ಕರ್ನಾಟಕ

karnataka

ETV Bharat / international

ಏನಿದು 270? ಅಮೆರಿಕ ಚುನಾವಣೆಯ ಗಣಿತ ಬೇರೆಯೇ ಇದೆ..! - ಟ್ರಂಪ್

55 ಎಲೆಕ್ಟೋರಲ್​ ವೋಟ್​ಗಳೊಂದಿಗೆ ಕ್ಯಾಲಿಫೋರ್ನಿಯಾ ಮೊದಲ ಸ್ಥಾನದಲ್ಲಿದೆ. ನಂತರ 38 ವೋಟ್​ಗಳೊಂದಿಗೆ ಟೆಕ್ಸಾಸ್​, ನ್ಯೂಯಾರ್ಕ್​​ ಮತ್ತು ಫ್ಲೋರಿಡಾ ತಲಾ 29, ಇಲಿನಾಯ್ಸ್​ ಮತ್ತು ಪೆನ್ಸಿಲ್ವೇನಿಯಾ ತಲಾ 20, ಓಹಿಯೊ 18, ಜಾರ್ಜಿಯಾ ಮತ್ತು ಮಿಚಿಗನ್ ತಲಾ 16 ಹಾಗೂ ನಾರ್ತ್ ಕರೊಲಿನಾ 15 ಎಲೆಕ್ಟೋರಲ್​ ಮತಗಳನ್ನು ಹೊಂದಿವೆ.

math game behind US elections - magic number 270
math game behind US elections - magic number 270

By

Published : Nov 2, 2020, 5:57 PM IST

ವಾಶಿಂಗ್ಟನ್ : ಇಷ್ಟಕ್ಕೂ ಏನಿದು 270? ಅಮೆರಿಕ ಚುನಾವಣೆಗೂ ಸಂಖ್ಯೆ 270ಕ್ಕೂ ಎತ್ತಣಿಂದೆತ್ತ ಸಂಬಂಧ ಅಂತೀರಾ? ಸಂಬಂಧವಿದೆ ಸ್ವಾಮಿ.. ಈ 270 ಸಂಖ್ಯೆಯೇ ಅಧ್ಯಕ್ಷ ಗಾದಿ ಏರಲು ಮ್ಯಾಜಿಕ್ ಅಂಕಿಯಾಗಿದೆ. ಅದು ಹೇಗೆ ಎಂಬುದನ್ನು ಹೇಳ್ತೀವಿ, ಕೇಳಿ...

ಅದಕ್ಕೆ ಅಂತಾರೆ 'ಎಲೆಕ್ಟೋರಲ್ ಕಾಲೇಜ್​'

2016 ರಲ್ಲಿ ಹಿಲರಿ ಕ್ಲಿಂಟನ್​ ಅವರಿಗೆ ಟ್ರಂಪ್​ ಅವರಿಗಿಂತಲೂ 2.9 ಮಿಲಿಯನ್​ ಹೆಚ್ಚು ಮತಗಳು ದೊರಕಿದ್ದವು. ಆದರೂ ಅವರು ಅಧ್ಯಕ್ಷ ಚುನಾವಣೆ ಸೋತರು, ಟ್ರಂಪ್ ಗೆದ್ದರು. ಹೌದು.. ಅಮೆರಿಕ ಸಂವಿಧಾನದಡಿ ಜಾರಿಯಲ್ಲಿರುವ ಎಲೆಕ್ಟೋರಲ್​ ಕಾಲೇಜ್​ ವ್ಯವಸ್ಥೆಯಲ್ಲಿ ಅಧ್ಯಕ್ಷ ಟ್ರಂಪ್ ಗೆಲುವು ಸಾಧಿಸಿದ್ದರು!

ಇಲ್ಲಿಯೇ ಇರೋದು ಮ್ಯಾಜಿಕ್ ನಂಬರ್​ನ ಆಟ. ಅಮೆರಿಕದ ಅಧ್ಯಕ್ಷರಾಗಬೇಕಾದರೆ ಅವರು 270 ಎಲೆಕ್ಟೋರಲ್​ ಮತಗಳನ್ನು ಗೆಲ್ಲಬೇಕಾಗುತ್ತದೆ. ಅಮೆರಿಕದಲ್ಲಿರುವ ಒಟ್ಟು 50 ದೇಶಗಳಲ್ಲಿ ಹರಡಿರುವ 538 ಎಲೆಕ್ಟೋರಲ್​ ಮತಗಳ ಪೈಕಿ 270 ಮತ ಪಡೆದವರು ಬಹುಮತ ಸಾಧಿಸಿದಂತಾಗುತ್ತದೆ.

ಅಂಕಿ ಸಂಖ್ಯೆಗಳ ಆಟ

ಪ್ರತಿಯೊಂದು ರಾಜ್ಯವು ಸಂಸತ್ತಿನಲ್ಲಿ ಹೊಂದಿರುವ ಸ್ಥಾನಗಳು ಹಾಗೂ ಅಲ್ಲಿಂದ ಚುನಾಯಿತರಾಗುವ ಇಬ್ಬರು ಸೆನೇಟರ್​ಗಳ ಸಂಖ್ಯೆಯ ಆಧಾರದಲ್ಲಿ ಆಯಾ ರಾಜ್ಯಕ್ಕೆ ಭಿನ್ನವಾದ ಎಲೆಕ್ಟೋರಲ್ ಸಂಖ್ಯೆಯನ್ನು ನೀಡಲಾಗಿದೆ. ಇದನ್ನು ಇನ್ನಷ್ಟು ವಿವರವಾಗಿ ನೋಡಿದರೆ ಅರ್ಥವಾಗುತ್ತದೆ.

55 ಎಲೆಕ್ಟೋರಲ್​ ವೋಟ್​ಗಳೊಂದಿಗೆ ಕ್ಯಾಲಿಫೋರ್ನಿಯಾ ಮೊದಲ ಸ್ಥಾನದಲ್ಲಿದೆ. ನಂತರ 38 ವೋಟ್​ಗಳೊಂದಿಗೆ ಟೆಕ್ಸಾಸ್​, ನ್ಯೂಯಾರ್ಕ್​​ ಮತ್ತು ಫ್ಲೋರಿಡಾ ತಲಾ 29, ಇಲಿನಾಯ್ಸ್​ ಮತ್ತು ಪೆನ್ಸಿಲ್ವೇನಿಯಾ ತಲಾ 20, ಓಹಿಯೊ 18, ಜಾರ್ಜಿಯಾ ಮತ್ತು ಮಿಚಿಗನ್ ತಲಾ 16 ಹಾಗೂ ನಾರ್ತ್ ಕರೊಲಿನಾ 15 ಎಲೆಕ್ಟೋರಲ್​ ಮತಗಳನ್ನು ಹೊಂದಿವೆ.

ವಿಜಯದತ್ತ ಟ್ರಂಪ್​ ಸಾಗಬಹುದಾದ ಹಾದಿ

270 ಮ್ಯಾಜಿಕ್​ ಅಂಕಿಯ ಗುರಿ ಮುಟ್ಟಲು ಟ್ರಂಪ್ ಬಳಿ ಹಲವಾರು ದಾರಿಗಳಿವೆ. ಆದರೆ ಈ ಬಾರಿ ಫ್ಲೋರಿಡಾ ಮತ್ತು ಪೆನ್ಸಿಲ್ವೇನಿಯಾಗಳಲ್ಲಿ ಜಯಿಸುವುದು ಮುಖ್ಯ ಮಾರ್ಗವಾಗಿದೆ. ಈ ಎರಡು ರಾಜ್ಯಗಳೊಂದಿಗೆ 2016 ರಲ್ಲಿ ಅತಿ ಕಡಿಮೆ ಅಂತರದಿಂದ ಅವರು ಗೆದ್ದಿದ್ದ ನಾರ್ತ್ ಕರೊಲಿನಾ ಮತ್ತು ಅರಿಜೋನಾ ರಾಜ್ಯಗಳು ಹಾಗೂ 2016 ರಲ್ಲಿ ಅವರು ಗೆದ್ದಿದ್ದ ಆದರೆ ಈ ಬಾರಿ ಪೈಪೋಟಿ ಹೆಚ್ಚಾಗಿರುವ ಜಾರ್ಜಿಯಾ ಮತ್ತು ಓಹಿಯೊ ರಾಜ್ಯಗಳನ್ನು ಮತ್ತೆ ತಮ್ಮದಾಗಿಸಿಕೊಂಡರೆ ಅವರು ಮತ್ತೆ ಅಧ್ಯಕ್ಷರಾಗುವುದು ಸುಲಭವಾಗುತ್ತದೆ. 29 ಎಲೆಕ್ಟೋರಲ್ ವೋಟ್​ ಹೊಂದಿರುವ ಫ್ಲೋರಿಡಾ ರಾಜ್ಯವು ಟ್ರಂಪ್​ ಗೆಲುವು ಅಥವಾ ಸೋಲಿನಲ್ಲಿ ನಿಸ್ಸಂಶಯವಾಗಿಯೂ ನಿರ್ಣಾಯಕ ಪಾತ್ರ ವಹಿಸಲಿದೆ. ಫ್ಲೋರಿಡಾ ಸೋತರೆ ಟ್ರಂಪ್ ಗೆಲುವುದು ಕನಸಿನ ಮಾತು ಎನ್ನುತ್ತಾರೆ ರಾಜಕೀಯ ತಜ್ಞರು.

ಬಿಡೆನ್ ಜಯ ಗಳಿಸಬಹುದಾದ ಮಾರ್ಗ ಹೀಗಿದೆ

ದೇಶದ ಪಶ್ಚಿಮ ಮಧ್ಯ ಭಾಗ ಹಾಗೂ ಕಳೆದ ಬಾರಿ ಟ್ರಂಪ್ ಸೋತಿದ್ದ ಮಿಚಿಗನ್, ವಿಸ್ಕಾನ್ಸಿನ್ ಮತ್ತು ಪೆನ್ಸಿಲ್ವೇನಿಯಾಗಳಲ್ಲಿ ಬಿಡೆನ್ ತಮ್ಮ ಗಮನವನ್ನು ಸಂಪೂರ್ಣವಾಗಿ ಕೇಂದ್ರೀಕರಿಸಿದ್ದಾರೆ. 1996 ರಿಂದ ಒಮ್ಮೆಯೂ ಡೆಮೊಕ್ರಾಟ್ ಅಧ್ಯಕ್ಷೀಯ ಅಭ್ಯರ್ಥಿಗೆ ಮಣೆ ಹಾಕದ ಅರಿಜೋನಾ ಮೇಲೆಯೂ ಬಿಡೆನ್ ಕಣ್ಣಿಟ್ಟಿದ್ದಾರೆ. ಇನ್ನು ಸಹಜವಾಗಿಯೇ ಫ್ಲೋರಿಡಾ ಗೆಲ್ಲಲು ಬಿಡೆನ್ ಸರ್ವಪ್ರಯತ್ನ ಮಾಡುತ್ತಿದ್ದಾರೆ. ಬಿಡೆನ್ ಫ್ಲೋರಿಡಾ ಗೆದ್ದರೆ ಅಧ್ಯಕ್ಷ ಗಾದಿಯತ್ತ ಸಾಗುವುದು ಬಹುತೇಕ ಖಚಿತ ಎನ್ನಬಹುದು.

ABOUT THE AUTHOR

...view details