ಕರ್ನಾಟಕ

karnataka

ETV Bharat / international

ಬೆಂಬಲಿಗರಿಗೆ ದರ್ಶನ ಕೊಟ್ಟ ಯುಎಸ್ ಅಧ್ಯಕ್ಷ: 2 ಬಾರಿ ಟ್ರಂಪ್ ರಕ್ತದಲ್ಲಿನ ಆಮ್ಲಜನಕದ ಮಟ್ಟ ಕುಸಿತ - ಅಮೆರಿಕ ಅಧಯಕ್ಷ ಡೊನಾಲ್ಡ್ ಟ್ರಂಪ್

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಕ್ತದಲ್ಲಿನ ಆಮ್ಲಜನಕದ ಮಟ್ಟವು ಎರಡು ಬಾರಿ ಇದ್ದಕ್ಕಿದ್ದಂತೆ ಕುಸಿದಿತ್ತು. ಆದರೂ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ. ಇಂದು ಅವರನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.

rump's blood oxygen level dropped twice recently
ಬೆಂಲಿಗರಿಗೆ ದರ್ಶನ ಕೊಟ್ಟ ಯುಎಸ್ ಅಧ್ಯಕ್ಷ

By

Published : Oct 5, 2020, 7:46 AM IST

Updated : Oct 5, 2020, 8:22 AM IST

ವಾಷಿಂಗ್ಟನ್: ಕೊರೊನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿಯಮಗಳನ್ನು ಮೀರಿ ಆಸ್ಪತ್ರೆ ಹೊರಗೆ ಜಮಾಯಿಸಿದ್ದ ತಮ್ಮ ಬೆಂಬಲಿಗರನ್ನು ನೋಡಲು ಆಗಮಿಸಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ.

ವಾಷಿಂಗ್ಟನ್ ಬಳಿಯ ವಾಲ್ಟರ್ ರೀಡ್ ಮಿಲಿಟರಿ ವೈದ್ಯಕೀಯ ಕೇಂದ್ರದಲ್ಲಿ ಗುಂಡು ನಿರೋಧಕ ವಾಹನದಲ್ಲಿ ಕುಳಿತ ಟ್ರಂಪ್, ಒಳಗಿನಿಂದಲೇ ಬೆಂಬಲಿಗರತ್ತ ಕೈ ಬೀಸಿದರು.

ಆಸ್ಪತ್ರೆಯಿಂದ ಹೊರಡುವ ಸ್ವಲ್ಪ ಸಮಯದ ಮೊದಲು, ಟ್ರಂಪ್ ಟ್ವಿಟರ್​ನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದರು. ಬೀದಿಗಳಲ್ಲಿ ಹೊರಗೆ ಕಾಯುತ್ತಿರುವ ದೇಶಭಕ್ತರಿಗೆ ನಾವು ಸ್ವಲ್ಪ ಆಶ್ಚರ್ಯವನ್ನು ನೀಡುತ್ತೇವೆ ಎಂದು ನಾನು ಭಾವಿಸುತ್ತೇನೆ ಎಂದಿದ್ದರು.

ವಾಲ್ಟರ್ ರೀಡ್ ಆಸ್ಪತ್ರೆಯ ಹೊರಗಿರುವ ತಮ್ಮ ಬೆಂಬಲಿಗರನ್ನು ಟ್ರಂಪ್ ಮೆಚ್ಚಿದ್ದರು. "ಆಸ್ಪತ್ರೆಯ ಹೊರಗಿರುವ ಎಲ್ಲಾ ಅಭಿಮಾನಿಗಳು ಮತ್ತು ಬೆಂಬಲಿಗರನ್ನು ನಾನು ನಿಜವಾಗಿಯೂ ಪ್ರಶಂಸಿಸುತ್ತೇನೆ. ಅವರು ನಿಜವಾಗಿಯೂ ನಮ್ಮ ದೇಶವನ್ನು ಪ್ರೀತಿಸುತ್ತಾರೆ ಮತ್ತು ನಾವು ಅದನ್ನು ಹಿಂದೆಂದಿಗಿಂತಲೂ ದೊಡ್ಡದಾಗಿಸುತ್ತಿರುವುದನ್ನು ನೋಡುತ್ತಿದ್ದೇವೆ ಎಂದು ಟ್ರಂಪ್ ಟ್ವೀಟ್ ಮಾಡಿದ್ದರು.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಕ್ತದಲ್ಲಿನ ಆಮ್ಲಜನಕದ ಮಟ್ಟವು ಎರಡು ಬಾರಿ ಇದ್ದಕ್ಕಿದ್ದಂತೆ ಕುಸಿದಿತ್ತು. ಆದರೂ ಅವರ ಆರೋಗ್ಯ ಸುಧಾರಿಸುತ್ತಿದೆ. ಇಂದು ಅವರನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.

Last Updated : Oct 5, 2020, 8:22 AM IST

ABOUT THE AUTHOR

...view details