ಕರ್ನಾಟಕ

karnataka

ETV Bharat / international

ಕುಸಿದ  ಮನೆ ಅವಶೇಷದಡಿ ಸಿಲುಕಿದ್ದ ಶ್ವಾನ.. ಆರು ದಿನಗಳ ಬಳಿಕವೂ ಬದುಕುಳಿದ ಬಡಜೀವ!

6 ದಿನಗಳ ಹಿಂದೆ ಭೂಕುಸಿತ ವೇಳೆ ಮನೆಯೊಂದು ಕುಸಿದು ಬಿದ್ದಿತ್ತು. ಆದರೆ, ಮನೆಯ ಕುಸಿತದಿಂದಾಗಿ ಅವಶೇಷಗಳಡಿ ನಾಯಿಯೊಂದು ಸಿಲುಕಿದ್ದು, 6 ದಿನಗಳ ನಂತರ ಶ್ವಾನವನ್ನು ರಕ್ಷಿಸಿರುವ ಘಟನೆ ಅಮೆರಿಕದ ವಾಷಿಂಗ್ಟನ್​ನಲ್ಲಿ ನಡೆದಿದೆ.

Dog rescued from collapsed house, Dog rescued from collapsed house in Seattle, Seattle dog rescue news, ಕುಸಿದು ಬಿದ್ದ ಮನೆಯಿಂದ ಶ್ವಾನ ರಕ್ಷಣೆ, ಸಿಯಾಟಲ್​ನಲ್ಲಿ ಕುಸಿದು ಬಿದ್ದ ಮನೆಯಿಂದ ಶ್ವಾನ ರಕ್ಷಣೆ, ಸಿಯಾಟಲ್​ನಲ್ಲಿ ನಾಯಿ ರಕ್ಷಿಸಿದ ಸುದ್ದಿ,
ಆರು ದಿನಗಳ ಬಳಿಕ ಬದುಕಿತು ಬಡಜೀವ

By

Published : Jan 15, 2022, 7:47 AM IST

ಸಿಯಾಟಲ್: ವಾಷಿಂಗ್ಟನ್​ ರಾಜ್ಯದ ಸಿಯಾಟಲ್​ ನಗರದಲ್ಲಿ ಕಳೆದ ವಾರ ಭೂಕುಸಿತ ಸಂಭವಿಸಿತ್ತು. ಈ ವೇಳೆ, ಕುಸಿದು ಬಿದ್ದ ಮನೆಯೊಳಗೆ ಶ್ವಾನವೊಂದು ಸಿಲುಕಿತ್ತು. ಆರು ದಿನಗಳಿಂದ ಸಿಲುಕಿದ್ದ ಶ್ವಾನ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಓದಿ:

ಕಪ್ಪು ಲ್ಯಾಬ್ರಡಾರ್ ಶ್ವಾನವನ್ನು ರಕ್ಷಿಸಿದ ಬಳಿಕ ‘ನನ್ನ ಮಗು.. ನನ್ನ ಮಗು..’ ಎಂದು ಮನೆಯ ಮಾಲೀಕ ತಬ್ಬಿಕೊಂಡು ಆನಂದಬಾಷ್ಪ ಸುರಿಸಿದರು. ಸಿಯಾಟಲ್​ನ ಅಗ್ನಿಶಾಮಕ ಇಲಾಖೆ ಗುರುವಾರ ಟ್ವಿಟರ್‌ನಲ್ಲಿ ಈ ಘಟನೆಯ ಬಗ್ಗೆ ಬರೆದುಕೊಂಡಿದ್ದಾರೆ.

ಘಟನಾ ಸ್ಥಳದಲ್ಲಿದ್ದ ಪಶುವೈದ್ಯರು ಬದುಕುಳಿದ ಶ್ವಾನದ ಆರೋಗ್ಯ ಪರೀಕ್ಷಿಸಿದರು. ಈ ವೇಳೆ ಮನೆ ಮಾಲೀಕ ಫ್ರಿಟ್ಸ್ ಅವರನ್ನು ನೋಡಿದ ಶ್ವಾನ ಸ್ಯಾಮಿ ತನ್ನ ಬಾಲವನ್ನು ಅಲ್ಲಾಡಿಸಿ ನಾನಿನ್ನೂ ಇದ್ದೇನೆ ಎಂಬುದನ್ನು ತೋರಿಸಿತು. ಬದುಕುಳಿದ ಶ್ವಾನ ಕಂಡು ಮಾಲೀಕರು ಹರ್ಷಚಿತ್ತರಾದರು.

ABOUT THE AUTHOR

...view details