ಕರ್ನಾಟಕ

karnataka

ETV Bharat / international

ಕೋವಿಡ್​ನಿಂದಾಗಿ ವಿಶ್ವದಾದ್ಯಂತ ಸ್ಥಳೀಯ ಸಮುದಾಯಗಳು ಸಂಕಷ್ಟಕ್ಕೆ ಸಿಲುಕಿವೆ: ಯುಎನ್​ ತಜ್ಞರ ಕಳವಳ - ಸ್ಥಳೀಯ ಸಮುದಾಯಗಳು ಸಂಕಷ್ಟದಲ್ಲಿ

ತಮ್ಮ ಭೂಮಿಯನ್ನು, ಕೆಲಸವನ್ನು ಕಳೆದುಕೊಳ್ಳುತ್ತಿರುವ ಸ್ಥಳೀಯ ಸಮುದಾಯಗಳ ಜನರನ್ನು ಬಡತನ, ಅಪೌಷ್ಟಿಕತೆ, ಶುದ್ಧ ನೀರು ಮತ್ತು ನೈರ್ಮಲ್ಯದ ಕೊರತೆ, ವೈದ್ಯಕೀಯ ಸೇವೆಗಳಿಂದ ಹೊರಗಿಡುವುದು ಇನ್ನಷ್ಟು ಸಮಸ್ಯೆಗಳಿಗೆ ತುತ್ತಾಗಿಸುತ್ತಿವೆ ಎಂದು ಯುಎನ್​ವಿಶೇಷ ವರದಿಗಾರ ಜೋಸ್ ಫ್ರಾನ್ಸಿಸ್ಕೊ ​​ಕ್ಯಾಲಿ ಝೇ ಹೇಳಿದ್ದಾರೆ.

Indigenous community devastated
ಸ್ಥಳೀಯ ಸಮುದಾಯಗಳು ಸಂಕಷ್ಟದಲ್ಲಿ

By

Published : May 20, 2020, 9:19 AM IST

Updated : May 20, 2020, 9:33 AM IST

ಹೈದರಾಬಾದ್ :ವಿಶ್ವಸಂಸ್ಥೆಯ ವಿಶೇಷ ವರದಿಗಾರ ಜೋಸ್ ಫ್ರಾನ್ಸಿಸ್ಕೊ ​​ಕ್ಯಾಲಿ ಝೇ ವಿಶ್ವದಾದ್ಯಂತ ಸ್ಥಳೀಯ ಸಮುದಾಯಗಳ ಮೇಲೆ ಕೊರೊನಾ ವೈರಸ್​ ಬೀರಿರುವ ಪ್ರಭಾವದ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾತಾಡಿರುವ ಅವರು, ಕೊರೊನಾ ವೈರಸ್​​ನಿಂದ ಸ್ಥಳೀಯ ಸಮುದಾಯಗಳ ಮೇಲೆ ಯಾವ ರೀತಿಯ ಪ್ರಭಾವ ಬೀರಿದೆ ಎಂಬವುದರ ಬಗ್ಗೆ ಪ್ರತಿನಿತ್ಯ ಜಗತ್ತಿನ ವಿವಿಧ ಭಾಗಗಳಿಂದ ನಾನು ವರದಿಗಳನ್ನು ಸ್ವೀಕರಿಸುತ್ತಿದ್ದೇನೆ. ಈ ಪೈಕಿ ಎಲ್ಲಾ ವರದಿಗಳು ಸ್ಥಳೀಯ ಸಮುದಾಯಗಳು ಅರೋಗ್ಯ ಸಮಸ್ಯೆಗೆ ತುತ್ತಾಗಿದ್ದಾರೆ ಎಂಬುವುದಾಗಿ ಇರುವುದಿಲ್ಲ. ಇತರ ರೀತಿಯಲ್ಲೂ ಕೊರೊನಾ ಈ ಸಮುದಾಯಗಳ ಮೇಲೆ ಪ್ರಭಾವ ಬೀರುತ್ತಿದೆ ಎಂದಿದ್ದಾರೆ.

ತಮ್ಮ ಭೂಮಿಯನ್ನು, ಕೆಲಸವನ್ನು ಕಳೆದುಕೊಳ್ಳುತ್ತಿರುವ ಈ ಸಮುದಾಯಗಳ ಜನರನ್ನು ಬಡತನ, ಅಪೌಷ್ಟಿಕತೆ, ಶುದ್ಧ ನೀರು ಮತ್ತು ನೈರ್ಮಲ್ಯದ ಕೊರತೆ, ವೈದ್ಯಕೀಯ ಸೇವೆಗಳಿಂದ ಹೊರಗಿಡುವುದು ಇನ್ನಷ್ಟು ಸಮಸ್ಯೆಗಳಿಗೆ ತುತ್ತಾಗಿಸುತ್ತಿವೆ. ಕೆಲ ದೇಶಗಳಲ್ಲಿ ಹೇರಿರುವ ತರ್ತು ಪರಿಸ್ಥಿತಿಗಳು ಮತ್ತು ಮಿಲಿಟರಿ ಆಡಳಿತ ಈ ಸಮುದಾಯದ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸುತ್ತಿದೆ ಎಂದು ಹೇಳಿದ್ದಾರೆ.

ಸ್ಥಳೀಯ ಸಮುದಾಯಗಳ ಜನರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರಾಕರಿಸಲಾಗುತ್ತಿದೆ. ಅವರ ಕೆಲಸ, ಜಮೀನುಗಳನ್ನು ಕಿತ್ತುಕೊಂಡು ಆಕ್ರಮಣ ನಡೆಸಲಾಗುತ್ತಿದೆ ಎಂದು ಝೇ ವಿಶಾದ ವ್ಯಕ್ತಪಡಿಸಿದ್ದಾರೆ.

Last Updated : May 20, 2020, 9:33 AM IST

ABOUT THE AUTHOR

...view details