ನವದೆಹಲಿ:ಈ ವರ್ಷ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದಿಂದ ಅಭ್ಯರ್ಥಿಯಾಗಿ ಮರು ನಾಮನಿರ್ದೇಶನಗೊಂಡಿರುವ ಡೊನಾಲ್ಡ್ ಟ್ರಂಪ್, ಶ್ವೇತಭವನದಿಂದ ಸ್ವೀಕಾರ ಭಾಷಣ ಮಾಡುವ ಮೂಲಕ ಹ್ಯಾಚ್ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆಯೇ ಎಂಬ ಬಗ್ಗೆ ಚರ್ಚೆ ನಡೆದಿದೆ. ಈ ಬಗೆಗಿನ ವ್ಯಾಪಕ ಊಹಾಪೋಹಗಳ ಮಧ್ಯೆ, ಹಾಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತಾಂತ್ರಿಕವಾಗಿ ಈ ಕಾಯ್ದೆಯನ್ನು ಉಲ್ಲಂಘಿಸಿಲ್ಲ. ಆದರೆ, ಅಮೆರಿಕ ಸರ್ಕಾರವನ್ನು ನಡೆಸುವ ಎಲ್ಲಾ ನಿಯಮಾವಳಿಗಳನ್ನು ಸಾರ ಸಗಟಾಗಿ ಉಲ್ಲಂಘಿಸಿದ್ದಾರೆ ಎಂದು ಅಮೆರಿಕದ ಕಾನೂನುಗಳ ಬಗ್ಗೆ ಸಂಪೂರ್ಣವಾಗಿ ಅರಿವಿರುವ ಭಾರತ ಮೂಲದ ಹಿರಿಯ ವಕೀಲರು ಹೇಳಿದ್ದಾರೆ.
ಅವರು (ಟ್ರಂಪ್) ಹಾಲಿ ಅಧ್ಯಕ್ಷರಾಗಿರುವುದರಿಂದ, ತಾಂತ್ರಿಕವಾಗಿ ಡೊನಾಲ್ಡ್ ಟ್ರಂಪ್ ಈ ಕಾಯ್ದೆಯನ್ನು ಉಲ್ಲಂಘಿಸಿಲ್ಲ" ಎಂದು ಹಾರ್ವರ್ಡ್ ವಿವಿಯಲ್ಲಿ ಓದಿರುವ ಸುಪ್ರೀಂ ಕೋರ್ಟ್ ವಕೀಲ ಮತ್ತು ಹಾರ್ವರ್ಡ್ ಕಾನೂನು ಕಾಲೇಜಿನಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರ ಸಮಕಾಲೀನರಾಗಿದ್ದ ಡಾ. ಸುರತ್ ಸಿಂಗ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ. ಕೋವಿಡ್ -19 ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಬಾಧಿಸುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂಬ ಬೇಡಿಕೆಯನ್ನು ಸಹ ಡೊನಾಲ್ಡ್ ಟ್ರಂಪ್ ಗಣನೆಗೆ ತೆಗೆದುಕೊಳ್ಳಬೇಕಾಗಿದೆ ಎಂದು ಡಾ. ಸಿಂಗ್ ಹೇಳುತ್ತಾರೆ.
ಗುರುವಾರ ರಾತ್ರಿ, ಸದ್ಯ ನಡೆಯುತ್ತಿರುವ ರಿಪಬ್ಲಿಕನ್ ರಾಷ್ಟ್ರೀಯ ಸಮಾವೇಶದ (ಆರ್‌ಎನ್‌ಸಿ) ಕೊನೆಯ ದಿನದಂದು ಶ್ವೇತಭವನದ ಭಾಷಣದ ಸಂದರ್ಭದಲ್ಲಿ ಡೊನಾಲ್ಡ್ ಟ್ರಂಪ್ ಈ ಸ್ವೀಕಾರ ಮಾಡಿದ್ಧಾರೆ. 1939 ರ ಹ್ಯಾಚ್ ಆಕ್ಟ್, ಅಪಾಯಕಾರಿ ರಾಜಕೀಯ ಚಟುವಟಿಕೆಗಳನ್ನು ತಡೆಗಟ್ಟುವ ಒಂದು ಕಾಯ್ದೆ. ಇದು ಅಮೆರಿಕ ದೇಶದ ಫೆಡರಲ್ ಕಾನೂನು. ಅಮೆರಿಕ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಹೊರತುಪಡಿಸಿ ಫೆಡರಲ್ ಸರ್ಕಾರದ ಕಾರ್ಯನಿರ್ವಾಹಕ ವಿಭಾಗದಲ್ಲಿ ನಾಗರಿಕ ಸೇವಾ ನೌಕರರು ಕೆಲವು ರೀತಿಯ ರಾಜಕೀಯ ಚಟುವಟಿಕೆಗಳಲ್ಲಿ ತೊಡಗುವುದನ್ನೇ ಕಾಯ್ದೆಯಲ್ಲಿರುವ ಮುಖ್ಯ ನಿಬಂಧನೆಯು ನಿಷೇಧಿಸುತ್ತದೆ. ಆಗಸ್ಟ್ 2, 1939 ರಂದು ಈ ಕಾನೂನು ಜಾರಿಗೆ ಬಂದಿದೆ. ಈ ಕಾನೂನನ್ನು ನ್ಯೂ ಮೆಕ್ಸಿಕೋದ ಸೆನೆಟರ್ ಕಾರ್ಲ್ ಹ್ಯಾಚ್ ಎಂದು ಹೆಸರಿಸಲಾಗಿದೆ. ಇತ್ತೀಚೆಗೆ 2012 ರಲ್ಲಿ ಅಂದಿನ ಅಧ್ಯಕ್ಷ ಬರಾಕ್ ಒಬಾಮಾ ಅವರ ಅವಧಿಯಲ್ಲಿ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಮುಖ್ಯವಾಗಿ ರಾಜ್ಯ, ಡಿಸ್ಟ್ರಿಕ್ಟ್ ಆಫ್ ಕೊಲಂಬಿಯಾ, ಅಥವಾ ಸ್ಥಳೀಯ ಕಾರ್ಯನಿರ್ವಾಹಕ ಏಜೆನ್ಸಿಗಳು ಕೆಲಸ ಮಾಡುವ ಮತ್ತು ಫೆಡರಲ್ ಸರ್ಕಾರದಿಂದ ಸಾಲಗಳು ಅಥವಾ ಅನುದಾನದಿಂದ ಸಂಪೂರ್ಣ ಅಥವಾ ಭಾಗಶಃ ಹಣಕಾಸು ಪಡೆದಿರುವ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಕೆಲಸ ಮಾಡುವ ವ್ಯಕ್ತಿಗಳ ರಾಜಕೀಯ ಚಟುವಟಿಕೆಯನ್ನು ಹ್ಯಾಚ್ ಆಕ್ಟ್ ನಿರ್ಬಂಧಿಸುತ್ತದೆ ಎಂದು ಯುಎಸ್ ಆಫೀಸ್ ಆಫ್ ಸ್ಪೆಷಲ್ ಕೌನ್ಸಿಲ್ ಹೇಳುತ್ತದೆ.
ಸಾಮಾನ್ಯವಾಗಿ, ರಾಜ್ಯ, ಡಿ.ಸಿ, ಅಥವಾ ಸರ್ಕಾರದ ನಿಯಮಾವಳಿ ಮೇಲೆ ನಡೆಯುವ ಸ್ಥಳೀಯ ಏಜೆನ್ಸಿಯೊಂದಿಗಿನ ಉದ್ಯೋಗಿಗಳು ಸಹ ಪ್ರಶ್ನಾರ್ಹರಾಗಿರುತ್ತಾರೆ. ಇದರ ಜೊತೆಗೆ, ಉದ್ಯೋಗಿ ಎರಡು ಅಥವಾ ಹೆಚ್ಚಿನ ಉದ್ಯೋಗಗಳನ್ನು ಹೊಂದಿರುವಾಗ, ಪ್ರಧಾನ ಉದ್ಯೋಗವನ್ನು ಸಾಮಾನ್ಯವಾಗಿ ಹೆಚ್ಚಿನ ಕೆಲಸದ ಸಮಯ ಮತ್ತು ಹೆಚ್ಚು ಗಳಿಸಿದ ಆದಾಯಕ್ಕೆ ಕಾರಣವಾಗುವ ಕೆಲಸ ಎಂದು ಪರಿಗಣಿಸಲಾಗುತ್ತದೆ. ಆದರೂ, ಯುನೈಟೆಡ್ ಸ್ಟೇಟ್ಸ್ ಆಫ್ ಅಮರಿಕದ ಶ್ವೇತಭವನದಲ್ಲಿ ಸ್ವೀಕಾರ ಭಾಷಣ ಮಾಡುವಲ್ಲಿ ಟ್ರಂಪ್ ತಾಂತ್ರಿಕವಾಗಿ ತಪ್ಪಾಗಿಲ್ಲವಾದರೂ, ಆರ್‌ಎನ್‌ಸಿ (ರಿಪಬ್ಲಿಕನ್ ರಾಷ್ಟ್ರೀಯ ಸಮಾವೇಶ)ಯ ಭಾಗವಾಗಿರುವ ಕೆಲಸವನ್ನು ಅಧಿಕೃತ ಕಚೇರಿಯ ಭಾಗವಾಗಿಸುವ ಮೂಲಕ ಅವರು ನೈತಿಕವಾಗಿ ತಪ್ಪು ಮಾಡಿದ್ದಾರೆ ಎಂದು ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ.