ಲಿಯೇ ರೋಗಿಯ ಮೂಗಿನ ದ್ರಾವಣ ಸಂಗ್ರಹಿಸಿ ಟೆಸ್ಟ್ ಮಾಡಬಹುದಾದ ಟೆಸ್ಟಿಂಗ್​ ಕಿಟ್​ ಬಳಕೆಗೆ ಅಮೆರಿಕ ಸರ್ಕಾರ ಅನುಮತಿ ನೀಡಿದೆ. ಆರಂಭಿಕ ಹಂತದಲ್ಲಿ ಈ ಟೆಸ್ಟಿಂಗ್​ ಕಿಟ್​ ಅನ್ನು ಆರೋಗ್ಯ ಕಾರ್ಯಕರ್ತರು ಹಾಗೂ ಸೋಂಕು ತಗುಲುವ ಹೆಚ್ಚಿನ ಅಪಾಯ ಹೊಂದಿರುವ, ಮುಂಚೂಣಿಯಲ್ಲಿ ನಿಂತು ಚಿಕಿತ್ಸೆ ನೀಡುವ ಸಿಬ್ಬಂದಿಗಾಗಿ ಬಳಸಲಾಗುವುದು ಎಂದು ಲ್ಯಾಬ್​ಕಾರ್ಪ್​ ಹೇಳಿದೆ.

US FDA authorizes first at-home coronavirus sample collection kit
US FDA authorizes first at-home coronavirus sample collection kit

By

Published : Apr 23, 2020, 2:41 PM IST

ಹೈದರಾಬಾದ್; ಮನೆಯಲ್ಲಿಯೇ ಕೋವಿಡ್​ ಸೋಂಕು ಸ್ಯಾಂಪಲ್ ಸಂಗ್ರಹಿಸಿ ಟೆಸ್ಟ್​ ಮಾಡಬಹುದಾದ ಟೆಸ್ಟಿಂಗ್​ ಕಿಟ್​ ಬಳಸಲು ಅಮೆರಿಕದ ಫುಡ್​ ಆ್ಯಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಇಲಾಖೆ (FDA) ಅನುಮತಿ ನೀಡಿದೆ. 'ತುರ್ತು ಸಂದರ್ಭ ಬಳಕೆ' (EUA) ನಿಯಮಗಳಡಿ ಲ್ಯಾಬ್​ಕಾರ್ಪ್​ ಸಂಸ್ಥೆಗೆ ಈ ಅನುಮತಿ ನೀಡಲಾಗಿದ್ದು, ಕೋವಿಡ್​-19 RT-PCR ಟೆಸ್ಟ್​ನೊಂದಿಗೆ ಇದನ್ನು ಬಳಸಬಹುದು. ರೋಗಿಯು ಸ್ವತಃ ಸಂಗ್ರಹಿಸಿದ ಮೂಗಿನ ದ್ರಾವಣ ಮಾದರಿಯನ್ನು ಈ ಕಿಟ್​ ಬಳಸಿ ಟೆಸ್ಟ್​ ಮಾಡಬಹುದು.

ಲ್ಯಾಬ್​ಕಾರ್ಪ್​ಗೆ ಎಫ್​ಡಿಎ ಮಾರ್ಚ್​ 16 ರಂದು ಪ್ರಥಮ ಬಾರಿಗೆ 'ತುರ್ತು ಸಂದರ್ಭ ಬಳಕೆ' ಅನುಮತಿ ನೀಡಿತ್ತು. ಆದರೆ ವೈದ್ಯಕೀಯ ಸಿಬ್ಬಂದಿ ಸಂಗ್ರಹಿಸುವ ಮೇಲ್ಮಟ್ಟ ಹಾಗೂ ಕೆಳಮಟ್ಟದ ಉಸಿರಾಟ ಸ್ಯಾಂಪಲ್​ ಸಂಗ್ರಹಣೆಗೆ ಮಿತಿ ನಿಗದಿಪಡಿಸಲಾಗಿದೆ.

"ಕೊರೊನಾ ವೈರಸ್​ನ ಸಂಕಷ್ಟದ ಅವಧಿಯಲ್ಲಿ ವೈರಸ್​ ಸೋಂಕು ಪತ್ತೆ ವಿಧಾನಗಳ ಅನ್ವೇಷಣೆಗೆ ಎಲ್ಲ ಸಹಕಾರ ನೀಡಲಾಗುತ್ತಿದ್ದು, ರೋಗಿಗಳಿಗೆ ನಿಖರ ರೋಗ ನಿರ್ಣಯ ಫಲಿತಾಂಶ ಒದಗಿಸಲು ಯತ್ನಿಸಲಾಗುತ್ತಿದೆ. ಹಾಗೆಯೇ ಮನೆಯಲ್ಲಿಯೇ ರೋಗಿಗಳ ವಿಶ್ವಾಸಾರ್ಹ ಹಾಗೂ ನಿಖರ ಸ್ಯಾಂಪಲ್​ ಸಂಗ್ರಹಣೆಗೆ ಅವಕಾಶ ಮಾಡಿಕೊಡಲಾಗುತ್ತಿದೆ." ಎಂದು ಎಫ್​ಡಿಎ ಚೇರಮನ್​ ಸ್ಟೀಫನ್ ಹಾನ್ ತಿಳಿಸಿದ್ದಾರೆ.

ಆರಂಭಿಕ ಹಂತದಲ್ಲಿ ಈ ಟೆಸ್ಟಿಂಗ್​ ಕಿಟ್​ ಅನ್ನು ಆರೋಗ್ಯ ಕಾರ್ಯಕರ್ತರು ಹಾಗೂ ಸೋಂಕು ತಗುಲುವ ಹೆಚ್ಚಿನ ಅಪಾಯ ಹೊಂದಿರುವ, ಮುಂಚೂಣಿಯಲ್ಲಿ ನಿಂತು ಚಿಕಿತ್ಸೆ ನೀಡುವ ಸಿಬ್ಬಂದಿಗಾಗಿ ಬಳಸಲಾಗುವುದು ಎಂದು ಲ್ಯಾಬ್​ಕಾರ್ಪ್​ ಹೇಳಿದೆ.

ಈ 'ತುರ್ತು ಸಂದರ್ಭ ಬಳಕೆ' ಕಿಟ್​ಗಳನ್ನು ಲ್ಯಾಬ್​ಕಾರ್ಪ್​ ತಯಾರಿಸಲು ಮುಂದಾಗಿದೆ. ಆದರೆ ಯಾವುದೇ ರೋಗಿಯು ಕಿಟ್​ ಬಳಸುವ ಮುನ್ನ ಅಧಿಕೃತವಾಗಿ ವೈದ್ಯಕೀಯ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಬರುವ ಕೆಲ ವಾರಗಳಲ್ಲಿ ಸಾಕಷ್ಟು ಕಿಟ್​ಗಳು ಲಭ್ಯವಾಗಲಿವೆ ಎಂದು ಕಂಪನಿ ಹೇಳಿದ್ದರೂ, ನಿಖರವಾಗಿ ಎಷ್ಟು ಸಂಖ್ಯೆಯ ಕಿಟ್​ಗಳನ್ನು ತಯಾರಿಸಲಿದೆ ಅಥವಾ ಬಿಡುಗಡೆ ಮಾಡಲಿದೆ ಎಂಬುದನ್ನು ಸ್ಪಷ್ಟಪಡಿಸಿಲ್ಲ.

'ತುರ್ತು ಸಂದರ್ಭ ಬಳಕೆ' ನಿಯಮದಡಿ ಮನೆಯಲ್ಲಿಯೇ ರೋಗಿಯ ಸ್ಯಾಂಪಲ್ ಸಂಗ್ರಹಿಸಬಹುದೆಂದು ತಿಳಿಸಲಾಗಿದ್ದರೂ, ಲ್ಯಾಬ್​ಕಾರ್ಪ್​ನ ಕೇಂದ್ರಗಳೇ ಟೆಸ್ಟಿಂಗ್​ ನಿರ್ವಹಿಸಬೇಕು. ಲ್ಯಾಬ್​ಕಾರ್ಪ್​ ತಾನೇ ಸ್ಥಾಪಿಸಿದ ಅತಿ ಸಂಕೀರ್ಣ ಟೆಸ್ಟಿಂಗ್​ ಪ್ರಯೋಗಾಲಯಗಳಾದ ಲ್ಯಾಬ್​ಕಾರ್ಪ್​ ಎಸೋಟೆರಿಕ್ ಟೆಸ್ಟಿಂಗ್​ ಸೆಂಟರ್ ಹಾಗೂ ಇತರ ಕ್ಲಿನಿಕಲ್ ಲ್ಯಾಬೊರೇಟರಿ ಇಂಪ್ರೂವ್​ಮೆಂಟ್ ಅಮೆಂಡಮೆಂಟ್ಸ್​ ಪ್ರಮಾಣೀಕರಿಸಿದ ಪ್ರಯೋಗಾಲಯಗಳಲ್ಲಿಯೇ ಇಂಥ ಟೆಸ್ಟಿಂಗ್ ನಡೆಸಲು ಅವಕಾಶ ನೀಡಲಾಗಿದೆ.

ಆರೋಗ್ಯ ಕಾರ್ಯಕರ್ತರು ಹಾಗೂ ರೋಗಿಗಳಿಗೆ ವಾಸ್ತವ ವರದಿ ನೀಡುವಂತೆ ಮತ್ತು ಅಧಿಕೃತ ಪ್ರಯೋಗಾಲಯಗಳಿಗೆ ಪ್ರಮಾಣಿತ ಪರೀಕ್ಷಾ ವಿಧಾನಗಳ ಮಾಹಿತಿ ನೀಡುವುದು ಸೇರಿದಂತೆ ಇನ್ನೂ ಹಲವಾರು ಷರತ್ತುಗಳನ್ನು ಲ್ಯಾಬ್​ಕಾರ್ಪ್​ಗೆ ವಿಧಿಸಲಾಗಿದೆ.

ABOUT THE AUTHOR

...view details