ಕರ್ನಾಟಕ

karnataka

ETV Bharat / international

ಜನಾಂಗೀಯ ಸಮಾನತೆ ಬೆಂಬಲಿಸುವ ಎಲ್ಲರಿಗೂ ನಮ್ಮ ಬೆಂಬಲ: ಫ್ಲಾಯ್ಡ್​ ಸಾವಿಗೆ ಸುಂದರ್​ ಪಿಚೈ ಪ್ರತಿಕ್ರಿಯೆ

ದುಃಖ, ಕೋಪ, ಭಯ ಹೊಂದಿರುವವರು ಯಾರೂ ಒಬ್ಬಂಟಿಯಲ್ಲ ಎಂದಿರುವ ಸುಂದರ್​ ಪಿಚೈ, ಗೂಗಲ್​ ಸರ್ಚ್ ಪೇಜ್​ನ ಮುಖಪುಟವನ್ನು ಶೇರ್ ಮಾಡಿ ಜನಾಂಗೀಯ ಸಮಾನತೆಯನ್ನು ಹುಡುಕುವ ಎಲ್ಲರನ್ನೂ ನಾವು ಬೆಂಬಲಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.

Sundar Pichai
ಸುಂದರ್ ಪಿಚೈ

By

Published : Jun 2, 2020, 9:52 AM IST

ವಾಷಿಂಗ್ಟನ್​(ಅಮೆರಿಕ): ಜನಾಂಗೀಯ ಸಮಾನತೆಯನ್ನು ಗೂಗಲ್​ ಬಯಸುತ್ತದೆ ಎಂದು ಸಂಸ್ಥೆಯ​ ಸಿಇಒ ಸುಂದರ್ ಪಿಚೈ ಹೇಳಿದ್ದಾರೆ. ಕಪ್ಪು ವರ್ಣೀಯ ವ್ಯಕ್ತಿ ಜಾರ್ಜ್​ ಫ್ಲಾಯ್ಡ್​ ಸಾವಿನ ಸಂಬಂಧ ಇದೇ ಮೊದಲ ಬಾರಿಗೆ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ತಮ್ಮ ಟ್ವಿಟರ್​ ಖಾತೆಯಲ್ಲಿ ಬರೆದುಕೊಂಡಿರುವ ಅವರು 'ಅಮೆರಿಕದ ಗೂಗಲ್​ ಹಾಗೂ ಯೂಟ್ಯೂಬ್​ ಮುಖಪುಟಗಳಲ್ಲಿ ಜನಾಂಗೀಯ ಸಮಾನತೆಗಾಗಿ ಬೆಂಬಲ ಸೂಚಿಸಲಾಗುತ್ತದೆ. ಇದರ ಮೂಲಕ ಜಾರ್ಜ್​ ಫ್ಲೋಯ್ಡ್​, ಬ್ರೆವೊನ್ನಾ ಟೇಲರ್​, ಅಹ್ಮೌದ್ ಆರ್ಬೆರಿ ಅವರನ್ನು ನೆನಪಿಸಿಕೊಳ್ಳಲಾಗುತ್ತದೆ'' ಎಂದಿದ್ದಾರೆ.

ದುಃಖ, ಕೋಪ, ಭಯ ಹೊಂದಿರುವವರು ಯಾರೂ ಒಬ್ಬಂಟಿಯಲ್ಲ ಎಂದಿರುವ ಅವರು, ಗೂಗಲ್​ ಸರ್ಚ್ ಪೇಜ್​ನ ಮುಖಪುಟವನ್ನು ಶೇರ್ ಮಾಡಿ ಜನಾಂಗೀಯ ಸಮಾನತೆಯನ್ನು ಹುಡುಕುವ ಎಲ್ಲರನ್ನೂ ನಾವು ಬೆಂಬಲಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಸುಂದರ್ ಪಿಚೈ ಮೊದಲಿನಿಂದಲೂ ಜನಾಂಗೀಯ ತಾರತಮ್ಯದ ವಿರುದ್ಧ ಧ್ವನಿ ಎತ್ತುತ್ತಿದ್ದು, ಇದಕ್ಕೂ ಮೊದಲು ಅಮೆರಿಕಕ್ಕೆ ಮುಸ್ಲಿಮರ ಆಗಮನಕ್ಕೆ ನಿರ್ಬಂಧ ವಿಧಿಸಿದ್ದರ ವಿರುದ್ಧವೂ ಕೂಡಾ ಆಕ್ಷೇಪ ವ್ಯಕ್ತಪಡಿಸಿದ್ದರು.

ABOUT THE AUTHOR

...view details