ಕರ್ನಾಟಕ

karnataka

ETV Bharat / international

ಒಂದು ತಿಂಗಳಲ್ಲೇ ಇಬ್ಬರಿಗೆ ಕಚ್ಚಿದ ಅಮೆರಿಕ ಅಧ್ಯಕ್ಷರ ಸಾಕು ನಾಯಿ

ಮೇಜರ್ ಕಚ್ಚಿದ ನಂತರ ಗಾಯಾಳುವನ್ನು ಶ್ವೇತಭವನದ ಮೆಡಿಕಲ್ ಯುನಿಟ್​ಗೆ ಸಾಗಿಸಲಾಗಿದೆ. ಯಾವುದೇ ಅಪಾಯವಿಲ್ಲದೇ ಆತ ಕೆಲಸಕ್ಕೆ ಹಿಂದಿರುಗಿದ್ದಾನೆ ಎಂದು ಲಾರೋಸಾ ಮಾಹಿತಿ ನೀಡಿದ್ದಾರೆ..

Major pain Biden dog involved in 2nd biting incident
ಒಂದು ತಿಂಗಳಲ್ಲೇ ಇಬ್ಬರಿಗೆ ಕಚ್ಚಿದ ಅಧ್ಯಕ್ಷರ ಸಾಕು ನಾಯಿ: ಬೈಡನ್ ಹೇಳಿದ್ದೇನು..?

By

Published : Mar 31, 2021, 8:05 PM IST

ವಾಷಿಂಗ್ಟನ್ :ಅಮೆರಿಕ ಅಧ್ಯಕ್ಷ ಜೋ ಬೈಡನ್​ ಅವರ ಸಾಕು ನಾಯಿ ಮೇಜರ್ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೋರ್ವನಿಗೆ ಕಚ್ಚಿದ್ದು, ಇದೇ ತಿಂಗಳಲ್ಲಿ ಎರಡು ಬಾರಿ ಈ ರೀತಿಯ ಘಟನೆ ಸಂಭವಿಸಿದೆ ಎಂದು ಶ್ವೇತ ಭವನ ಮಾಹಿತಿ ನೀಡಿದೆ.

ಅಮೆರಿಕದ ಮೊದಲ ಪ್ರಜೆ ಜಿಲ್ ಬೈಡನ್ ಅವರ ಮಾಧ್ಯಮ ಕಾರ್ಯದರ್ಶಿ ಮೈಖೆಲ್ ಲಾರೋಸಾ ಈ ಬಗ್ಗೆ ಮಾಹಿತಿ ನೀಡಿದ್ದು, ಬೈಡನ್ ಅವರ ಸಾಕು ನಾಯಿ ಇನ್ನೂ ಹೊಸ ವಾತಾವರಣಕ್ಕೆ ಹೊಂದಿಕೊಳ್ಳುತ್ತಿದೆ ಎಂದಿದ್ದಾರೆ.

ಮೇಜರ್ ಕಚ್ಚಿದ ನಂತರ ಗಾಯಾಳುವನ್ನು ಶ್ವೇತಭವನದ ಮೆಡಿಕಲ್ ಯುನಿಟ್​ಗೆ ಸಾಗಿಸಲಾಗಿದೆ. ಯಾವುದೇ ಅಪಾಯವಿಲ್ಲದೇ ಆತ ಕೆಲಸಕ್ಕೆ ಹಿಂದಿರುಗಿದ್ದಾನೆ ಎಂದು ಲಾರೋಸಾ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:'ಬಿಜೆಪಿ ವಿರುದ್ಧ ಒಂದಾಗಿ': ರಾಷ್ಟ್ರ ನಾಯಕರಿಗೆ ಮಮತಾ ಬ್ಯಾನರ್ಜಿ ಪತ್ರ

ಈ ಘಟನೆ ನಂತರ ಪ್ರತಿಕ್ರಿಯೆ ನೀಡಿರುವ ಬೈಡನ್, 'ಮೇಜರ್ ಒಳ್ಳೆಯ ನಾಯಿ ಎಂದು ಎಬಿಸಿ ನ್ಯೂಸ್​ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಮೇಜರ್ ಯಾವ ರೀತಿ ಕಚ್ಚಿದೆ ಎಂದು ವಿವರಣೆ ನೀಡಿದ್ದಾರೆ.

ಮೇಜರ್​ನನ್ನ ಶೇ.85ರಷ್ಟು ಮಂದಿ ಪ್ರೀತಿಸುತ್ತಾರೆ ಎಂದಿದ್ದಾರೆ. ಘಟನೆಯ ನಂತರ ಮೂರು ವರ್ಷದ ಸಾಕು ನಾಯಿ ಮೇಜರ್ ಮತ್ತು ಹನ್ನೆರಡು ವರ್ಷದ ಸಾಕುನಾಯಿ ಚಾಂಪ್‌ನ ಬೈಡನ್​ ಅವರ ಡೆಲಾವೇರ್​​ನಲ್ಲಿರುವ ನಿವಾಸಕ್ಕೆ ರವಾನಿಸಲಾಗಿದೆ.

ಮಾರ್ಚ್​​ 8ರಂದು ಬೈಡನ್​ ಅವರ ಜರ್ಮನ್​ ಶಫರ್ಡ್ ತಳಿಯ​ ಸಾಕು ನಾಯಿ ಯುಎಸ್​ ಸಿಕ್ರೆಟ್ ಸರ್ವೀಸ್​ನ ಉದ್ಯೋಗಿಗೆ ಕಚ್ಚಿ ಗಾಯಗೊಳಿಸಿತ್ತು. ಇದಾದ ನಂತರ ಮತ್ತೊಂದು ಸಾಕು ನಾಯಿ ಮೇಜರ್ ವ್ಯಕ್ತಿಯೋರ್ವನಿಗೆ ಕಚ್ಚಿದೆ.

ABOUT THE AUTHOR

...view details