ವಾಷಿಂಗ್ಟನ್: ಕೊರೊನಾ ಕಾರಣದಿಂದಾಗಿ ಭಾರತಕ್ಕೆ ಪ್ರಯಾಣ ನಿಷೇಧಿಸಿದ್ದ ಆಮೆರಿಕ ಸದ್ಯ ತನ್ನ ನಿಯಮದಲ್ಲಿ ಕೊಂಚ ಸಡಿಲಿಕೆ ನೀಡಿದೆ. 4ನೇ ಹಂತದ ನಿಯಮವಾಗಿದ್ದ ಪ್ರಯಾಣ ನಿಷೇಧವನ್ನು 3ನೇ ಹಂತಕ್ಕೆ ಅಂದರೆ ಪ್ರಯಾಣವನ್ನು ಮತ್ತೊಮ್ಮೆ ಪರಿಶೀಲಿಸುವ ಹಂತಕ್ಕೆ ಇಳಿಕೆ ಮಾಡಿದೆ.
ಇದರ ಜೊತೆ ಪಾಕಿಸ್ತಾನಕ್ಕೂ ತನ್ನ ಪ್ರಜೆಗಳ ಪ್ರಯಾಣವನ್ನು 4ನೇ ಹಂತದ ನಿಯಮದಿಂದ 3ಕ್ಕೆ ಇಳಿಸಿದೆ. ಭಾರತ ಮತ್ತು ಪಾಕ್ನಲ್ಲಿ ಕೋವಿಡ್ ಪರಿಸ್ಥಿರಿ ಚೇತರಿಕೆ ಕಂಡ ಹಿನ್ನೆಲೆ ಈ ನಿರ್ಧಾರಕ್ಕೆ ಬಂದಿದೆ.
ನೀವು ಎಫ್‌ಡಿಎ (ಆಹಾರ ಮತ್ತು ಔಷಧ ಮಂಡಳಿ) ಅಧಿಕೃತಗೊಳಿಸಿರುವ ಲಸಿಕೆ ಪಡೆದಿದ್ದರೆ ಕೋವಿಡ್ನಿಂದ ಅಪಾಯಕ್ಕೊಳಗಾಗುವ ಸಂಭವ ಕಡಿಮೆ ಇರಬಹುದು. ಆದರೆ, ಯಾವುದೇ ಅಂತಾರಾಷ್ಟ್ರೀಯ ಪ್ರಯಾಣವನ್ನು ಯೋಜಿಸುವ ಮುನ್ನಾ ದಯವಿಟ್ಟು ಲಸಿಕೆ ಪಡೆದಿರುವ ಪ್ರಯಾಣಿಕರಿಗೆ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಸಂಸ್ಥೆ (ಸಿಡಿಸಿ) ನೀಡಿರುವ ಶಿಫಾರಸ್ಸುಗಳನ್ನು ಪರಿಶೀಲಿಸಿ ಎಂದು ತಿಳಿಸಿದೆ.
ಇತ್ತ ಭಾರತಕ್ಕೆ ಪ್ರಯಾಣ ಮಾಡಬೇಕೆಂದಿರುವವರು ಮತ್ತೊಮ್ಮೆ ನಿಮ್ಮ ಪ್ರಯಾಣ ಕುರಿತು ಪರಿಶೀಲಿಸಿ. ಈ ಹಿಂದೆ ಮೇ 5ರಂದು ಅಂತಾರಾಷ್ಟ್ರೀಯ ಪ್ರಯಾಣದ ಮೇಲೆ ಹೇರಲಾಗಿದ್ದ 4ನೇ ಹಂತದ ನಿಯಮವನ್ನು ನಾವೀಗ ಬದಲಾಯಿಸಿದ್ದೇವೆ ಎಂದು ತಿಳಿಸಲಾಗಿದೆ. ಕಳೆದ ಬಾರಿ ಪ್ರಯಾಣಕ್ಕೆ ನಿರ್ಬಂಧ ವಿಧಿಸಿದ್ದ ವೇಳೆ ಭಾರತದಲ್ಲಿ ದಿನಕ್ಕೆ 3 ಲಕ್ಷ ಸೋಂಕಿತರು ದಾಖಲಾಗುತ್ತಿದ್ದರೆ ಅಲ್ಲದೆ, 2ನೇ ಅಲೆಯಲ್ಲಿ ಹೆಚ್ಚಿನ ಸಾವು ಸಂಭವಿಸಿತ್ತು.
ಓದಿ:ಪೆರು ಅಧ್ಯಕ್ಷಗಾದಿ ಏರಿದ ಎಡಪಂಥೀಯ.. ಶಿಕ್ಷಕ ಕ್ಯಾಸ್ಟಿಲ್ಲೊಗೆ ಮಣೆ ಹಾಕಿದ ಮತದಾರ!