ವಾಷಿಂಗ್ಟನ್:ಫೈಜರ್ ಯೋಜನೆಗಳನ್ನು ಬದಲಾಯಿಸುತ್ತಿದ್ದು, ಸಾಮಾನ್ಯವಾಗಿ ಐದು ವರ್ಷದೊಳಗಿನ ಮಕ್ಕಳಿಗೆ ಎರಡು ಡೋಸ್ ನೀಡುವ ಬದಲು ಮೂರು ಡೋಸ್ ಕೋವಿಡ್ ಲಸಿಕೆ ನೀಡುವುದರ ಕುರಿತು ಪರೀಕ್ಷಿಸುತ್ತಿದೆ.
ಪ್ರಾಥಮಿಕ ವಿಶ್ಲೇಷಣೆಯಲ್ಲಿ 2 ರಿಂದ 4 ವರ್ಷದ ಮಕ್ಕಳಿಗೆ ಎರಡು ಡೋಸ್ ನೀಡಿದ ಬಳಿಕ ನಿರೀಕ್ಷಿಸಿದಷ್ಟು ಬಲವಾದ ಪ್ರತಿರಕ್ಷಣಾ ಫಲಿತಾಂಶ ಬಂದಿಲ್ಲ. ಹೀಗಾಗಿ ಮಕ್ಕಳಿಗೆ ಹೆಚ್ಚುವರಿ ಡೋಸ್ ನೀಡಲು ಫೈಜರ್ ಅಧ್ಯಯನ ನಡೆಸುತ್ತಿದೆ.
ವರ್ಷಾಂತ್ಯದೊಳಗೆ 5 ವರ್ಷದೊಳಗಿನ ಮಕ್ಕಳ ಅಧ್ಯಯನದ ಡೇಟಾವನ್ನು ಬಿಡುಗಡೆ ಮಾಡಲು ಫೈಜರ್ ಯೋಜಿಸಿತ್ತು. ಆದ್ರೆ ಹಠಾತ್ ಬದಲಾವಣೆಯಿಂದಾಗಿ ಇದು ಇನ್ನು ತಡವಾಗಬಹುದು ಎನ್ನಲಾಗ್ತಿದೆ.
ಫೈಜರ್ ಮತ್ತು ಅದರ ಪಾಲುದಾರ ಬಯೋಎನ್‌ಟೆಕ್ ಮೂರು-ಡೋಸ್ ನೀಡುವ ಅಧ್ಯಯನವು ಯಶಸ್ವಿಯಾದರೆ 2022 ರ ಜೂನ್ ಒಳಗೆ ತುರ್ತು ಅಧಿಕಾರಕ್ಕಾಗಿ ಅರ್ಜಿ ಸಲ್ಲಿಸಲು ಯೋಜಿಸಿದ್ದಾರೆ.
ಫೈಜರ್‌ನ ಲಸಿಕೆಯ ಕಿಡ್-ಗಾತ್ರದ ಆವೃತ್ತಿಯು ಈಗಾಗಲೇ 5 ರಿಂದ 11 ವರ್ಷ ವಯಸ್ಸಿನವರಿಗೆ ಲಭ್ಯವಿದೆ. ಇದು 12 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲರಿಗೂ ನೀಡಲಾದ ಡೋಸ್‌ನ ಮೂರನೇ ಒಂದು ಭಾಗವಾಗಿದೆ.
2 ರಿಂದ 4 ವರ್ಷ ವಯಸ್ಸಿನವರಲ್ಲಿ ರೋಗನಿರೋಧಕ ಪ್ರತಿಕ್ರಿಯೆ ಕಡಿಮೆಯಾಗಿದೆ ಎಂದು ಫೈಜರ್ ಲಸಿಕೆ ಸಂಶೋಧನಾ ಮುಖ್ಯಸ್ಥ ಕ್ಯಾಥ್ರಿನ್ ಜಾನ್ಸನ್ ತಿಳಿಸಿದ್ದಾರೆ. ಆದ್ದರಿಂದ 5 ವರ್ಷದೊಳಗಿನ ಮಕ್ಕಳಿಗೆ ಮೂರನೇ ಡೋಸ್ ನೀಡಲು ಫೈಜರ್ ಅಧ್ಯಯನ ನಡೆಸುತ್ತಿದೆ. ಮೂರನೇ ಡೋಸ್ ನೀಡಬೇಕಾದ್ರೆ ಎರಡನೇ ಡೋಸ್ ಪಡೆದು ಕನಿಷ್ಠ ಎರಡು ತಿಂಗಳ ಕಾಲಾವಕಾಶವಾಗಿರಬೇಕು. ಆದ್ರೆ ಅಧ್ಯಯನದಲ್ಲಿ ಯಾವುದೇ ಸುರಕ್ಷತಾ ಕಾಳಜಿ ಕಂಡುಬಂದಿಲ್ಲ ಎಂದು ಕೆಲ ಕಂಪನಿಗಳು ತಿಳಿಸಿವೆ.
16 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಬೂಸ್ಟರ್ ಶಾಟ್ ನೀಡಿರುವ ಡೇಟಾವನ್ನು ಜಾನ್ಸನ್ ಉಲ್ಲೇಖಿಸಿದ್ದಾರೆ. ಮೂರನೇ ಡೋಸ್ ಬಲವಾದ ರಕ್ಷಣೆಯನ್ನು ಪುನಃಸ್ಥಾಪಿಸುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚುವುದರ ಜೊತೆ ಹೊಸ ಓಮಿಕ್ರಾನ್ ರೂಪಾಂತರವನ್ನು ಹಿಮ್ಮೆಟ್ಟಿಸಲು ಸಹಾಯ ಮಾಡುತ್ತದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಕಂಪನಿಗಳು 5 ರಿಂದ 11 ವರ್ಷ ವಯಸ್ಸಿನವರಿಗೆ ಬೂಸ್ಟರ್ ಡೋಸ್ ನೀಡುವುದರ ಬಗ್ಗೆ ಪರೀಕ್ಷಿಸಲು ತಯಾರಿ ನಡೆಸುತ್ತಿವೆ. ಐದು ವರ್ಷದೊಳಗಿನ ಮಕ್ಕಳಿಗೆ ಹೆಚ್ಚುವರಿ ಡೋಸ್ ನೀಡುವ ಅಧ್ಯಯನ ಯಶಸ್ವಿಯಾದರೆ ನಾವು ಎಲ್ಲಾ ವಯಸ್ಸಿನವರಿಗೆ ಸ್ಥಿರವಾದ ಮೂರು-ಡೋಸ್ ಲಸಿಕೆ ವಿಧಾನವನ್ನು ಪರಿಗಣಿಸುತ್ತೇವೆ ಎಂದು ಜಾನ್ಸನ್ ಹೇಳಿದರು.
Pfizer study tests extra COVID vaccine dose for kids under 5
Washington, Dec 17 (AP) Pfizer said Friday it was changing plans and testing three doses of its COVID-19 vaccine in babies and preschoolers instead of the usual two.
The addition of an extra dose came after a preliminary analysis found 2- to 4-year-olds didn't have as strong an immune response as expected to special low-dose shots.