ಲುಕೆವಿಲ್ಲೆ(ಅಮೆರಿಕ) :ಅರಿಜೋನಾ - ಮೆಕ್ಸಿಕೋ ಗಡಿಯಲ್ಲಿ ಅಂದರೆ ಲುಕೆವಿಲ್ಲೆ ಪಶ್ಚಿಮದಿಂದ 17 ಮೈಲಿ ದೂರದಲ್ಲಿ ಏಳು ವರ್ಷದ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಮೃತ ಬಾಲಕಿಯನ್ನು ಭಾರತೀಯ ಮೂಲದ ಗುರುಪ್ರೀತ್ ಕೌರ್ ಎಂದು ಗುರ್ತಿಸಲಾಗಿದೆ. ತನ್ನ ತಾಯಿ ಹಾಗೂ ಇತರ ನಾಲ್ವರೊಂದಿಗೆ ಪಯಣಿಸುತ್ತಿದ್ದ ಬಾಲಕಿಯನ್ನು ಸ್ಮಗ್ಲರ್ಗಳು ಅಂತಾರಾಷ್ಟ್ರೀಯ ಗಡಿ ರೇಖೆ ಬಳಿ ಬಿಟ್ಟಿದ್ದರು.
ಆಘಾತಕಾರಿ ವಿಷಯ ಎಂದರೆ. ಬಾಲಕಿ ಗುರ್ಪ್ರೀತ್ ತಾಪಮಾನ ತಡೆಯಲಾಗದೇ ಸಾವನ್ನಪ್ಪಿರುವುದಾಗಿ ವೈದ್ಯಕೀಯ ಮೂಲಗಳು ತಿಳಿಸಿವೆ. ಲುಕೆವಿಲ್ಲೆಯಲ್ಲಿ ತಾಪಮಾನ 108 ಫ್ಯಾರನ್ಹೀಟ್ ದಾಟಿತ್ತು ಎನ್ನಲಾಗಿದೆ. ಈ ಹಿನ್ನೆಲೆ ಗುರುಪ್ರೀತ್ ಹೈಪರ್ಥರ್ಮಿಯಾದಿಂದ ಮೃತಪಟ್ಟಿದ್ದಾಳೆ ಎಂದು ಪಿಸಿಒಎಮ್ ನ ಚೀಫ್ ಮೆಡಿಕಲ್ ಆಫೀಸರ್ ಗ್ರೆಗ್ ಹೆಸ್ ತಿಳಿಸಿದ್ದಾರೆ.
ಗುರುಪ್ರೀತ್ ಹಾಗೂ ಅವಳ ತಾಯಿ ಸೇರಿ 5 ಭಾರತೀಯ ವಲಸೆಗಾರರ ಗುಂಪನ್ನು ಸ್ಮಗ್ಲರ್ ಗಳು ಜನನಿಬಿಡ ಪ್ರದೇಶವಾದ ಲುಕೆಮಿಯಾದಿಂದ 17 ಕಿ.ಮೀ ದೂರದಲ್ಲಿರುವ ಟಸ್ಕನ್ ನೈರುತ್ಯ ಭಾಗದಲ್ಲಿ ಮಂಗಳವಾರ ಸುಮಾರು ಬೆಳಗ್ಗೆ 10 ಗಂಟೆ ವೇಳೆಗೆ ಇಳಿಸಿ ಹೋಗಿದ್ದರು. ಮೃತ ಗುರುಪ್ರೀತ್ ತಾಯಿ ಮಗಳನ್ನು ಮತ್ತೊಬ್ಬ ಮಹಿಳೆಯೊಂದಿಗೆ ಅಲ್ಲಿಯೇ ಬಿಟ್ಟು ಉಳಿದವರೊಂದಿಗೆ ನೀರು ಹುಡುಕಿಕೊಂಡು ಹೋಗಿದ್ದರು.