ಲಾಸ್ ಏಂಜಲೀಸ್: ಕೊರೊನಾ ವೈರಸ್ ಎಷ್ಟು ಭೀತಿ ಸೃಷ್ಟಿಸಿದೆ ಎಂದರೆ, ಸೀನುವಿಕೆಯೂ ಈಗ ಕಷ್ಟವಾಗಿ ಮಾರ್ಪಟ್ಟಿದೆ. ಕೆಲವರ ಸೀನುವಿಕೆ ಹಾಗೂ ಕೆಮ್ಮಿನಿಂದ ಸಹ ಪ್ರಯಾಣಿಕರು ಅಸಮಾಧಾನಗೊಂಡಿದ್ದರಿಂದ ಅಮೆರಿಕ ವಿಮಾನವೊಂದು ವಾಪಸ್ ತೆರಳಿ ಸುದ್ದಿಯಾಗಿದೆ.
ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾದ ಸೀನು: ವಿಮಾನ ಪ್ರಯಾಣ ಅರ್ಧದಲ್ಲೇ ಮೊಟಕು
ಕೊರೊನಾ ವೈರೆಸ್ ಸಾರ್ವಜನಿಕರಲ್ಲಿ ಎಷ್ಟರ ಮಟ್ಟಿಗೆ ಆತಂಕವನ್ನುಂಟು ಮಾಡಿದೆ ಎಂಬುದಕ್ಕೆ ಇಲ್ಲೊಂದು ಉತ್ತಮ ನಿದರ್ಶನ ದೊರೆತಿದೆ. ಹೌದು ಈಗಲ್- ಕೊಲೊರಾಡೋದಿಂದ ನ್ಯೂಯಾರ್ಕ್ ಮತ್ತು ನ್ಯೂ ಜೆರ್ಸಿಗೆ ಹೊರಟಿದ್ದ ವಿಮಾನದಲ್ಲಿ ಕೆಲವರು ಸೀನುವಿಕೆ ಹಾಗೂ ಕೆಮ್ಮಿನಿಂದ ಬಳಲುತ್ತಿದ್ದರಿಂದ ಸಹ ಪ್ರಯಾಣಿಕರು ಅಸಮಾಧಾನಗೊಂಡು ಅಮೆರಿಕ ವಿಮಾನವೊಂದು ತುರ್ತು ಲ್ಯಾಂಡಿಂಗ್ ಮಾಡಿದ ಘಟನೆ ಅಮೆರಿಕದಲ್ಲಿ ನಡೆದಿದೆ.
ಈಗಲ್- ಕೊಲೊರಾಡೋದಿಂದ ನ್ಯೂಯಾರ್ಕ್ ಮತ್ತು ನ್ಯೂ ಜೆರ್ಸಿಗೆ ಹೊರಟಿದ್ದ ವಿಮಾನದಲ್ಲಿ ಕೆಲವರು ಸೀನುವಿಕೆ ಹಾಗೂ ಕೆಮ್ಮಿನಿಂದ ಬಳಲುತ್ತಿದ್ದರಿಂದ ಸಹ ಪ್ರಯಾಣಿಕರು ಕಿರಿಕಿರಿ ಅನುಭವಿಸಿದರು.
ಹೀಗಾಗಿ ಆ ವಿಮಾನಗಳನ್ನ ಡೆನೋವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡಲಾಯಿತು. ಆದರೆ ಈ ಬಗ್ಗೆ ಮಾತನಾಡಿರು ಏರ್ಲೈನ್ಸ್ ವೈದ್ಯಕೀಯ ತುರ್ತು ಪರಿಸ್ಥಿತಿ ಘೋಷಿಸುವ ಯಾವುದೇ ಪರಿಸ್ಥಿತಿ ಇರಲಿಲ್ಲ. ಯಾರು ಕೆಮ್ಮು ಮತ್ತು ಸೀನಿನ ಅಲರ್ಜಿಯಿಂದ ಬಳಲುತ್ತಿದ್ದರೋ ಅವರನ್ನ ವಿಮಾನದಲ್ಲಿ ಇರಿಸಲಾಗಿತ್ತು ಎಂದು ಏರ್ಲೈನ್ಸ್ ಮಾಹಿತಿ ನೀಡಿದೆ. ಈ ಸಂಬಂಧ ಕಾನೂನು ಜಾರಿ ನಿರ್ದೇಶನಾಲಯದ ಗಮನಕ್ಕೆ ತರಲಾಯಿತು.