ವಾಷಿಂಗ್ಟನ್: ಆಫ್ಘನ್ ನೆಲದಿಂದ ಅಮೆರಿಕ ಸೇನೆ ನಿರ್ಗಮಿಸುತ್ತಿದ್ದಂತೆ ಇದೀಗ ಪಾಕಿಸ್ತಾನಕ್ಕೂ ತಾಲಿಬಾನಿಗಳ ಆತಂಕ ಎದುರಾಗಿದೆ. ಈ ನಡುವೆ ಅಮೆರಿಕ ಜಂಟಿ ಸೇನಾ ಮುಖ್ಯಸ್ಥ ಜನರಲ್ ಮಾರ್ಕ್ ಮಿಲ್ಲೆ ಹಾಗೂ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೇದ್ ಬಾಜ್ವಾ ದೂರವಾಣಿ ಮೂಲಕ ಸಂಭಾಷಣೆ ನಡೆಸಿದ್ದಾರೆ ಎಂದು ಪೆಂಟಗನ್ ತಿಳಿಸಿದೆ.
ಆಫ್ಘನ್ನಿಂದ ಯುಎಸ್ ಸೇನೆ ಮರಳಿದ ಬಳಿಕ ಇದೇ ಮೊದಲ ಬಾರಿಗೆ ಉಭಯ ದೇಶಗಳ ನಡುವೆ ರಕ್ಷಣೆ ಸಂಬಂಧಿಸಿದಂತೆ ಮಾತುಕತೆ ನಡೆದಿದೆ. ಈ ವೇಳೆ, ಪಾಕಿಸ್ತಾನ ಹಾಗೂ ಅಲ್ಲಿನ ಸುತ್ತಲಿನ ಪ್ರಸ್ತುತ ರಕ್ಷಣಾ ಸ್ಥಿತಿಗತಿ ಬಗ್ಗೆ ಯುಎಸ್ ಮಿಲಿಟರಿ ಮುಖ್ಯಸ್ಥ ಮಾಹಿತಿ ಪಡೆದಿದ್ದಾರೆ.