ಕರ್ನಾಟಕ

karnataka

ETV Bharat / international

13,500 ಅಡಿ ಎತ್ತರದಲ್ಲಿ ಗಾಳಿಯಲ್ಲೇ ಸ್ಕೈ ಸರ್ಫಿಂಗ್​ ಡೈವ್ ಮಾಡಿ ವಿಶ್ವದಾಖಲೆ ಬರೆದ ವೀರ!

ನವೆಂಬರ್​ 1 ರಂದು ಕೀತ್ ಎಡ್ವರ್ಡ್ ಸ್ನೈಡರ್ ಗಿಜಾದ ಪಿರಮಿಡ್‌ಗಳ ಮೇಲಿಂದ ಹಾರುವ ಮೂಲಕ ಸ್ಕೈ ಸರ್ಪ್​ನಲ್ಲಿ ಸ್ಕೈ ಸರ್ಫರ್ ಕೀತ್ ಎಡ್ವರ್ಡ್ ಸ್ನೈಡರ್ ವಿಶ್ವದಾಖಲೆ ನಿರ್ಮಿಸಿದ್ದಾರೆ.

skysurfer
ಸ್ಕೈ ಸರ್ಫಿಂಗ್​ ಡೈವ್

By

Published : Dec 3, 2021, 10:38 PM IST

ನ್ಯೂಯಾರ್ಕ್:ಅಮೆರಿಕದ ಖ್ಯಾತ ಸ್ಕೈ ಸರ್ಫರ್ ಕೀತ್ ಎಡ್ವರ್ಡ್ ಸ್ನೈಡರ್ 13,500 ಅಡಿ ಎತ್ತರದಲ್ಲಿ ಗಾಳಿಯಲ್ಲಿ 160 ಸುತ್ತುಗಳನ್ನು (ಸ್ಪಿನ್‌) ಹಾಕುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಕಳೆದ ನವೆಂಬರ್ 1 ರಂದು ಈಜಿಪ್ಟ್​ನ ಪಿರಮಿಡ್​ ಮೇಲೆ 13,500 ಅಡಿ ಎತ್ತರದಿಂದ ಹೆಲಿಕಾಪ್ಟರ್ ಸಹಾಯ ಪಡೆದು ಅಲ್ಲಿಂದ ಹಾರಿ ಆಗಸದಲ್ಲಿಯೇ ಸ್ಕೈ ಸರ್ಫಿಂಗ್ ಮಾಡುವ ಜೊತೆಗೆ 160 ಸುತ್ತುಗಳನ್ನು ಹಾಕುವ ಮೂಲಕ ಅದ್ಭುತ ಸಾಧನೆ ಮಾಡಿದ್ದಾರೆ. ಎಡ್ವರ್ಡ್​ ಸ್ನೈಡರ್​ 5000 ಅಡಿ ಭೂಮಿಯಿಂದ ದೂರವಿರುವ ಹೊತ್ತಿಗಾಗಲೇ ಈ ವಿಶ್ವದಾಖಲೆ ಬರೆದು ಸಾಧನೆ ಮಾಡಿದ್ದಾರೆ.

ನವೆಂಬರ್​ 1 ರಂದು ಕೀತ್ ಎಡ್ವರ್ಡ್ ಸ್ನೈಡರ್ ಗಿಜಾದ ಪಿರಮಿಡ್‌ಗಳ ಮೇಲಿಂದ ಹಾರುವ ಮೂಲಕ ಸ್ಕೈ ಸರ್ಪ್​ನಲ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಎಡ್ವರ್ಡ್ ಸ್ನೈಡರ್ ಜಿಗಿತದ ವಿಡಿಯೋವನ್ನು ಪರಿಶೀಲಿಸಿದ ಬಳಿಕ ಈ ಸಾಧನೆಯನ್ನು ದೃಢೀಕರಿಸಲಾಗಿದೆ ಎಂದು ಗಿನ್ನೆಸ್ ವಿಶ್ವ ದಾಖಲೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪೋಸ್ಟ್​ ಮಾಡಲಾಗಿದೆ.

ಇದನ್ನೂ ಓದಿ: ಟೀಂ ಇಂಡಿಯಾದಿಂದ ದಕ್ಷಿಣ ಆಫ್ರಿಕಾ ಪ್ರವಾಸ.. ನಾಳೆ ಬಿಸಿಸಿಐನಿಂದ ಮಹತ್ವದ ನಿರ್ಧಾರ

ಎಡ್ವರ್ಡ್ ಸ್ನೈಡರ್ ಬಾಲಕನಾಗಿದ್ದಾಗ ಸ್ಕೈ ಸರ್ಫಿಂಗ್​ನ ಚಾಂಪಿಯನ್​ ಹ್ಯಾರಿಸ್​ರ ಸಾಹಸಗಳಿಂದ ಸ್ಫೂರ್ತಿ ಪಡೆದುಕೊಂಡು ಇದೀಗ ತಾವು ಈ ಸಾಹಸವನ್ನು ಮಾಡುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ.

ಸ್ಕೈ ಸರ್ಫಿಂಗ್​ನ ಚಾಂಪಿಯನ್​ ರಾಬ್ ಹ್ಯಾರಿಸ್ ತಂಪು ಪಾನೀಯವಾದ ಮೌಂಟೇನ್ ಡ್ಯೂನ ಜಾಹೀರಾತಿನ ಚಿತ್ರೀಕರಣ ಸಾಹಸದ ವೇಳೆ ಸ್ಕೈಸರ್ಫಿಂಗ್ ಅಪಘಾತದಲ್ಲಿ ಮೃತಪಟ್ಟಿದ್ದರು.

For All Latest Updates

ABOUT THE AUTHOR

...view details