ಮಾಸ್ಕೋ (ರಷ್ಯಾ):ರಷ್ಯಾದ ಪರಮಾಣು ಹೊತ್ತೊಯ್ಯುವ ಸಾಮರ್ಥ್ಯವುಳ್ಳ ಬಾಂಬರ್ಗಳು ಅಲಸ್ಕಾದ ಬಳಿ ಸಾಮರ್ಥ್ಯ ಪ್ರದರ್ಶನದ ವೇಳೆ ಅಮೆರಿಕ ಜೆಟ್ ಫೈಟರ್ಗಳಿಗೆ ಮುಖಾಮುಖಿಯಾಗಿದ್ದು, ತೀವ್ರ ಕುತೂಹಲ ಕೆರಳಿಸಿದೆ.
ರಷ್ಯಾದ ರಕ್ಷಣಾ ಇಲಾಖೆ ಹೇಳುವಂತೆ ಟಿಯು- 95 ಬಾಂಬರ್ಗಳು ಓಸ್ಟೋಕ್ ಸಮುದ್ರ, ಬೇರಿಂಗ್ ಸಮುದ್ರ, ಚುಕ್ಚಿ ಸಮುದ್ರ ಮತ್ತು ಉತ್ತರ ಪೆಸಿಫಿಕ್ ಸಾಗರದ ಮೇಲೆ ಸತತ 11 ಗಂಟೆ ಕಾಲ ಹಾರಾಟ ನಡೆಸಿವೆ. ಈ ವೇಳೆ ಅಮೆರಿಕದ ಎಫ್-22 ಗಸ್ತಿನಲ್ಲಿರುವುದನ್ನು ಕೂಡಾ ಗಮನಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ರಷ್ಯಾದ ಏವಿಯೇಷನ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಸೆರ್ಗೈ ಕೊಬ್ಲ್ಯಾಶ್ ಬಾಂಬರ್ಗಳನ್ನು ಹಾಗೂ ಅವರ ಸಾಮರ್ಥ್ಯ ಹೊಗಳಿದ್ದಾರೆ. ಜೊತೆಗೆ ಎಸ್ಯು - 35 ಹಾಗೂ ಮಿಗ್- 31 ಫೈಟರ್ ಜೆಟ್ಗಳು ಸಂಕೀರ್ಣ ಸಮಯದಲ್ಲಿ ಬಾಂಬರ್ಗಳ ಬೆಂಗಾವಲನ್ನು ಪಡೆದಿವೆ ಎಂದು ಸ್ಪಷ್ಟಪಡಿಸಿದ್ದಾರೆ.
ಅಮೆರಿಕ ಹಾಗೂ ರಷ್ಯಾ ಆಗಾಗ ತಮ್ಮ ತಮ್ಮ ಗಡಿ ಪ್ರದೇಶಗಳಲ್ಲಿ ಬಾಂಬರ್ಗಳನ್ನು ಹಾಗೂ ಫೈಟರ್ ಜೆಟ್ಗಳನ್ನು ತರಬೇತಿಗೆ ಕಳುಹಿಸುವುದು ಸಾಮಾನ್ಯವಾಗಿದೆ. ಕೆಲವೊಂದು ಬಾರಿ ಅಮೆರಿಕ ಹಾಗೂ ರಷ್ಯಾ ಜೆಟ್ ಫೈಟರ್ಗಳು ಮುಖಾಮುಖಿಯಾಗುತ್ತವೆ.
ಅಮೆರಿಕ ಮತ್ತು ನ್ಯಾಟೋ ಪಡೆಗಳು ರಷ್ಯಾ ಉದ್ಧಟತನ ತೋರಿ ನಮ್ಮ ಫೈಟರ್ ಜೆಟ್ಗಳಿಗೆ ಮುಖಾಮುಖಿಯಾಗುತ್ತವೆ ಎಂದು ಆರೋಪಿಸಿದ್ದವು. ಈ ಆರೋಪವನ್ನು ರಷ್ಯಾ ತಳ್ಳಿಹಾಕಿತ್ತು. ರಷ್ಯಾ ಕೂಡಾ ಇಂತಹುದ್ದೇ ಆರೋಪವನ್ನು ನ್ಯಾಟೋ ಹಾಗೂ ಅಮೆರಿಕ ವಿರುದ್ಧ ಮಾಡುತ್ತಿತ್ತು. ಈಗ ಮತ್ತೊಮ್ಮೆ ರಷ್ಯಾ ಬಾಂಬರ್ಗಳು ಅಮೆರಿಕ ಜೆಟ್ಗಳಿಗೆ ಮುಖಾಮುಖಿಯಾಗಿರುವ ಆರೋಪ ಕೇಳಿ ಬಂದಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುತೂಹಲ ಕೆರಳಿಸಿದೆ.