ನ್ಯೂಯಾರ್ಕ್(ಅಮೆರಿಕ):ಸಾಮೂಹಿಕ ಪ್ರಯತ್ನಗಳಿಂದ ಮಾತ್ರವೇ ಸುಸ್ಥಿರ ಅಭಿವೃದ್ಧಿಯನ್ನು (inclusive development) ಸಾಧಿಸಲು ಸಾಧ್ಯ. ಭಾರತ ಇದೇ ದಿಕ್ಕಿನಲ್ಲಿ ಕೆಲಸ ಮಾಡುವುದನ್ನು ಮುಂದುವರೆಸುತ್ತದೆ ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತ ಅಭಿಪ್ರಾಯ ವ್ಯಕ್ತಪಡಿಸಿದೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಸುಸ್ಥಿರ ಅಭಿವೃದ್ಧಿ ಕುರಿತು ಮಾತನಾಡಿದ ವಿಶ್ವಸಂಸ್ಥೆಯ ಮೊದಲ ಕಾರ್ಯದರ್ಶಿ ಸ್ನೇಹಾ ದುಬೆ, ಹವಾಮಾನ ಬದಲಾವಣೆಯ ವಿಚಾರದಲ್ಲಿ ಆದ ಪ್ಯಾರಿಸ್ ಒಪ್ಪಂದದ ಗುರಿಗಳನ್ನು ಪೂರೈಸಿದ ಜಿ-20 ಒಕ್ಕೂಟದಲ್ಲಿನ ಏಕೈಕ ರಾಷ್ಟ್ರ ಭಾರತ ಎಂದು ಪುನರುಚ್ಚರಿಸಿದರು.
ರಾಷ್ಟ್ರಗಳು ಅಭಿವೃದ್ಧಿ ಹೊಂದಲು ಸಾಕಷ್ಟು ಕೈಗಾರಿಕೆಗಳನ್ನು ಹೊಂದಬೇಕಾಗಿದೆ. ಆ ಕೈಗಾರಿಕೆಗಳು ಸಾಕಷ್ಟು ಇಂಗಾಲವನ್ನೂ ಹೊರಸೂಸುತ್ತವೆ. ಇದರಿಂದ ಮಾಲಿನ್ಯ ಪ್ರಮಾಣವೂ ಕೂಡಾ ಹೆಚ್ಚಾಗುತ್ತದೆ. ಆದರೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಇನ್ನೂ ಇಂಗಾಲದ ಪ್ರಮಾಣ ಹೆಚ್ಚಾಗಲು ಕಾರಣ. ಅವುಗಳು ಇಂಗಾಲದ 'ಉತ್ಪಾದನೆ' ಪ್ರಮಾಣ ಕಡಿಮೆ ಮಾಡಬೇಕೆಂದು ಸ್ನೇಹಾ ದುಬೆ ಒತ್ತಾಯಿಸಿದರು.
ಈಗಾಗಲೇ ನಾವು ಮಾಲಿನ್ಯ ತಡೆಯಲು ಅಂತಾರಾಷ್ಟ್ರೀಯ ಸೌರ ಒಕ್ಕೂಟದಂತಹ ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದ್ದೇವೆ ಎಂದ ದುಬೆ, ಕಳೆದ ವರ್ಷಗಳಲ್ಲಿ ಅರಣ್ಯದ ಪ್ರಮಾಣ ಹೆಚ್ಚಿಸಿಕೊಂಡಿರುವ ಮೂರು ರಾಷ್ಟ್ರಗಳಲ್ಲಿ ಭಾರತವಿದೆ. ಈ ಅವಧಿಯಲ್ಲಿ ಭಾರತ ಸುಮಾರು 3 ಮಿಲಿಯನ್ ಅರಣ್ಯ ಪ್ರದೇಶವನ್ನು ಹೆಚ್ಚಿಸಿಕೊಂಡಿದೆ ಎಂದಿದ್ದಾರೆ.