ಕರ್ನಾಟಕ

karnataka

ETV Bharat / international

ಬ್ರಿಟನ್ನಿನ ಹೊಸ ಸ್ವರೂಪದ ವೈರಸ್‌ ಹೆಚ್ಚು ಮಾರಕವಲ್ಲ: ಡಾ.ವಿವೇಕ್ ಮೂರ್ತಿ

ಬ್ರಿಟನ್ನಿನಲ್ಲಿ ವರದಿಯಾದ ಹೊಸದಾಗಿ ರೂಪಾಂತರಗೊಂಡ ಕೊರೊನಾ ವೈರಸ್ ಹೆಚ್ಚು ಮಾರಕವಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಭಾರತೀಯ ಮೂಲದ ಅಮೆರಿಕನ್ ವೈದ್ಯ ವಿವೇಕ್ ಮೂರ್ತಿ ಹೇಳಿದ್ದಾರೆ.

ಭಾರತೀಯ-ಅಮೆರಿಕನ್ ವೈದ್ಯ ವಿವೇಕ್ ಮೂರ್ತಿ
ಭಾರತೀಯ-ಅಮೆರಿಕನ್ ವೈದ್ಯ ವಿವೇಕ್ ಮೂರ್ತಿ

By

Published : Dec 22, 2020, 7:01 AM IST

ವಾಷಿಂಗ್ಟನ್: ಅಮೆರಿಕದ ಚುನಾಯಿತ ಅಧ್ಯಕ್ಷ ಜೋ ಬೈಡನ್ ಅವರ ಸರ್ಜನ್ ಜನರಲ್ ಡಾ.ವಿವೇಕ್ ಮೂರ್ತಿ, ಬ್ರಿಟನ್‌ನಲ್ಲಿ ವರದಿಯಾದ ಹೊಸ ಸ್ವರೂಪದ ಕೊರೊನಾ ವೈರಸ್ ಹೆಚ್ಚು ಮಾರಕವಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದ್ದಾರೆ.

ರೂಪಾಂತರಗೊಂಡ ವೈರಸ್​ನಿಂದ ಸೋಂಕು ಹೆಚ್ಚು ಹರಡುವಂತೆ ತೋರುತ್ತದೆಯಾದರೂ, ಇದು ಹೆಚ್ಚು ಮಾರಕ ವೈರಸ್ ಎಂಬುದಕ್ಕೆ ನಮ್ಮಲ್ಲಿ ಇನ್ನೂ ಪುರಾವೆಗಳಿಲ್ಲ ಎಂದು ಅವರು ಭಾನುವಾರ ಎನ್‌ಬಿಸಿ ನ್ಯೂಸ್‌ಗೆ ತಿಳಿಸಿದರು.

ಓದಿ:ರಾಷ್ಟ್ರೀಯ ಗಣಿತ ದಿನ: ಶ್ರೀನಿವಾಸ ರಾಮಾನುಜನ್ & ಈ ದಿನದ ಮಹತ್ವ

ಹಲವಾರು ದೇಶಗಳು ಬ್ರಿಟನ್‌ ಪ್ರಯಾಣ ಮತ್ತು ವಿಮಾನಗಳ ಮೇಲೆ ನಿರ್ಬಂಧಗಳನ್ನು ಘೋಷಿಸಿವೆ. ಹೊಸದಾಗಿ ರೂಪಾಂತರದ ಬಳಿಕ ಕೊರೊನಾ ವೈರಸ್ ಸೋಂಕು ದೇಶದ ಕೆಲವು ಭಾಗಗಳಲ್ಲಿ ಹೆಚ್ಚು ವೇಗವಾಗಿ ಹರಡುತ್ತಿದೆ. ಇದರ ಹರಡುವಿಕೆಯನ್ನು ತಡೆಯಲು ಈ ಹಿಂದಿನಂತೆಯೇ ಸ್ವಚ್ಛತೆ, ಸಾಮಾಜಿಕ ಅಂತರ, ಮಾಸ್ಕ್​ ಬಳಕೆ ಸಹಾಯಕವಾಗುತ್ತದೆ ಎಂದು ಡಾ.ಮೂರ್ತಿ ಹೇಳಿದರು.

ABOUT THE AUTHOR

...view details