ವಾಷಿಂಗ್ಟನ್(ಅಮೆರಿಕ): ಚೀನಾ ಇತ್ತೀಚೆಗೆ ನೂರಾರು ಹೈಪರ್ಸಾನಿಕ್ ಮಿಸೈಲ್ಗಳನ್ನು ಪರೀಕ್ಷೆ ನಡೆಸಿದ್ದು, ಆತಂಕಕಾರಿ ವಿಚಾರ ಎಂದು ಅಮೆರಿಕ ರಕ್ಷಣಾ ಅಧಿಕಾರಿಯೊಬ್ಬರು ಹೇಳಿದ್ದು, ಅಮೆರಿಕದ ಉನ್ನತ ರಕ್ಷಣಾ ಅಧಿಕಾರಿಗಳ ವಲಯದಲ್ಲಿ ಸಾಕಷ್ಟು ಚರ್ಚೆಗೆ ಒಳಗಾಗಿದೆ ಎಂದು ಡೈಲಿ ಮೇಲ್ ವರದಿ ಮಾಡಿದೆ.
ರಕ್ಷಣಾ ಲೇಖಕರ ಒಕ್ಕೂಟದ ಸಭೆಯಲ್ಲಿ ಮಾತನಾಡಿದ ಅಮೆರಿಕದ ಎರಡನೇ ಉನ್ನತ ರಕ್ಷಣಾಧಿಕಾರಿ ಜಾನ್ ಹೈಟನ್ ಅಮೆರಿಕ ಬೆರಳೆಣಿಕೆಯಷ್ಟು ಹೈಪರ್ಸಾನಿಕ್ ಮಿಸೈಲ್ಗಳನ್ನು ಪರೀಕ್ಷೆ ಮಾಡಿದೆ. ಚೀನಾ ಮಿಸೈಲ್ ಟೆಸ್ಟ್ಗಳಲ್ಲಿ ಅಮೆರಿಕವನ್ನು ಹಿಂದಿಕ್ಕಿರುವುದು ಆತಂಕಕಾರಿ ಎಂದು ಹೇಳಿರುವುದು ವರದಿಯಾಗಿದೆ.
ಸಿಂಗಲ್ ಡಿಜಿಟ್ನಲ್ಲಿ ಪರೀಕ್ಷೆ ಮತ್ತು ನೂರಾರು ಪರೀಕ್ಷೆಗಳ ಮಧ್ಯೆ ಸಾಕಷ್ಟು ವ್ಯತ್ಯಾಸವಿದೆ. ಈ ಬಗ್ಗೆ ನೀವು ಚಿಂತನೆ ನಡೆಸಬೇಕಿದೆ ಎಂದು ಜಾನ್ ಹೈಟನ್ ರಕ್ಷಣಾ ಲೇಖಕರ ಒಕ್ಕೂಟದ ಸಭೆಯಲ್ಲಿ ಲೇಖಕರಿಗೆ ಮನವಿ ಮಾಡಿದ್ದಾರೆ. ಹೈಪರ್ ಸಾನಿಕ್ ವೆಪನ್ ಸಿಸ್ಟಂನಲ್ಲಿ ಕಾಣಿಸಿಕೊಂಡಿದ್ದ ದೋಷದಿಂದಾಗಿ ಅಮೆರಿಕ ಉಡಾವಣೆ ಮಾಡಿದ್ದ ಹೈಪರ್ಸಾನಿಕ್ ಕ್ಷಿಪಣಿ ವಿಫಲವಾಯಿತು ಎಂದು ಹೈಟನ್ ಸ್ಪಷ್ಟಪಡಿಸಿದ್ದಾರೆ.
ಆಗಸ್ಟ್ ತಿಂಗಳಲ್ಲಿ ವಿಶ್ವದ ಹಲವು ದೇಶಗಳ ಕಣ್ತಪ್ಪಿಸಿ ಚೀನಾ ಹೈಪರ್ಸಾನಿಕ್ ಕ್ಷಿಪಣಿಯ ಪರೀಕ್ಷೆ ನಡೆಸಿದ್ದು, ಇತ್ತೀಚೆಗಷ್ಟೇ ಆ ವಿಚಾರ ಬಹಿರಂಗವಾಗಿತ್ತು. ಚೀನಾ ಉಡಾವಣೆ ಮಾಡಿದ ಕ್ಷಿಪಣಿ ಸ್ವಲ್ಪದರಲ್ಲಿ ವಿಫಲವಾಗಿದ್ದರೂ ಅದೊಂದು ಅತ್ಯುತ್ತಮ ಸಾಧನೆಯಾಗಿತ್ತು ಎಂದು ತಿಳಿದು ಬಂದಿದೆ. ಈ ವಿಚಾರ ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳ ಆತಂಕಕ್ಕೆ ಕಾರಣವಾಗಿದೆ.
ಇದನ್ನೂ ಓದಿ:ವ್ಯಾಟಿಕನ್ ಸಿಟಿ: ಪೋಪ್ ಫ್ರಾನ್ಸಿಸ್ ಭೇಟಿಯಾಗಲಿರುವ ಪ್ರಧಾನಿ ಮೋದಿ