ನವದೆಹಲಿ:ಕಾಶ್ಮೀರ ಸಮಸ್ಯೆಯನ್ನು ಅಂತಾರಾಷ್ಟ್ರೀಯ ಸಮುದಾಯದ ಮುಂದೆ ತರಲು ಚೀನಾ ಮತ್ತೊಂದು ಹೊಸ ಪ್ರಯತ್ನಕ್ಕೆ ಕೈಹಾಕಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಕಾಶ್ಮೀರ ಸಮಸ್ಯೆಯನ್ನು ಎತ್ತುವಂತೆ ಚೀನಾ ಮತ್ತೆ ತಕರಾರು ತೆಗೆಯುವ ಪ್ರಯತ್ನ ನಡೆಸಿದೆ. ಆದರೆ, ಈ ಪ್ರಯತ್ನವನ್ನು ಭಾರತದ ಎಲ್ಲ ಸದಸ್ಯ ರಾಷ್ಟ್ರಗಳು ವಿಫಲಗೊಳಿಸುವ ಸಾಧ್ಯತೆಯಿದೆ. ಇದನ್ನು ವಿರೋಧಿಸಲು ಕೆಲ ರಾಷ್ಟ್ರಗಳು ಒಗ್ಗೂಡಿವೆ ಎನ್ನಲಾಗುತ್ತಿದೆ.
ಕಾಶ್ಮೀರ ಸಮಸ್ಯೆಯನ್ನು ಮತ್ತೊಮ್ಮೆ ಪ್ರಬಲವಾಗಿ ಎತ್ತುಹಿಡಿಯಲು ಚೀನಾ ಯತ್ನಿಸುತ್ತಿದೆ ಎಂಬುದನ್ನು ಫ್ರಾನ್ಸ್ ಗಮನಿಸಿದೆ. ಆದ್ರೆ ಚೀನಾ ನಡೆಯನ್ನು ವಿರೋಧಿಸುವುದಾಗಿ ಎಂದು ಫ್ರೆಂಚ್ ರಾಜತಾಂತ್ರಿಕ ಮೂಲಗಳು ತಿಳಿಸಿವೆ. ಕಣಿವೆ ರಾಜ್ಯದ ವಿಷಯದಲ್ಲಿ 'ಫ್ರಾನ್ಸ್ ನಿಲುವು ಬದಲಾಗಿಲ್ಲ, ಈ ಹಿಂದಿನಂತೆ ಸ್ಪಷ್ಟವಾಗಿದೆ' ಎಂದು ಮೂಲಗಳು ತಿಳಿಸಿವೆ.
ಆಫ್ರಿಕನ್ ದೇಶಕ್ಕೆ ಸಂಬಂಧಿಸಿದ ವಿಷಯದ ಬಗ್ಗೆ ಚರ್ಚಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆ ಕರೆದಿತ್ತು. ಈ ವೇಳೆ 'ಯಾವುದೇ ಇತರ ವ್ಯವಹಾರ ಅಂಶಗಳ' ಕಾರ್ಯಸೂಚಿಯಡಿ ಚೀನಾ, ಕಾಶ್ಮೀರ ವಿಷಯದ ಬಗ್ಗೆ ಉದ್ದೇಶಪೂರ್ವಕವಾಗಿ ಮನವಿ ಮಾಡಿತು.
ಕಾಶ್ಮೀರ ಸಮಸ್ಯೆಯನ್ನು ದ್ವಿಪಕ್ಷೀಯವಾಗಿ ಇತ್ಯರ್ಥಪಡಿಸಬೇಕು ಎಂಬುದನ್ನು ಹಲವು ಸಂದರ್ಭಗಳಲ್ಲಿ ಭಾರತ ಹೇಳುತ್ತಿದೆ. ಕಳೆದು ತಿಂಗಳು ನಡೆದ ಸಭೆಯಲ್ಲಿ ಚೀನಾ, ಕಾಶ್ಮೀರ ವಿಷಯ ಪ್ರಸ್ತಾಪಿಸಿದಾಗಲೂ ರಷ್ಯಾ, ಅಮೆರಿಕ ಮತ್ತು ಇಂಗ್ಲೆಂಡ್ ಅದರ ಪ್ರಯತ್ನವನ್ನು ವಿಫಲಗೊಳಿಸಿದ್ದವು.