ವಾಷಿಂಗ್ಟನ್:ಜಾಗತಿಕ ಸಂಘಟನೆಗಳು 'ಚೀನಾ ಕೇಂದ್ರಿತ' ಎಂದು ಆರೋಪಿಸಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವಿಶ್ವ ಆರೋಗ್ಯ ಸಂಘಟನೆ(WHO)ಗೆ ಅಮೆರಿಕದ ಹಣವನ್ನು ಸ್ಥಗಿತಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ.
ಚೀನಾ ಪರ WHO ಎಂದ ಟ್ರಂಪ್; ಜಾಗತಿಕ ಆರೋಗ್ಯ ಸಂಸ್ಥೆಗೆ ಹಣಕಾಸು ನೆರವು ರದ್ದತಿ ಬೆದರಿಕೆ
ಕೊರೊನಾ ಬಗ್ಗೆ ಚೀನಾ ನೀಡಿದ ಅಧಿಕೃತ ಪ್ರಮಾಣಕ್ಕಿಂತ ಹೆಚ್ಚಿನ ಜನರು ಅಲ್ಲಿ ಸಾವನ್ನಪ್ಪಿದ್ದಾರೆ ಎಂದು ನಂಬಲು ಹಲವಾರು ಕಾರಣಗಳಿದ್ದರೂ, ವೈರಸ್ ವಿಚಾರವಾಗಿ ಚೀನಾದ ಪಾರದರ್ಶಕತೆಯನ್ನು WHO ಶ್ಲಾಘಿಸಿದೆ. ಇದು ಡೊನಾಲ್ಡ್ ಟ್ರಂಪ್ ಸಿಟ್ಟಿಗೆ ಕಾರಣವಾಗಿದೆ.
ಡೊನಾಲ್ಡ್ ಟ್ರಂಪ್
ಏಕಾಏಕಿ ಕೊರೊನಾ ಸೋಂಕಿನ ತೀವ್ರತೆಯನ್ನು ಕಡಿಮೆ ಮಾಡಲು ಕೆಲ ತಿಂಗಳುಗಳ ಹಿಂದೆ ಬೀಜಿಂಗ್ ತೆಗೆದುಕೊಂಡ ಕ್ರಮಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಅನುಸರಿಸುತ್ತಿದೆ ಎಂದು ಟ್ರಂಪ್ ಒತ್ತಿ ಹೇಳಿದ್ದಾರೆ. ಹೀಗಾಗಿ ವಿಶ್ವ ಆರೋಗ್ಯ ಸಂಘಟನೆಯ ಕ್ರಮಕ್ಕೆ ಆಕ್ರೋಶಗೊಂಡಿರುವ ಟ್ರಂಪ್ ಅಮೆರಿಕದಿಂದ ಸಂಘಟನೆಗೆ ನೀಡುವ ಹಣವನ್ನು ಸ್ಥಗಿತಗೊಳಿಸುವ ಬೆದರಿಕೆ ನೀಡಿದ್ದಾರೆ.
ಚೀನಾ ನೀಡಿದ ಅಧಿಕೃತ ಪ್ರಮಾಣಕ್ಕಿಂತ ಹೆಚ್ಚಿನ ಜನರು ಅಲ್ಲಿ ವೈರಸ್ನಿಂದ ಸಾವನ್ನಪ್ಪಿದ್ದಾರೆ ಎಂದು ನಂಬಲು ಹಲವಾರು ಕಾರಣಗಳಿದ್ದರೂ, ವೈರಸ್ ವಿಚಾರವಾಗಿ ಚೀನದ ಪಾರದರ್ಶಕತೆಯನ್ನು WHO ಶ್ಲಾಘಿಸಿದೆ.