ಕರ್ನಾಟಕ

karnataka

ETV Bharat / international

ಭಾರತಕ್ಕೆ 60 ಮಿಲಿಯನ್ ಕೋವಿಡ್​ ಲಸಿಕೆ ನೀಡಿ: ಅಮೆರಿಕ ಅಧ್ಯಕ್ಷರಿಗೆ ಮನವಿ - ಕೋವಿಡ್​ ಲಸಿಕೆಯ 60 ಮಿಲಿಯನ್ ಡೋಸ್

ಭಾರತಕ್ಕೆ ಕೊರೊನಾ ಲಸಿಕೆಯ 80 ಮಿಲಿಯನ್ ಡೋಸ್​ಗಳನ್ನು ನೀಡುವುದಾಗಿ ಬೈಡನ್​ ಘೋಷಿಸಿದ್ದು, ಈ ಪೈಕಿ ತಕ್ಷಣವೇ 60 ಮಿಲಿಯನ್ ಡೋಸ್​ ನೀಡಿ ಎಂದು ಯುಸ್​ ನಾಗರಿಕ ಹಕ್ಕುಗಳ ಕಾರ್ಯಕರ್ತ ರೆವ್ ಜೆಸ್ಸಿ ಜಾಕ್ಸನ್ ಹಾಗೂ ಯುಎಸ್​ ಕಾಂಗ್ರೆಸ್​​ನ ಸಂಸದ ರಾಜ ಕೃಷ್ಣಮೂರ್ತಿ ಕೋರಿದ್ದಾರೆ.

Jesse Jackson, Congressman Krishnamoorthi urge President Biden to rollout 60 million vaccine doses to India, assure help is on its way
ಬೈಡನ್​ಗೆ ಯುಎಸ್​ ಸಂಸದ, ನಾಗರಿಕ ಹಕ್ಕುಗಳ ಕಾರ್ಯಕರ್ತ ಒತ್ತಾಯ

By

Published : May 20, 2021, 9:41 AM IST

ವಾಷಿಂಗ್ಟನ್: ಕೊರೊನಾದಿಂದಾಗಿ ಭೀಕರ ಆರೋಗ್ಯ ಪರಿಸ್ಥಿತಿ ಎದುರಿಸುತ್ತಿರುವ ಭಾರತಕ್ಕೆ ಶೀಘ್ರವೇ ಕೋವಿಡ್​ ಲಸಿಕೆಯ 60 ಮಿಲಿಯನ್ ಡೋಸ್​ಗಳನ್ನು ಪೂರೈಸುವಂತೆ ಯುಸ್​ ನಾಗರಿಕ ಹಕ್ಕುಗಳ ಕಾರ್ಯಕರ್ತ ರೆವ್ ಜೆಸ್ಸಿ ಜಾಕ್ಸನ್ ಹಾಗೂ ಯುಎಸ್​ ಕಾಂಗ್ರೆಸ್​​ನ ಸಂಸದ ರಾಜ ಕೃಷ್ಣಮೂರ್ತಿ ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್​ಗೆ ಮನವಿ ಮಾಡಿದ್ದಾರೆ.

ಈ ಹಿಂದೆ ಭಾರತಕ್ಕೆ ಕೊರೊನಾ ಲಸಿಕೆಯ 80 ಮಿಲಿಯನ್ ಡೋಸ್​ಗಳನ್ನು ನೀಡುವುದಾಗಿ ಬೈಡನ್​ ಘೋಷಿಸಿದ್ದು, ಈ ಪೈಕಿ ತಕ್ಷಣವೇ 60 ಮಿಲಿಯನ್ ಡೋಸ್​ ನೀಡಿ ಎಂದು ಇವರು ಒತ್ತಾಯಿಸಿದ್ದು, ಅಮೆರಿಕದ ಸಹಾಯ ಶೀಘ್ರದಲ್ಲೇ ಸಿಗಲಿದೆ ಎಂದು ಭರವಸೆ ನೀಡಿದ್ದಾರೆ.

ಭಾರತವು ವಿಶ್ವದ ಎರಡನೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಕಾರಣ ಭಾರತದಲ್ಲಿನ ಕೊರೊನಾ ರೂಪಾಂತರವು ವಿಶ್ವದ ಇತರ ಭಾಗಗಳಿಗೆ ಹರಡಬಹುದೆಂದು ರೆವ್ ಜಾಕ್ಸನ್ ಆತಂಕ ವ್ಯಕ್ತಪಡಿಸಿದ್ದಾರೆ. ಭಾರತ ನಮ್ಮಂತೆಯೇ ಪ್ರಜಾಪ್ರಭುತ್ವ ಮತ್ತು ಮಿತ್ರ ರಾಷ್ಟ್ರ ಎಂದು ಮಾತ್ರವಲ್ಲ, ಈ ರೋಗವು ಸಾಂಕ್ರಾಮಿಕವಾಗಿದೆ. ಕೋವಿಡ್​ಗೆ ರಾಷ್ಟ್ರೀಯ ಗಡಿಗಳು ತಿಳಿದಿಲ್ಲ, ಜನಾಂಗ, ಧರ್ಮ ಅಥವಾ ಸಿದ್ಧಾಂತದ ತಾರತಮ್ಯ ಮಾಡುವುದಿಲ್ಲ. ಅದು ಎಲ್ಲೆಡೆ ಪಸರಿಸುತ್ತದೆ. ಮೊದಲು ನಾವು ನಮಗೆ ಮತ್ತು ನಂತರ ಜಗತ್ತಿಗೆ ಸಹಾಯ ಮಾಡಿದಾಗ ಮಾತ್ರ ವೈರಸ್​ ಅನ್ನು ನಿಯಂತ್ರಿಸಬಹುದು ಎಂದು ಜಾಕ್ಸನ್ ಹೇಳಿದ್ದಾರೆ.

ಇದನ್ನೂ ಓದಿ: ಭಾರತ - ಅಮೆರಿಕ ಸಂಬಂಧ ಬಲಪಡಿಸುವುದೇ ನಮ್ಮ ಗುರಿ: ಡೇನಿಯಲ್​ ಸ್ಮಿತ್​

2.83 ಲಕ್ಷ ಜನರು ಭಾರತದಲ್ಲಿ ಮಹಾಮಾರಿಗೆ ಬಲಿಯಾಗಿದ್ದು, ಅಲ್ಲಿ ಲಸಿಕೆಗಳ ಅವಶ್ಯಕತೆಯಿದೆ. ವೆಂಟಿಲೇಟರ್​​, ಆಮ್ಲಜನಕದ ಅಗತ್ಯವಿದೆ. ಹೆಚ್ಚಿನ ಜೀವ ಹಾನಿ ತಡೆಗಟ್ಟಲು ನಾವು ಹೆಚ್ಚಿನ ಸಹಾಯಹಸ್ತ ಚಾಚಬೇಕಿದೆ ಎಂದಯ ಬೈಡನ್​ ಸರ್ಕಾರಕ್ಕೆ ಜಾಕ್ಸನ್ ಕೋರಿದ್ದಾರೆ.

ರಾಜ ಕೃಷ್ಣಮೂರ್ತಿ ಅವರು, ಈ ಮೊದಲು ಭಾರತದಂತಹ ಕೋವಿಡ್​ ಪೀಡಿತ ದೇಶಗಳಿಗೆ ಅಸ್ಟ್ರಾಜೆನೆಕಾ ಲಸಿಕೆ ನೀಡುವಂತೆ ಬೈಡನ್​​ರಿಗೆ ಮನವಿ ಮಾಡಿದ್ದ ಭಾರತೀಯ ಮೂಲದ ಯುಎಸ್​ ಕಾಂಗ್ರೆಸ್​ ಸಂಸದರಾಗಿದ್ದಾರೆ. ಇದೀಗ ಮತ್ತೊಮ್ಮೆ ಭಾರತದ ಪರ ಮಾತನಾಡಿದ್ದು, ಶೀಘ್ರದಲ್ಲೇ 60 ಮಿಲಿಯನ್​ ಡೋಸ್​ಗಳನ್ನು ನೀಡುವಂತೆ ಒತ್ತಾಯಿಸಿದ್ದಾರೆ. ಇವರು ಕೊರೊನಾ ವೈರಸ್ ಬಿಕ್ಕಟ್ಟಿನ ಹೌಸ್ ಸೆಲೆಕ್ಟ್ ಉಪಸಮಿತಿಯ ಸದಸ್ಯರೂ ಆಗಿದ್ದಾರೆ.

For All Latest Updates

ABOUT THE AUTHOR

...view details