ವಾಷಿಂಗ್ಟನ್: ಕೊರೊನಾ ದಾಳಿಗೆ ಈವರೆಗೂ ಅಮೆರಿಕದಲ್ಲಿ ಬಲಿಯಾದವರ ಸಂಖ್ಯೆ 100 ತಲುಪಿದೆ. ವಾಯುವ್ಯ ಅಮೆರಿಕದ ಭಾಗವಾದ ವಾಷಿಂಗ್ಟನ್ ನಲ್ಲಿ ಸಾವಿನಪ್ಪಿದವರ ಸಂಖ್ಯೆ 50 ಆಗಿದ್ದು, ಅಧಿಕವೆನಿಸಿದೆ. ಹಾಗೆಯೇ ನ್ಯೂಯಾರ್ಕ್ನಲ್ಲಿ 12 ಮತ್ತು ಕಾಲಿಫೋರ್ನಿಯಾದಲ್ಲಿ 11 ಮಂದಿ ಕೊರೋನಾ ಮಹಾಮಾರಿಗೆ ತುತ್ತಾಗಿದ್ದಾರೆ.
ಇನ್ನೂ ಈ ಬಗ್ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತನಾಡಿ, ಇಡೀ ವಿಶ್ವವೇ ಈ ಕಣ್ಣಿಗೆ ಕಾಣದ ವೈರಣುವಿನೊಂದಿಗೆ ಯುದ್ಧಕ್ಕೆ ನಿಂತಿದೆ. ಈ ಯುದ್ಧದಲ್ಲಿ ಖಂಡಿತವಾಗಿ ನಾವೇ ಜಯ ಸಾಧಿಸುತ್ತೇವೆ. ದೇಶದಲ್ಲಿ ಲಭ್ಯವಿರುವ ಎಲ್ಲಾ ಸೌಕರ್ಯಗಳನ್ನು ಬಳಸಿಕೊಂಡು ವೈರಾಣು ಒಡ್ಡಿರುವ ಈ ಚಾಲೆಂಜ್ನಲ್ಲಿ ನಾವು ಗೆದ್ದು ಬರಲಿದ್ದೇವೆ ಎಂದು ಕೊರೋನಾ ವಿರುದ್ಧದ ತಮ್ಮ ಹೋರಾಟದ ನಿಲುವನ್ನು ವ್ಯಕ್ತಪಡಿಸಿದರು.
ಈ ಬಗ್ಗೆ ಅಧ್ಯಕ್ಷ ಟ್ರಂಪ್ ಟ್ವೀಟ್ ಮಾಡಿ, " ಇಡೀ ವಿಶ್ವವೇ ಈ ಅಗೋಚರ ಶತ್ರುವಿನೊಂದಿಗೆ ಯುದ್ಧಕ್ಕೆ ನಿಂತಿದೆ!" ಎಂದು ಬರೆದುಕೊಂಡಿದ್ದಾರೆ.
ಮಂಗಳವಾರ ಶ್ವೇತಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಟ್ರಂಪ್ ಮಾತನಾಡಿ, ನಾವು ಈ ಸಂಕಷ್ಟದಿಂದ ಹೊರಬರಬೇಕು ಅದಕ್ಕಾಗಿ ನಾವು ಈ ಯುದ್ಧವನ್ನು ತ್ವರಿತವಾಗಿ ಮಾತ್ರವಲ್ಲದೇ ಆದರ್ಶವಾಗುವ ರೀತಿಯಲ್ಲಿ ಎದುರಿಸಿ ಗೆಲ್ಲಬೇಕು ಎಂದು ಹೇಳಿದರು.
ವೈರಸ್ ದಾಳಿಯಿಂದ ಆರ್ಥಿಕ ಸ್ಥಿತಿ ಹದಗೆಡುತ್ತಿದ್ದು, ಇದರಿಂದ ಉದ್ಯಮಗಳಿಗೆ ಸಾಕಷ್ಟು ಹಾನಿಯಾಗಿದೆ ಎಂದು ನಮಗೆ ತಿಳಿದಿದೆ. ವೈರಸ್ ದಾಳಿಯನ್ನು ಸೋಲಿಸುವುದು ನಮ್ಮ ಗುರಿಯಾಗಿದೆ ಮತ್ತು ನಾವು ಅದನ್ನು ಮಾಡೇ ಮಾಡುತ್ತೇವೆ. ಇದಕ್ಕೆ ಜಗತ್ತಿನಾದ್ಯಂತ ಹಿಂದೆಂದಿಗಿಂತಲೂ ಹೆಚ್ಚು ಮಂದಿ ಇದಕ್ಕೆ ಸಹಕರಿಸುತ್ತಿದ್ದಾರೆ ಎಂದು ಟ್ರಂಪ್ ಹೇಳಿದರು.
ಭಯೋತ್ಪಾದಕ ದಾಳಿಗಿಂತ ಕರೋನವೈರಸ್ ಸಾಂಕ್ರಾಮಿಕವು ಎರಡನೆಯ ಮಹಾಯುದ್ಧದಂತಿದೆ ಎಂದು ಎಂಎಸ್ಎನ್ಬಿಸಿಯ ಜನಪ್ರಿಯ ಅಮೆರಿಕನ್ ಟೆಲಿವಿಷನ್ ಪತ್ರಕರ್ತ ಜೋ ಸ್ಕಾರ್ಬರೋ ಹೇಳಿದ್ದಾರೆ. ಕರೋನವೈರಸ್ ವಿರುದ್ಧ ಪೀಳಿಗೆಯ ಯುದ್ಧ ನಡೆಯುತ್ತಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ಹೇಳಿದೆ.