ಕರ್ನಾಟಕ

karnataka

ETV Bharat / international

ಉಕ್ರೇನ್​ ಮೇಲೆ ಯಾವುದೇ ಸೈಬರ್ ದಾಳಿ ಮಾಡಿಲ್ಲ: ಅಮೆರಿಕಕ್ಕೆ ರಷ್ಯಾ ಸ್ಪಷ್ಟನೆ

ಇತ್ತೀಚೆಗೆ ಉಕ್ರೇನಿಯನ್ ಬ್ಯಾಂಕ್‌ಗಳ ಮೇಲೆ ನಡೆದ ಸೈಬರ್ ದಾಳಿಯಲ್ಲಿ ರಷ್ಯಾ ಭಾಗಿಯಾಗಿಲ್ಲ ಎಂದು ರಷ್ಯಾದ ರಾಯಭಾರ ಕಚೇರಿ ಹೇಳಿಕೆ ನೀಡಿದ್ದು, ಅಮೆರಿಕದ ಆರೋಪವನ್ನು ಸಾರಾಸಗಟಾಗಿ ನಿರಾಕರಿಸಲಾಗಿದೆ.

Russia not involved in recent Cyberattacks on Ukraine: Russian Embassy to US
ಉಕ್ರೇನ್​ ಮೇಲೆ ಯಾವುದೇ ಸೈಬರ್ ದಾಳಿ ಮಾಡಿಲ್ಲ: ಅಮೆರಿಕಕ್ಕೆ ರಷ್ಯಾ ಸ್ಪಷ್ಟನೆ

By

Published : Feb 19, 2022, 10:07 AM IST

ವಾಷಿಂಗ್ಟನ್(ಅಮೆರಿಕ) :ಯುದ್ಧ ವಾತಾವರಣದ ಉಕ್ರೇನ್ ಮತ್ತು ರಷ್ಯಾ ನಡುವೆ ಏರ್ಪಟ್ಟಿದೆ. ಈ ಬೆನ್ನಲ್ಲೇ ಉಕ್ರೇನ್​ಗೆ ಸೇರಿದ ಬ್ಯಾಂಕ್​ಗಳ ಮೇಲೆ ಸೈಬರ್ ದಾಳಿ ನಡೆಸಲಾಗಿತ್ತು. ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಅಮೆರಿಕದಲ್ಲಿರುವ ರಷ್ಯಾ ರಾಯಭಾರ ಕಚೇರಿ ಸ್ಪಷ್ಟನೆ ನೀಡಿದೆ.

ಇತ್ತೀಚೆಗೆ ಉಕ್ರೇನಿಯನ್ ಬ್ಯಾಂಕ್‌ಗಳ ಮೇಲೆ ನಡೆದ ಸೈಬರ್ ದಾಳಿಯಲ್ಲಿ ರಷ್ಯಾ ಭಾಗಿಯಾಗಿಲ್ಲ ಎಂದು ರಷ್ಯಾದ ರಾಯಭಾರ ಕಚೇರಿ ಹೇಳಿಕೆ ನೀಡಿದ್ದು, ಅಮೆರಿಕ ಆರೋಪವನ್ನು ಸಾರಾಸಗಟಾಗಿ ತಿರಸ್ಕರಿಸಿದೆ. ಈ ಮೂಲಕ ಅಮೆರಿಕದ ಆರೋಪಕ್ಕೆ ಹಿನ್ನಡೆಯಾಗಿದೆ.

ಶುಕ್ರವಾರವಷ್ಟೆ, ಅಮೆರಿಕದ ಸೈಬರ್ ಆ್ಯಂಡ್ ಎಮರ್ಜ್ಡ್​​ ಟೆಕ್ನಾಲಜಿಯ ರಾಷ್ಟ್ರೀಯ ಭದ್ರತಾ ಸಲಹೆಗಾರರಲ್ಲಿ ಒಬ್ಬರಾದ ಅನ್ನೆ ನ್ಯೂಬರ್ಗರ್ ಅವರು ರಷ್ಯಾದ ಸೈಬರ್ ತಜ್ಞರು, ಉಕ್ರೇನ್​ ದೇಶದ ರಕ್ಷಣಾ ಸಚಿವಾಲಯ ಸೇರಿದಂತೆ ಉಕ್ರೇನಿಯನ್ ಸರ್ಕಾರಿ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಬೈಡನ್ ಸರ್ಕಾರ ನಂಬಿದೆ ಎಂದು ಹೇಳಿಕೆ ನೀಡಿದ್ದರು.

ಇದನ್ನೂ ಓದಿ:ಉಕ್ರೇನ್​ ಮೇಲೆ ಆಕ್ರಮಣ ನಡೆಸಲು ರಷ್ಯಾ ನಿರ್ಧಾರ: ಜೋ ಬೈಡನ್

ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಷ್ಯಾ ರಾಯಭಾರ ಕಚೇರಿ ಅಮೆರಿಕದ ಆಧಾರರಹಿತ ಹೇಳಿಕೆಗಳನ್ನು ಸ್ಪಷ್ಟವಾಗಿ ತಿರಸ್ಕರಿಸುತ್ತೇವೆ. ಅಮೆರಿಕ ಉಲ್ಲೇಖಿಸಿ ಘಟನೆಗಳಲ್ಲಿ ರಷ್ಯಾ ಭಾಗಿಯಾಗಿಲ್ಲ ಮತ್ತು ಸೈಬರ್‌ಸ್ಪೇಸ್‌ನಲ್ಲಿ ಯಾವುದೇ ದುರುದ್ದೇಶಪೂರಿತ ಕಾರ್ಯಾಚರಣೆಯನ್ನು ನಡೆಸಿಲ್ಲ ಎಂದು ಟ್ವಿಟರ್​ನಲ್ಲಿ ಸ್ಪಷ್ಟನೆ ನೀಡಿದ್ದು, ನ್ಯೂಬರ್ಗರ್ ಅವರ ಹೇಳಿಕೆಯನ್ನು ರಷ್ಯಾ ವಿರೋಧಿ ಎಂದು ಕರೆದಿದೆ.

ABOUT THE AUTHOR

...view details