ಫೋರ್ಟ್ ಲಾಡರ್ಡೇಲ್( ಅಮೆರಿಕ):ಇರಾಕ್ ಮತ್ತು ಅಫ್ಘಾನಿಸ್ತಾನದಲ್ಲಿ ಗನ್ಮ್ಯಾನ್ ಆಗಿ ಸೇವೆ ಸಲ್ಲಿಸುತ್ತಿದ್ದ ವ್ಯಕ್ತಿ ತನ್ನ ಕುಟುಂಬದ ನಾಲ್ವರು ಸದಸ್ಯರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ ಎಂದು ಪೋಲ್ಕ್ ಕೌಂಟಿ ಶೆರಿಫ್ ಗ್ರೇಡಿ ಜಡ್ಡ್ ಹೇಳಿದ್ದಾರೆ. ಮೂರು ತಿಂಗಳ ಕಂದಮ್ಮ ಸೇರಿ ನಾಲ್ವರು ಈ ಘಟನೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
33 ವರ್ಷದ ಬ್ರಿಯಾನ್ ರಿಲೆ ಎಂಬಾತ ಇರಾಕ್ ಮತ್ತು ಅಫ್ಘಾನಿಸ್ತಾನದಲ್ಲಿ ಗನ್ಮ್ಯಾನ್ ಆಗಿ ಸೇವೆ ಸಲ್ಲಿಸುತ್ತಿದ್ದ. ಆದರೆ, ಇತ್ತೀಚಿನ ದಿನಗಳಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಈತ, ತನ್ನ ಗೆಳತಿಯೊಂದಿಗೆ ತಾನು ದೇವರೊಂದಿಗೆ ನೇರವಾಗಿ ಸಂವಹನ ಮಾಡುತ್ತೇನೆ ಎಂದು ಪದೇ ಪದೆ ಹೇಳುತ್ತಿದ್ದನಂತೆ.
ಇನ್ನು ಪೊಲೀಸರು ಆರೋಪಿಯಿಂದ ಗನ್ ವಶಪಡಿಸಿಕೊಳ್ಳಲು ಗುಂಡಿನ ಚಕಮಕಿ ನಡೆಸಿದ್ದರು. ಆತನನ್ನು ಸೆರೆಹಿಡಿದ ಬಳಿಕ ಸ್ಥಳ ಪರಿಶೀಲನೆ ನಡೆಸಿದ ಪೊಲೀಸರಿಗೆ 11 ವರ್ಷದ ಬಾಲಕಿ, 33 ವರ್ಷದ ಮಹಿಳೆ, 3 ತಿಂಗಳ ಗಂಡು ಮಗು, 62 ವರ್ಷದ ವೃದ್ಧೆಯ ಮೃತದೇಹ ಮನೆಯಲ್ಲಿ ಕಂಡು ಬಂದಿದೆ.
ಅಥೆನ್ಸ್( ಇಟಲಿ):ಇನ್ನೊಂದೆಡೆ ಅಥೆನ್ಸ್ನ ಜಾರ್ಜಿಯಾದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಏಳು ಜನರು ಗಾಯಗೊಂಡಿದ್ದು, ವ್ಯಕ್ತಿಯೊರ್ವ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅಥೆನ್ಸ್ ಪಟ್ಟಣದಲ್ಲಿ ಭಾನುವಾರ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಅಥೆನ್ಸ್-ಕ್ಲಾರ್ಕ್ ಕೌಂಟಿ ಪೊಲೀಸರು ತಿಳಿಸಿದ್ದಾರೆ.
ಇನ್ನು ಗಾಯಾಳುಗಳು ಜೀವಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸ್ ಲೆಫ್ಟಿನೆಂಟ್ ಶಾನ್ ಬಾರ್ನೆಟ್ ಹೇಳಿದ್ದಾರೆ. ಗುಂಡಿನ ದಾಳಿ ನಡೆಸಿದ ಶಂಕಿತ ಯುವಕನನ್ನು ಪೊಲೀಸರು ಹುಡುಕಾಡುತ್ತಿದ್ದಾರೆ. ಇನ್ನು ಆರೋಪಿಯ ಬಗ್ಗೆ ಮಾಹಿತಿ ನೀಡುವರಿಗೆ 1000 ಡಾಲರ್ ನೀಡುವುದಾಗಿ ಕ್ರೈಮ್ ಸ್ಟಾಪರ್ಸ್ ಘೋಷಿಸಿದ್ದಾರೆ ಎಂದು ಅಥೆನ್ಸ್ ಬ್ಯಾನರ್-ಹೆರಾಲ್ಡ್ ವರದಿ ಮಾಡಿದೆ.