ವಾಷಿಂಗ್ಟನ್(ಅಮೆರಿಕ):ಅಫ್ಘಾನಿಸ್ತಾನ ತನ್ನಲ್ಲಿ ನಡೆಯುತ್ತಿರುವ ಸಂಘರ್ಷದ ಕಾರಣದಿಂದಾಗಿ ಜಗತ್ತಿನ ಗಮನವನ್ನು ಸೆಳೆಯುತ್ತಿದೆ. ಜಿ-7 ರಾಷ್ಟ್ರಗಳು ಈ ವಿಚಾರವಾಗಿ ಚರ್ಚೆ ನಡೆಸಿದ್ದು, ಮುಂದಿನ ದಿನಗಳಲ್ಲಿ ಅಫ್ಘಾನಿಸ್ತಾನದಲ್ಲಿ ಆರಂಭವಾಗುವ ಸರ್ಕಾರ ಆ ದೇಶವನ್ನು ಭಯೋತ್ಪಾದನೆಗೆ ಬಳಸುವುದರ ವಿರುದ್ಧ ಒಗ್ಗಟ್ಟಾಗಿರಬೇಕೆಂಬ ನಿರ್ಣಯವನ್ನು ಕೈಗೊಳ್ಳಲಾಗಿದೆ.
ಅಫ್ಘಾನಿಸ್ತಾನದಲ್ಲಿ ಮುಂದಿನ ದಿನಗಳಲ್ಲಿ ಬರುವ ಯಾವುದೇ ಸರ್ಕಾರ ಅಫ್ಘಾನಿಸ್ತಾನದಲ್ಲಿ ಅಸ್ತಿತ್ವಕ್ಕೆ ಬಂದರೆ, ಆ ಸರ್ಕಾರವೇನಾದರೂ ಭಯೋತ್ಪಾದನೆಯ ನೆಲೆಯಾದರೆ, ಆ ರಾಷ್ಟ್ರದ ವಿರುದ್ಧ ಸೇನೆಯನ್ನು ಬಳಸಲಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಎಚ್ಚರಿಕೆ ನೀಡಿದ್ದಾರೆ.
ಅಫ್ಘಾನಿಸ್ತಾನದ ವಿಚಾರವಾಗಿ ಜಿ-7, ನ್ಯಾಟೋ, ವಿಶ್ವಸಂಸ್ಥೆ ಮುಂತಾದ ಸಮೂಹಗಳೊಂದಿಗೆ ಸಭೆ ನಡೆಸಿದ ನಂತರ ಮಾತನಾಡಿದ ಜೋ ಬೈಡನ್, ಎಲ್ಲರೂ ತಾಲಿಬಾನ್ ವಿರುದ್ಧ ಹೋರಾಡಲು ಅದರ ನಡವಳಿಕೆಯನ್ನು ಆಧರಿಸಿ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಗುಟೆರಸ್ ಅವರು ಕೆಲವು ದಿನಗಳ ಹಿಂದೆ ಆಫ್ಘನ್ ಜನರಿಗೆ ಮಾನವೀಯ ನೆಲೆಗಟ್ಟಿನಲ್ಲಿ ಸಹಾಯಕ್ಕೆ ಧಾವಿಸಬೇಕೆಂದು ಮನವಿ ಮಾಡಿದ್ದರು. ಗುಟೆರಸ್ ಅವರ ಹೇಳಿಕೆಯನ್ನು ನಾವು ಬೆಂಬಲಿಸುತ್ತೇವೆ. ಆಫ್ಘನ್ ಜನರ ಸಹಾಯಕ್ಕೆ ಮುಂದಾಗುತ್ತೇವೆ ಎಂದು ಬೈಡನ್ ಸ್ಪಷ್ಟಪಡಿಸಿದ್ದಾರೆ.