ವಾಷಿಂಗ್ಟನ್ (ಅಮೆರಿಕ): ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೈಡನ್ ಸರ್ಕಾರ ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರಿಗೆ ಕೆಲ ನಿರ್ಬಂಧಗಳನ್ನು ವಿಧಿಸಿದೆ. ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದವರಿಗೆ ಮಾತ್ರ ವಿಮಾನ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ.
ಅಲ್ಲದೇ, ಬೋರ್ಡಿಂಗ್ಗೂ ಮುನ್ನ ಸಂಪೂರ್ಣ ವ್ಯಾಕ್ಸಿನೇಷನ್ ರಿಪೋರ್ಟ್ ತೋರಿಸಬೇಕಾಗುತ್ತದೆ. ಈ ನಿಯಮ ನವೆಂಬರ್ 8 ರಿಂದ ಜಾರಿಗೆ ಬರಲಿದೆ ಎಂದು ಯುಎಸ್ ಡಿಪಾರ್ಟ್ಮೆಂಟ್ ಆಫ್ ಸ್ಟೇಟ್ ತಿಳಿಸಿದೆ. ಸದ್ಯ ಅಮೆರಿಕದಲ್ಲಿ ಫೈಜರ್, ಮಾಡರ್ನಾ, ಜಾನ್ಸನ್ ಅಂಡ್ ಜಾನ್ಸನ್, ಆಸ್ಟ್ರಜೆನೆಕಾ, ಸಿನೋಫಾರ್ಮ್ ಮತ್ತು ಸಿನೋವಾಕ್ ಲಸಿಕೆಗಳನ್ನು ನೀಡಲಾಗುತ್ತಿದೆ. ಅಮೆರಿಕದಲ್ಲಿ 4.54 ಕೋಟಿ ಜನರಿಗೆ ಕೋವಿಡ್ ದೃಢಪಟ್ಟಿದ್ದು, ವೈರಸ್ಗೆ 7.36 ಲಕ್ಷ ಮಂದಿ ಬಲಿಯಾಗಿದ್ದಾರೆ.