ರೇಲಿ (ಅಮೆರಿಕ):ಉತ್ತರ ಕೆರೊಲಿನಾದ ರಾಜಧಾನಿಯಲ್ಲಿ ಪ್ರತಿಭಟನಾಕಾರರು ಸ್ಮಾರಕವೊಂದರ ಭಾಗಗಳನ್ನು ಕೆಳಕ್ಕೆ ಉರುಳಿಸಿ, ಪ್ರತಿಮೆಯೊಂದನ್ನು ನೇತುಹಾಕಿದ್ದಾರೆ.
ಜಾರ್ಜ್ ಫ್ಲಾಯ್ಡ್ ಎಂಬ ಕಪ್ಪು ವರ್ಣೀಯನ ನಿಧನಕ್ಕೆ ಕಾರಣವಾದ ಪೊಲೀಸ್ ದೌರ್ಜನ್ಯದ ವಿರುದ್ಧ ನಡೆದ ಪ್ರತಿಭಟನೆ ವೇಳೆ ಈ ಘಟನೆ ನಡೆದಿದೆ.

ರೇಲಿಯ ಸ್ಮಾರಕವೊಂದರ ಭಾಗವಾಗಿದ್ದ ಸೈನಿಕರ ಎರಡು ಪ್ರತಿಮೆಗಳನ್ನು ಹಗ್ಗದ ಮೂಲಕ ಕೆಳಕ್ಕಿಳಿಸಿದ್ದಾರೆ ಎಂದು ಸುದ್ದಿವಾಹಿನಿಗಳು ವರದಿ ಮಾಡಿವೆ.
ಪ್ರತಿಮೆಗಳನ್ನು ಉರುಳಿಸಲು ಹಗ್ಗಗಳನ್ನು ಬಳಸುವ ಪ್ರತಿಭಟನಾಕಾರರ ಪ್ರಯತ್ನವನ್ನು ಮೊದಲಿಗೆ ಪೊಲೀಸ್ ಅಧಿಕಾರಿಗಳು ವಿಫಲಗೊಳಿಸಿದ್ದರು. ಆದರೆ, ಅಧಿಕಾರಿಗಳು ಪ್ರದೇಶವನ್ನು ತೆರವುಗೊಳಿಸಿದ ಬಳಿಕ ಪ್ರತಿಭಟನಾಕಾರರು ಪ್ರತಿಮೆಗಳನ್ನು ಕೆಳಗೆ ಉರುಳಿಸಿದ್ದಾರೆ.
ನಂತರ ಆ ಪ್ರತಿಮೆಗಳನ್ನು ಬೀದಿಗೆ ಎಳೆದೊಯ್ದು, ಹಗ್ಗವನ್ನು ಬಳಸಿ ನೇತುಹಾಕಿದ್ದಾರೆ.