ನ್ಯೂಯಾರ್ಕ್:ಕಾಶ್ಮೀರ ವಿಚಾರದಲ್ಲಿ ಜಾಗತಿಕ ನಾಯಕರನ್ನು ಮೆಚ್ಚಿಸುವಲ್ಲಿ ತಾನು ಸೋತಿರುವುದಾಗಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಒಪ್ಪಿಕೊಂಡಿದ್ದಾರೆ.
ಕಾಶ್ಮೀರ ಸಮಸ್ಯೆ ಬಗ್ಗೆ ಜಾಗತಿಕ ಸಮುದಾಯದ ನಡೆಯ ಬಗ್ಗೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಬೇಸರ ವ್ಯಕ್ತಪಡಿಸಿದ್ದಾರೆ. ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿ ಬಳಿಕ ವಿವಿಧ ವೇದಿಕೆಗಳಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ್ದರೂ ನಿರೀಕ್ಷಿತ ಬೆಂಬಲ ದೊರೆತಿಲ್ಲ.
ಉಗ್ರರನ್ನು ಸದೆ ಬಡಿಯುತ್ತಿರುವ ಪ್ರಧಾನಿ ಮೋದಿ 'ಭಾರತದ ಪಿತಾಮಹ'... ಟ್ರಂಪ್ ಬಣ್ಣನೆ
ಎಂಭತ್ತು ಲಕ್ಷ ಯುರೋಪಿಯನ್ನರು ಇಲ್ಲವೇ ಯಹೂದಿಗಳನ್ನು ಅಥವಾ ಎಂಟು ಅಮೆರಿಕರನ್ನು ಬಂಧನದಲ್ಲಿಟ್ಟರೆ ಜಾಗತಿಕ ನಾಯಕರ ಪ್ರತಿಕ್ರಿಯೆ ಇದೇ ರೀತಿ ಇರಲಿದೆಯೇ..? ಕಾಶ್ಮೀರದಲ್ಲಿ ಯಾವುದೇ ರೀತಿಯ ಒತ್ತಡಗಳಿಲ್ಲ, ಆದರೂ ಮೋದಿ ಸರ್ಕಾರ ಸೇನೆ ನಿಯೋಜನೆ ಮಾಡಿದೆ. ಯಾವುದೇ ಒತ್ತಡ ಇಲ್ಲದಿದ್ದರೂ ಕಾಶ್ಮೀರದಲ್ಲಿ ಒಂಭತ್ತು ಲಕ್ಷ ಸೇನೆ ಏನು ಮಾಡುತ್ತಿದೆ..? ಕರ್ಫ್ಯೂ ಹಿಂಪಡೆದ ಬಳಿಕ ಅಲ್ಲಿ ಏನಾಗಲಿದೆ ಎನ್ನುವ ಅರಿವೂ ಯಾರಿಗೂ ಇಲ್ಲ. ಈ ಎಲ್ಲವನ್ನೂ ಕಾಶ್ಮೀರಿಗಳು ಸ್ವೀಕರಿಸುತ್ತಾರೆ ಎಂದು ನಂಬುತ್ತೀರಾ ಎಂದು ಇಮ್ರಾನ್ ಖಾನ್ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಹೇಳಿದ್ದಾರೆ.
ಪಾಕಿಸ್ತಾನ ಪರಿಪರಿಯಾಗಿ ಕಾಶ್ಮೀರ ಸಮಸ್ಯೆಯನ್ನು ವಿಶ್ವ ನಾಯಕರಿಗೆ ಅರ್ಥೈಸಲು ಮುಂದಾದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಸದ್ಯ ಇದೇ ಹತಾಶೆಯಲ್ಲಿ ಪಾಕ್ ಪ್ರಧಾನಿ ಮಾತನಾಡಿದ್ದಾರೆ.
ಮತ್ತೆ ಭಾರತ - ಪಾಕ್ ಮಾತುಕತೆ ಮಧ್ಯಸ್ಥಿಕೆ ಪ್ರಸ್ತಾಪಿಸಿದ ದೊಡ್ಡಣ್ಣ!
ಭಾರತದ ಆರ್ಥಿಕ ಬಲ ಹಾಗೂ ಜಾಗತಿಕ ಸ್ಥಾನಮಾನದಲ್ಲಿ ಪಾಕಿಸ್ತಾನದ ಮಾತುಗಳು ಮೂಲೆಗುಂಪಾಗಿದೆ ಎನ್ನುವ ಮಾತನ್ನೂ ಖಾನ್ ಒಪ್ಪಿಕೊಂಡಿದ್ದಾರೆ.