ವಾಶಿಂಗ್ಟನ್ :ಕೊರೊನಾ ವೈರಸ್ನಿಂದ ಏನೇ ಆದರೂ ಅಮೆರಿಕದಾದ್ಯಂತ ಸಂಪೂರ್ಣ ಲಾಕ್ಡೌನ್ ಮಾಡಲ್ಲ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಕೋವಿಡ್-19ನಿಂದಾಗಿ ಅಮೆರಿಕದಲ್ಲಿ ಹತ್ತಾರು ಸಾವಿರ ಜನ ಸಾಯಬಹುದು ಎಂದು ತಜ್ಞರು ಎಚ್ಚರಿಕೆ ನೀಡುತ್ತಿದ್ದರೂ ಲಾಕ್ಡೌನ್ ಸಾಧ್ಯವಿಲ್ಲ ಎಂದಿದ್ದಾರೆ ಟ್ರಂಪ್.
ಈ ಕುರಿತು ಬುಧವಾರ ಸ್ಪಷ್ಟನೆ ನೀಡಿದ ಟ್ರಂಪ್, ಜನ ಮನೆಯಲ್ಲೇ ಇರಬೇಕು ಎಂಬ ನೀತಿ ಜಾರಿಗೊಳಿಸುವ ವಿವೇಚನೆಯನ್ನು ಆಯಾ ರಾಜ್ಯಗಳ ಗವರ್ನರ್ಗಳಿಗೇ ಬಿಡಲಾಗಿದೆ. ಆದರೂ ಕೋವಿಡ್-19 ಸೋಂಕು ಹೆಚ್ಚಾಗಿರುವ ದೇಶದ ಹಾಟ್ಸ್ಪಾಟ್ ಪ್ರದೇಶಗಳಲ್ಲಿ ವಿಮಾನ ಹಾಗೂ ರೈಲು ಸಂಚಾರಗಳನ್ನು ನಿಯಂತ್ರಿಸುವ ಕುರಿತಾಗಿ ಯೋಚಿಸಲಾಗುತ್ತಿದೆ ಎಂದು ಅವರು ಹೇಳಿದರು.