ಕರ್ನಾಟಕ

karnataka

ETV Bharat / international

ಟೆರರ್​ ಫಂಡಿಂಗ್ ನಿಲ್ಲಿಸದಿದ್ದರೆ ಕಪ್ಪುಪಟ್ಟಿಗೆ ಪಾಕ್!  ವಾಚ್​ಡಾಗ್​ ವಾರ್ನ್​

ಭಯೋತ್ಪಾದನೆಯ ವಿಚಾರದಲ್ಲಿ ಹಿಂದೆ ಬಿದ್ದಿದ್ದು ಗ್ಲೋಬಲ್ ವಾಚ್​ಡಾಗ್​​​​ ಇದೀಗ ಅಕ್ಟೋಬರ್​​​ ತಿಂಗಳನ್ನು ಕೊನೆಯ ಗಡುವನ್ನಾಗಿ ನೀಡಿದೆ. ಅಕ್ಟೋಬರ್​ ವೇಳೆಗೂ ಪರಿಸ್ಥಿತಿ ಭಿನ್ನವಾಗಿಲ್ಲದಿದ್ದರೆ ಮುಂದಿನ ಹೆಜ್ಜೆ ತೆಗೆದುಕೊಳ್ಳುವುದಾಗಿ ಫ್ಲೋರಿಡಾದ ಒರ್ಲಾಂಡೋದಲ್ಲಿ ನಡೆದ ಸಭೆಯ ಬಳಿಕ ಹೇಳಿದೆ.

ಪಾಕ್

By

Published : Jun 21, 2019, 11:52 PM IST

ಫ್ಲೋರಿಡಾ:ಭಯೋತ್ಪಾದನೆಯನ್ನು ನಿಗ್ರಹಿಸುವ ವಿಚಾರದಲ್ಲಿ ಗ್ಲೋಬಲ್ ವಾಚ್​ಡಾಗ್​ ನೀಡಿದ್ದ ಗಡುವಿನಲ್ಲಿ ಪಾಕಿಸ್ತಾನ ಯಾವುದೇ ಸುಧಾರಣೆ ಕಂಡುಬರದಿರುವ ಕಾರಣ ಖಡಕ್ ಎಚ್ಚರಿಕೆ ರವಾನಿಸಿದೆ.

ಉಗ್ರರ ನಿರ್ಮೂಲನೆ ವಿಚಾರದಲ್ಲಿ ಗ್ಲೋಬಲ್ ವಾಚ್​ಡಾಗ್​​, ಜನವರಿ ತಿಂಗಳ ಗಡುವು ಆರಂಭದಲ್ಲಿ ನೀಡಿತ್ತು. ನಂತರದಲ್ಲಿ ಮೇ ಡೆಡ್​​ಲೈನ್​ ನೀಡಲಾಗಿತ್ತು. ಸದ್ಯ ಮೇ ತಿಂಗಳ ಗಡುವಿನಲ್ಲೂ ಪಾಕಿಸ್ತಾನ ಭಯೋತ್ಪಾದಕರ ಮಟ್ಟಹಾಕುವ ವಿಚಾರದಲ್ಲಿ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ ಎಂದು ಗ್ಲೋಬಲ್ ವಾಚ್​ಡಾಗ್ ಹೇಳಿದೆ.

ಭಯೋತ್ಪಾದನೆಯ ವಿಚಾರದಲ್ಲಿ ಹಿಂದೆ ಬಿದ್ದಿದ್ದು ಗ್ಲೋಬಲ್ ವಾಚ್​ಡಾಗ್​​​​ ಇದೀಗ ಅಕ್ಟೋಬರ್​​​ ತಿಂಗಳನ್ನು ಕೊನೆಯ ಗಡುವನ್ನಾಗಿ ನೀಡಿದೆ. ಅಕ್ಟೋಬರ್​ ವೇಳೆಗೂ ಪರಿಸ್ಥಿತಿ ಭಿನ್ನವಾಗಿಲ್ಲದಿದ್ದರೆ ಮುಂದಿನ ಹೆಜ್ಜೆ ತೆಗೆದುಕೊಳ್ಳುವುದಾಗಿ ಫ್ಲೋರಿಡಾದ ಒರ್ಲಾಂಡೋದಲ್ಲಿ ನಡೆದ ಸಭೆಯ ಬಳಿಕ ಹೇಳಿದೆ.

ಪಾಕಿಸ್ತಾನ, ಭಯೋತ್ಪಾದನಾ ಕೃತ್ಯಕ್ಕೆ ಮತ್ತು ಅಕ್ರಮ ಹಣಕಾಸಿನ ವಹಿವಾಟಿಗೆ ಬೆಂಬಲ ನೀಡುತ್ತಿದ್ದರಿಂದ ಗ್ಲೋಬಲ್ ವಾಚ್​ಡಾಗ್​ ಈಗಾಗಲೇ ಗ್ರೇ ಲಿಸ್ಟ್(ಬೂದು ಪಟ್ಟಿ)​ಗೆ ಸೇರ್ಪಡೆ ಮಾಡಿದೆ. ಆದರೆ ಭಾರತ, ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸಲು ಒತ್ತಾಯಿಸುತ್ತಿದೆ.

ABOUT THE AUTHOR

...view details