ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ವಾಗ್ದಂಡನೆಗೆ ಒಳಪಡಿಸಲು ಡೆಮಾಕ್ರಟಿಕ್ ಪಕ್ಷದ ಸಂಸದರು ನಿರ್ಣಯೆ ತೆಗೆದುಕೊಂಡ ಬೆನ್ನಲ್ಲೇ ಇಂದು (ಬುಧವಾರ) ಅವರನ್ನು ಸಾರ್ವಜನಿಕ ವಿಚಾರಣೆಗೆ ಒಳಪಡಿಸಲಿದೆ.
ಉಕ್ರೇನ್ನಲ್ಲಿ ಅನಿಲ ಕಂಪನಿ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಮತ್ತು ಅವರ ಪುತ್ರ ಹಂಟರ್ ವಿರುದ್ಧ ಆಧಾರವಿಲ್ಲದ ಆರೋಪ ಮಾಡಿದ್ದು, ತನಿಖೆ ಮಾಡುವಂತೆ ಟ್ರಂಪ್ ಅವರ ಕಾನೂನು ಸಲಹೆಗಾರ ರೂಡಿ ಗಿಲಾನಿ ಅವರು, ಉಕ್ರೇನ್ ಅಧಿಕಾರಿಗಳನ್ನು ಒತ್ತಾಯಿಸಿದ್ದರು ಎನ್ನಲಾಗಿದೆ. ಈ ವಿವಾದಕ್ಕೆ ಸಂಬಂಧಿಸಿದಂತೆ ಡೆಮಾಕ್ರಟಿಕ್ ಪಕ್ಷ ಟ್ರಂಪ್ ಅವರ ವಿರುದ್ಧ ವಾಗ್ದಂಡನೆ ನಿರ್ಣಯವನ್ನು ಇತ್ತೀಚೆಗೆ ಮಂಡಿಸಿತ್ತು.