ಕರ್ನಾಟಕ

karnataka

ETV Bharat / international

ನೇರಳಾತೀತ ಬೆಳಕು ಹಾಯಿಸಿ ಕೊರೊನಾ ವೈರಸ್​ ನಾಶ: ಅಧ್ಯಯನದಿಂದ ಸಾಬೀತು

ಜಗತ್ತಿನಾದ್ಯಂತ ಕೊರೊನಾ ಮಹಾಮಾರಿಗೆ ಲಸಿಕೆಯನ್ನು ಅಭಿವೃದ್ಧಿಪಡಿಸುವಲ್ಲಿ ಹಲವು ಪ್ರಯತ್ನಗಳು ನಡೆಯುತ್ತಿರುವ ಮಧ್ಯೆಯೇ ಅಮೆರಿಕಾದ ಕೊಲಂಬಿಯಾ ವಿವಿಯ ಸಂಶೋಧಕರು ಹೊಸ ಆವಿಷ್ಕಾರವನ್ನು ಮಾಡಿದ್ದಾರೆ.

Far-UVC light
ಸಾಂದರ್ಭಿಕ ಚಿತ್ರ

By

Published : Jun 30, 2020, 12:27 AM IST

ನ್ಯೂಯಾರ್ಕ್: ಕೊಲಂಬಿಯಾ ವಿಶ್ವವಿದ್ಯಾಲಯದ ಸಂಶೋಧಕರು ಕೊರೊನಾ ವೈರಸ್​​ ಬಗ್ಗೆ ನೂತನ ಅಧ್ಯಯನವೊಂದನ್ನ ನಡೆಸಿದ್ದು, ನೇರಳಾತೀತ ಬೆಳಕಿನ ನಿರ್ದಿಷ್ಟ ತರಂಗಾಂತರಕ್ಕೆ ಗಾಳಿಯಲ್ಲಿ ಹರಡುವ ವೈರಾಣುಗಳಲ್ಲಿ 99.9ರಷ್ಟು ಸಾವನ್ನಪ್ಪಿವೆ ಎಂದು ಕಂಡುಕೊಂಡಿದ್ದಾರೆ.

ಕೊಲಂಬಿಯಾ ಯೂನಿವರ್ಸಿಟಿ ಇರ್ವಿಂಗ್ ಮೆಡಿಕಲ್ ಸೆಂಟರ್​​ನಲ್ಲಿ ಅಧ್ಯಯನ ನಡೆಸಿದ ಸಂಶೋಧಕರು ಸಾಮಾನ್ಯ ಕೊರೊನ ವೈರಸ್​​​ಗಳನ್ನು ನಾಶಪಡಿಸಲು ಮಿಸ್ಟಿಂಗ್ ಸಾಧನ ಬಳಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಸಾಧನವನ್ನು ಬಳಸಿ ಯುವಿಸಿ-ಕಿರಣಗಳನ್ನು ಗಾಳಿಯ ಮೂಲಕ ರವಾನಿಸಲಾಯಿತು. ಪರಿಣಾಮ ಈ ಬೆಳಕಿಗೆ ಒಡ್ಡಿಕೊಂಡ ನಂತರ ಶೇ 99.9ರಷ್ಟು ಗಾಳಿಯಲ್ಲಿ ಹರಡುವ ವೈರಸ್‌ಗಳು ಸಾವನ್ನಪ್ಪಿವೆ ಎಂದು ಸಂಶೋಧಕರು ಹೇಳಿದ್ದಾರೆ.

ಸಂಶೋಧಕರ ಅಂದಾಜಿನ ಪ್ರಕಾರ, ಪ್ರಸ್ತುತ ನಿಯಂತ್ರಕದ ಮಿತಿಯಲ್ಲಿ ಯುವಿಸಿ ಕಿರಣದ ಬೆಳಕನ್ನು ಬಳಸುವುದರಿಂದ ಸುಮಾರು ಎಂಟು ನಿಮಿಷಗಳಲ್ಲಿ ಶೇ 90ರಷ್ಟು ವೈರಸ್‌ಗಳನ್ನು ಕೊಲ್ಲಲು ಸಾಧ್ಯವಾಗುತ್ತದೆ ಎಂದಿದ್ದಾರೆ.

ಸೂಕ್ತ ಮುನ್ನೆಚ್ಚರಿಕೆಯ ಕ್ರಮದೊಂದಿಗೆ ಈ ಬೆಳಕನ್ನು ಮನುಷ್ಯರ ಮೇಲೂ ಪ್ರಯೋಗಿಸಹುದಾಗಿದ್ದು, ಆಸ್ಪತ್ರೆ, ಬಸ್, ವಿಮಾನ, ಶಾಲೆ, ರೆಸ್ಟೋರೆಂಟ್, ಕಚೇರಿ, ಜಿಮ್ ಮತ್ತು ಚಿತ್ರಮಂದಿರಗಳಂತಹ ಸಾರ್ವಜನಿಕ ಸ್ಥಳಗಳಲ್ಲಿಯೂ ಇದನ್ನು ಬಳಸಿಕೊಳ್ಳಬಹುದು ಎಂದು ಸಂಶೋಧಕರು ಸೂಚಿಸಿದ್ದಾರೆ.

ಅಲ್ಲದೇ ಇದು ಫೇಸ್-ಮಾಸ್ಕ್ ಧರಿಸಿದಂತೆಯೇ ಕೊರೊನಾ ಉಲ್ಬಣಿಸುವುದನ್ನು ತಪ್ಪಿಸುವಲ್ಲಿ ಸಹಕಾರಿಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ABOUT THE AUTHOR

...view details