ಕರ್ನಾಟಕ

karnataka

ETV Bharat / international

50 ವರ್ಷಗಳ ನಂತರ ತಲುಪಿದ ಟೆಲಿಗ್ರಾಂ... ಪತ್ರ ಕೈ ಸೇರುವಷ್ಟರಲ್ಲಿ ಆತ ಹಣ್ಣು ಮುದುಕನಾಗಿದ್ದ

ಕಾಲೇಜಿನಲ್ಲಿ ಓದುವಾಗ ಕಳಿಸಿದ್ದ ಪತ್ರವೊಂದು ಆತ ಹಣ್ಣು ಹಣ್ಣು ಮುದುಕನಾದಾಗ ಆತನನ್ನ ನಲುಪಿದೆ

50 ವರ್ಷಗಳ ನಂತರ ತಲುಪಿದ ಟೆಲಿಗ್ರಾಂ

By

Published : Mar 11, 2019, 8:17 AM IST

ವಾಷಿಂಗ್ಟನ್​:ಟೆಲಿಗ್ರಾಂ ಸೇವೆ ಭಾರತದಲ್ಲಿ ಲಭ್ಯವಿದ್ದಾಗ ಅದು ತಲುಪುತ್ತಿದ್ದ ವೇಗದ ಕುರಿತು ಬಹಳಷ್ಟು ಜೋಕ್​ಗಳಿವೆ. ಇಂತಹ ಹಾಸ್ಯಗಳಿಗೆ ಅಮೆರಿಕವೂ ಹೊರತಲ್ಲ.

ತಾವು ಡಿಗ್ರಿ ಪಾಸಾದಾಗ ಸಂಬಂಧಿಕರು, ಸ್ನೇಹಿತರು ಸೇರಿ ಕಳುಹಿಸಿದ್ದ ಶುಭಾಶಯವಿದ್ದ ಟೆಲಿಗ್ರಾಂ ಐವತ್ತು ವರ್ಷಗಳ ನಂತರ ಆ ವ್ಯಕ್ತಿಯನ್ನು ತಲುಪಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.

ರಾಬರ್ಟ್​ ಫಿಂಕ್​ ಎಂಬುವವರು 1969ರಲ್ಲಿ ಪದವಿ ಪೂರೈಸಿದ್ದರು. ಅದೇ ದಿನ ಅವರ ಸಹಪಾಠಿಗಳು ಹಾಗೂ ಸಂಬಂಧಿಕರು ಸೇರಿ ಒಂದು ಟೆಲಿಗ್ರಾಂ ಬರೆದಿದ್ದರು. ಆದರೆ, ಕಾರಣಾಂತರದಿಂದಾಗಿ ಆ ಟೆಲಿಗ್ರಾಂ ಫಿಂಕ್​ ಅವರನ್ನು ತಲುಪಿರಲಿಲ್ಲ.

ಈಚೆಗಷ್ಟೆ ವೆಸ್ಟ್ರನ್​ ಯುನಿಯನ್​ ಸಂಸ್ಥೆಯ ಟೆಲಿಗ್ರಾಂ ಅವರನ್ನು ತಲುಪಿದ್ದು, ತಮ್ಮ ಬ್ಯಾಚ್​ನ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾರೆ. ಅಂದಹಾಗೆ ಈ ಟೆಲಿಗ್ರಾಂ ತಲುಪುವಷ್ಟರಲ್ಲಿ ಫಿಂಕ್​ ಅವರು ತಾವು ಓದಿದ ಕಾಲೇಜಿನಲ್ಲೇ ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದಾರೆ.

ABOUT THE AUTHOR

...view details