ಲಾಸ್ ಏಂಜಲೀಸ್ (ಯು.ಎಸ್): 2008ರಲ್ಲಿ ಮುಂಬೈನಲ್ಲಿ ನಡೆದ ದಾಳಿಗೆ ಸಂಬಂಧಿಸಿದಂತೆ ಕೊಲೆ ಆರೋಪದ ಮೇಲೆ ಲಾಸ್ ಏಂಜಲೀಸ್ನಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಯುಎಸ್ ಪ್ರಾಸಿಕ್ಯೂಟರ್ ತಿಳಿಸಿದ್ದಾರೆ.
ಚಿಕಾಗೊದ ಈ ಉದ್ಯಮಿ ಭಯೋತ್ಪಾದಕ ಗುಂಪುಗಳಿಗೆ ಸಹಾಯ ಮಾಡಿದ್ದಕ್ಕಾಗಿ ಈಗಾಗಲೇ 10 ವರ್ಷಗಳಿಗಿಂತ ಹೆಚ್ಚು ಜೈಲುವಾಸ ಅನುಭವಿಸಿದ್ದಾನೆ.
ವ್ಯಕ್ತಿಯನ್ನು ಪಾಕಿಸ್ತಾನ ಮೂಲದ ತಹವ್ವೂರ್ ರಾಣಾ ಎಂದು ಗುರುತಿಸಲಾಗಿದ್ದು, ಮುಂಬೈ ದಾಳಿಯ ಹಿಂದಿರುವ ಗುಂಪಿನೊಂದಿಗೆ ಸಂಪರ್ಕ ಹೊಂದಿರುವ ಭಯೋತ್ಪಾದಕ ಆರೋಪಕ್ಕೆ ಈತ ಗುರಿಯಾಗಿದ್ದ.
"59 ವರ್ಷದ ರಾಣಾ 14 ವರ್ಷಗಳ ಶಿಕ್ಷೆ ಅನುಭವಿಸುತ್ತಿದ್ದ. ಆದರೆ ಆರೋಗ್ಯ ಸಮಸ್ಯೆ ಮತ್ತು ಕೊರೊನಾ ವೈರಸ್ ಕಾರಣದಿಂದಾಗಿ ಕಳೆದ ವಾರ ಲಾಸ್ ಏಂಜಲೀಸ್ ಫೆಡರಲ್ ಜೈಲಿನಿಂದ ಆತನನ್ನು ಬಿಡುಗಡೆಗೊಳಿಸಲಾಗಿದೆ. ಭಾರತಕ್ಕೆ ಹಸ್ತಾಂತರಗೊಳ್ಳುವವರೆಗೆ ಆತ ಜೈಲಿನಿಂದ ಹೊರ ಬಂದಿರಲಿಲ್ಲ ಎಂದು ಪ್ರಾಸಿಕ್ಯೂಟರ್ಗಳು ತಿಳಿಸಿದ್ದಾರೆ.