ವಾಷಿಂಗ್ಟನ್(ಅಮೆರಿಕ): ಬೆಳಕಿನ ಹಬ್ಬ ದೀಪಾವಳಿಗೆ ದೇಶದಲ್ಲಿ ಸರ್ಕಾರಿ ರಜೆ ಇದೆ. ಆದರೆ ಅಮೆರಿಕದಲ್ಲೂ ಸಾರ್ವತ್ರಿಕ ರಜೆ ನೀಡಬೇಕು ಎಂದು ಅಲ್ಲಿನ ಜನಪ್ರತಿನಿಧಿಯಾಗಿರುವ ಕರೊಲಿನ್ ಬಿ.ಮಲೋನ್ ಅವರು ಒತ್ತಾಯಿಸಿದ್ದಾರೆ.
ಈ ಸಂಬಂಧ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ದೀಪಾವಳಿಯನ್ನು ಅಮೆರಿಕದಲ್ಲಿ ರಜಾದಿನವೆಂದು ಘೋಷಿಸುವ ಮಸೂದೆಯನ್ನು ಮಂಡಿಸಿದ್ದಾರೆ. ಕರೊಲಿನ್ ಬಿ.ಮಲೋನ್ ಅವರೇ ಈ ಮಾಹಿತಿ ಬಹಿರಂಗ ಪಡಿಸಿದ್ದು, ಸದನದಲ್ಲಿ ‘ದೀಪಾವಳಿ ದಿನದ ಕಾಯ್ದೆ’ ಮಸೂದೆ ಮಂಡನೆಯಾಗಿರುವುದು ಸಂತಸ ತಂದಿದೆ ಎಂದಿದ್ದಾರೆ. ಕತ್ತಲೆಯ ಮೇಲೆ ಬೆಳಕಿನ ಹಬ್ಬ ಮತ್ತು ಕೇಡಿನ ಮೇಲೆ ವಿಜಯವನ್ನು ಆಚರಿಸಲು ಇದು ವಿಶೇಷ ಸಂದರ್ಭವಾಗಿದೆ ಎಂದಿದ್ದಾರೆ.