ವಾಷಿಂಗ್ಟನ್(ಅಮೆರಿಕ): ಬುಧವಾರ ಇರಾನ್ನಿಂದ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಉಕ್ರೇನ್ ಬೋಯಿಂಗ್ 737 ವಿಮಾನ ಅಪಘಾತಗೊಂಡಿದ್ದು, 176 ಪ್ರಯಾಣಿಕರು ಮರಣ ಹೊಂದಿದ್ದರು. ಈ ಹಿನ್ನೆಲೆ ಭದ್ರತಾ ಪಡೆಯ ಸಿಸಿಟಿವಿ ಫೂಟೇಜ್ಗಳು ಲಭ್ಯವಾಗಿದ್ದು, ಇರಾನ್ ನಡೆಸಿದ್ದ ಎರಡು ಕ್ಷಿಪಣಿ ದಾಳಿಯಿಂದಲೇ ಈ ವಿಮಾನ ಅಪಘಾತಗೊಂಡಿದೆ ಎಂದು ಖಚಿತಪಡಿಸಲಾಗಿದೆ.
ಉಕ್ರೇನ್ ವಿಮಾನ ಅಪಘಾತಕ್ಕೆ ಇರಾನ್ ಸಿಡಿಸಿದ ಕ್ಷಿಪಣಿಯೇ ಕಾರಣ! ಸಿಸಿಟಿವಿ ದೃಶ್ಯ ಲಭ್ಯ - ಬೋಯಿಂಗ್ ವಿಮಾನ ಅಪಘಾತ
ಉಕ್ರೇನ್ ಬೋಯಿಂಗ್ 737 ವಿಮಾನ ಟೇಕ್ ಆಫ್ ಆಗಿ ಕೆಲವೇ ನಿಮಿಷಗಳಲ್ಲಿ ಪತನಗೊಂಡಿದ್ದು, ಇರಾನ್ ಸಿಡಿಸಿದ ಕ್ಷಿಪಣಿಗಳ ದಾಳಿಯೇ ಇದಕ್ಕೆ ಕಾರಣ ಎಂದು ತಿಳಿದಿದ್ದು, ಈ ಕುರಿತು ಸಿಸಿಟಿವಿ ಫೂಟೇಜ್ಗಳು ಲಭ್ಯವಾಗಿದೆ.
ಬೋಯಿಂಗ್ 737 ವಿಮಾನವು ಇರಾನ್ ನಡೆಸಿದ ಕ್ಷಿಪಣಿ ದಾಳಿಯಿಂದಲೇ ಪತನವಾಗಿದೆ ಎಂದು ಯು.ಎಸ್ ಆರೋಪಿಸಿದ್ದು, ಇದನ್ನು ತಳ್ಳಿ ಹಾಕಿದ್ದ ಇರಾನ್ ನಂತರ ವಿಮಾನ ಪತನಕ್ಕೆ ನಾವೇ ಕಾರಣ ಎಂದು ಒಪ್ಪಿಕೊಂಡಿತ್ತಾದರೂ, ಇದೀಗ ವಿಮಾನ ಪತನದ ಸ್ಪಷ್ಟ ಚಿತ್ರಣ ದೊರೆತಂತಾಗಿದೆ.
ಇರಾನಿನ ಮಿಲಿಟರಿ ತಾಣದಿಂದ ನಾಲ್ಕು ಮೈಲಿ ದೂರದಲ್ಲಿರುವ ಬಿಡ್ಕನೆಹ್ ಎಂಬಲ್ಲಿನ ಒಂದು ಸಿಸಿಟಿವಿ ಫೂಟೇಜ್ನಲ್ಲಿ ಬೋಯಿಂಗ್ ವಿಮಾನ ಪತನದ ತುಣುಕು ದಾಖಲಾಗಿದ್ದು, ರೆವಲ್ಯೂಷನರಿ ಗಾರ್ಡ್ಸ್ ಏರೋಸ್ಪೇಸ್ ಕಮಾಂಡರ್ ಬ್ರಿಗೇಡಿಯರ್ ಜನರಲ್ ಅಮಿರಲಿ ಸಹ ಈ ವಿಮಾನ ಪತನದ ಬಗ್ಗೆ ಒಪ್ಪಿಕೊಂಡಿದ್ದಾರೆ.ಇನ್ನು ಈ ಅಪಘಾತ ಹಿನ್ನೆಲೆ ನೂರಾರು ಪ್ರತಿಭಟನಾಕಾರರು ಬೀದಿಗಿಳಿದಿದ್ದು, ಇಸ್ಲಾಮಿಕ್ ದೇಶದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ.