ನ್ಯೂಯಾರ್ಕ್: ಗಡಿ ಮತ್ತು ಗಡಿ ಆಚೆಗೂ ಉಗ್ರರ ಕೃತ್ಯಗಳನ್ನು ಸದೆ ಬಡೆಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಪಿತಾಮಹ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದರು.
ವಿಶ್ವಸಂಸ್ಥೆಯ 74ನೇ ಸಾಮಾನ್ಯ ಸಮಾವೇಶಕ್ಕೆ ಇನ್ನೂ ಎರಡು ದಿನ ಇರುವಂತೆ ಪ್ರಧಾನಿ ಮೋದಿ ಹಾಗೂ ಟ್ರಂಪ್ 3ನೇ ದಿನದಂದು ಮತ್ತೆ ಕೆಲವು ವಿಷಯಗಳ ಕುರಿತು ಚರ್ಚೆ ನಡೆಸಿದರು.
ಉಭಯ ರಾಷ್ಟ್ರಗಳ ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸಿದು. ಪ್ರಧಾನಿ ಮೋದಿ ಅತ್ಯುತ್ತಮವಾಗಿ ಭಯೋತ್ಪಾದನೆ ಚಟುವಟಿಕೆಗಳನ್ನು ನಿಗ್ರಹಿಸುತ್ತಿದ್ದಾರೆ. ಪ್ರಧಾನಿ ಮೋದಿ ಭಾರತದ ಪಿತಾಮಹ. ಪಾಕಿಸ್ತಾನದ ಭಯೋತ್ಪಾದನೆಯ ಕೃತ್ಯಗಳು ಇರಾಕ್ನ ಉಗ್ರವಾದಕ್ಕೆ ಸರಿಸಮವಾಗಿ ಎಂದು ಹೇಳಿದರು.
ಪ್ರಧಾನಿ ಮೋದಿ ಹಾಗೂ ಟ್ರಂಪ್ ಚರ್ಚೆ
ಇದೇ ವೇಳೆ ಪಾಕಿಸ್ತಾನದಲ್ಲಿ ಐಎಸ್ಐ ಪ್ರಾಯೋಜಿತ ಅಲ್ ಖೈದಾ ಭಯೋತ್ಪಾದನೆ ನಡೆಯುತ್ತಿದೆ ಇದಕ್ಕೆ ನಿಮ್ಮ ಕ್ರಮ ಏನು ಎಂದಾಗ ಇಲ್ಲೇ ಪ್ರಧಾನಿ ಇದ್ದಾರೆ ಆ ಬಗ್ಗೆ ಅವರೇ ನೋಡಿಕೊಳ್ಳುತ್ತಾರೆ ಎಂದು ಪ್ರಧಾನಿ ಮೋದಿ ಕಡೆ ಬೆಟ್ಟು ಮಾಡಿದರು.