ವಾಷಿಂಗ್ಟನ್ :ಹೆಚ್ಚು ಪೂರೈಕೆ ಮತ್ತು ಕಡಿಮೆ ದರದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ತೈಲ ಕಂಪನಿಗಳಿಗೆ ನೆರವಾಗಲು ಯೋಜನೆ ರೂಪಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ತೈಲ ಕಂಪನಿಗಳಿಗೆ ನೆರವಾಗಲು ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಟ್ರಂಪ್ ಸೂಚನೆ - ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಆರ್ಥಿಕ ಸಂಕಷ್ಟದಲ್ಲಿರುವ ಅಮೆರಿಕದ ತೈಲ ಕಂಪನಿಗಳಿಗೆ ನೆರವಾಗಲು ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೂಚಿಸಿದ್ದಾರೆ.
Trump orders plan to fund US oil companies
ಈ ಬಗ್ಗೆ ಟ್ವೀಟ್ ಮಾಡಿರುವ ಟ್ರಂಪ್, ನಾವು ಎಂದಿಗೂ ಯುಎಸ್ ತೈಲ ಮತ್ತು ಅನಿಲ ಉದ್ಯಮವನ್ನು ನಿರಾಸೆಗೊಳಿಸುವುದಿಲ್ಲ. ತೈಲ ಕಂಪನಿಗಳಿಗೆ ನೆರವಾಗಲು ಯೋಜನೆ ರೂಪಿಸುವಂತೆ ಇಂಧನ ಇಲಾಖೆ ಮತ್ತು ಖಜಾನೆ ಇಲಾಖೆಯ ಕಾರ್ಯದರ್ಶಿಗಳಿಗೆ ನಾನು ಸೂಚಿಸಿದ್ದೇನೆ. ನಾವು ರೂಪಿಸುವ ಯೋಜನೆಯಿಂದ ತೈಲ ಕಂಪನಿಗಳಿಗೆ ಹಣಕಾಸಿನ ನೆರವು ಸಿಗಲಿದೆ. ಇದರಿಂದ ಭವಿಷ್ಯದಲ್ಲಿ ಪ್ರಮುಖ ಕಂಪನಿಗಳು ಮತ್ತು ಉದ್ಯೋಗಗಳು ಸುರಕ್ಷಿತವಾಗಿರಲಿದೆ ಎಂದು ತಿಳಿಸಿದ್ದಾರೆ.